ಬಾಲೋಟೆಲ್ಲಿ ಅದ್ಭುತ ಗೋಲು, ಇಟಲಿಗೆ ಜಯ

ಮೊದಲಾರ್ಧ ಕೊನೆಗೊಳ್ಳುವ ವೇಳೆಗೆ ಆ್ಯಂಟೊನಿಯೊ ಕ್ಯಾಸ್ಸನೊ ಬಾರಿಸಿದ ಗೋಲಿನಿಂದ ಇಟಲಿ ಮುನ್ನಡೆ ಪಡೆದುಕೊಂಡಿತು. ಆದರೆ, ವಿರಾಮದ ಬಳಿಕ ಆಟ ಮುಂದುವರಿದಾಗ ಇಟಲಿಗಿಂತ ಐರ್ಲೆಂಡ್ ಕೊಂಚ ಮುನ್ನಡೆ ಪಡೆಯಿತು.
ಪಂದ್ಯ ಕೊನೆಗೊಳ್ಳಲು ಕ್ಷಣಗಣನೆ ಆರಂಭವಾದಾಗ ಮಿಂಚಿನಂತೆ ಬಂದ ಮಾರಿಯೊ ಬಾಲೊಟೆಲ್ಲಿ ಬಾರಿಸಿದ ಅದ್ಭುತ ಗೋಲಿನಿಂದ ಇಟಲಿ ಸುಲಭ ಗೆಲುವು ಸಾಧಿಸಿ ಅಂತಿಮ ಎಂಟರ ಘಟ್ಟ ಪ್ರವೇಶಿಸಿದೆ.
ಇಟಲಿಯ ವೇಗದ ಮುಂದೆ ಐರ್ಲೆಂಡ್ ಮಂಕಾಯಿತು. 38ನೇ ನಿಮಿಷದಲ್ಲಿ ಕಾಸ್ಸಾನೋ ಬಾರಿಸಿದ ಗೋಲಿನಿಂದ ಐರ್ಲೆಂಡ್ ಗೆ ಹಿನ್ನಡೆಯಾಯಿತು. ಇದರ ಬಳಿಕ ಐರ್ಲೆಂಡ್ ಚೇತರಿಸುವ ಲಕ್ಷಣ ತೋರಿಸಲೇ ಇಲ್ಲ.
ದ್ವಿತೀಯಾರ್ಧದ ಆರಂಭದಲ್ಲೇ ಇಟಲಿ ತನ್ನ ಮುನ್ನಡೆಯನ್ನು ದ್ವಿಗುಣಗೊಳಿಸಬಹುದಿತ್ತು. ಆದರೆ ಕ್ಯಾಸ್ಸನೊ ಹತ್ತು ಯಾರ್ಡ್ ದೂರದಿಂದ ಬಾರಿಸಿದ ಚೆಂಡು ಗೋಲು ಬಾಕ್ಸಿನೊಳಗೆ ತಲುಪುವ ಮೊದಲೇ ದಿಕ್ಕು ತಪ್ಪಿ ಹೋಯಿತು. ದ್ವಿತೀಯಾರ್ಧದಲ್ಲಿ ಶೇನ್ ಲಾಂಗ್ ಮೈದಾನಕ್ಕಿಳಿದು ಐರ್ಲೆಂಡ್ ಆಟಕ್ಕೆ ವೇಗ ನೀಡಿದರೂ ಗೋಲು ಬಾರಿಸಲು ಮಾತ್ರ ಸಾಧ್ಯವಾಗಲಿಲ್ಲ.












Click it and Unblock the Notifications