ಐಸ್ ಕ್ರೀಂ ಬಟ್ಟಲಿನಲ್ಲಿ ಮೂತ್ರ ಹೊಯ್ದ ಮಾಲೀಕ

ಪ್ರಕರಣ ಬಹಿರಂಗವಾಗುತ್ತಿದ್ದಂತೆ ಗೋವಾ ರಾಜ್ಯ ಆಹಾರ ಮತ್ತು ಔಷಧಾಡಳಿತ ಇಲಾಖೆಯು Goa food and drugs administration (FDA) department ಸದರಿ Ice Cream parlourಗೆ ಬೀಗ ಜಡಿದಿದೆ. ಪಣಜಿಯ ಪಾಂಡಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಪ್ರಕರಣ ಬೆಳಕಿಗೆ ಬಂದಿದ್ದಾರೂ ಹೇಗೆ ಗೊತ್ತಾ!? ಪಾರ್ಲರಿನ ಉದ್ಯೋಗಿಯೊಬ್ಬ ಐಸ್ ಕ್ರೀಂ ಅನ್ನು ಸರ್ವ್ ಮಾಡುವ ಬಟ್ಟಲಿನೊಳಕ್ಕೆ ಅಂಗಡಿಯ ಮಾಲೀಕ ಉಚ್ಚೆ ಹೊಯ್ಯುತ್ತಿರುವುದನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಮಾಡಿದ್ದಾನೆ. ಅದನ್ನೇ ಸಾಕ್ಷಿಯಾಗಿ ಮಾಲೀಕನ ಮುಖಕ್ಕೆ ಹಿಡಿದು, ನಂತರ ಆತನನ್ನು ಪೊಲೀಸರಿಗೆ ಹಿಡುದುಕೊಟ್ಟಿದ್ದಾನೆ.
ಅದಕ್ಕೂ ಮುನ್ನ ಮಾಲೀಕ ಐಸ್ ಕ್ರೀಂ ಬಟ್ಟಲಿನಲ್ಲಿ ಉದ್ದೇಶಪೂರ್ವಕವಾಗಿ ಮೂತ್ರ ವಿಸರ್ಜಿಸುತ್ತಿರುವ ವಿಡಿಯೋವನ್ನು ಸ್ಥಳೀಯ cable TV channelಗೆ ನೀಡಿ, ಅದು ಸಾರ್ವಜನಿಕವಾಗುವಂತೆ ನೋಡಿಕೊಂಡಿದ್ದಾನೆ. ವಿಡಿಯೋ ನೋಡಿದ FDA ನಿರ್ದೇಶಕ ಸಲೀಂ ವೆಲ್ಜಿ ಆಘಾತಗೊಂಡಿದ್ದು, ತಕ್ಷಣ Ice Cream parlourಗೆ ಬೀಗ ಜಡಿದಿದ್ದಾರೆ.












Click it and Unblock the Notifications