• search

ಡಚ್ಚರಿಗೆ ಡಿಚ್ಚಿ ಹೊಡೆದ ಜರ್ಮನಿಯ ಗೊಮೆಜ್

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Gomez scores twice as Germany down Holland
  ಖಾರ್ಕಿವ್, ಜು.14: ಮೊದಲಾರ್ಧದಲ್ಲಿ ಮಾರಿಯೊ ಗೋಮೆಜ್ ಬಾರಿಸಿದ ಎರಡು ಗೋಲುಗಳ ನೆರವಿನಿಂದ ಜರ್ಮನಿ ಯುರೋ ಕಪ್ ನ ಬಿ ಗುಂಪಿನ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ 2-1ರ ಗೆಲುವು ದಾಖಲಿಸಿದೆ. ಈ ಗೆಲುವಿನ ಮೂಲಕ ಜರ್ಮನಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಅವಕಾಶ ಹೆಚ್ಚಿದೆ.

  ಗ್ರೂಪ್ ಆಫ್ ಡೆತ್ ನಿಂದ ಹೊರಬೀಳುವ ಮೊದಲ ತಂಡವಾಗಿ ಟೂರ್ನಿಯಿಂದ ನೆದರ್ಲೆಂಡ್ ಹೊರಬೀಳುವ ಸಾಧ್ಯತೆಯಿದೆ. ಜೂ.18ರಂದು ನಡೆಯಲಿರುವ ಕೊನೆಯ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ ಭಾರಿ ಅಂತರದ ಗೆಲುವು ಸಾಧಿಸಿರೂ ನೆದರ್ಲೆಂಡ್ ಗೆ ಕ್ವಾರ್ಟರ್ ಫೈನಲ್ ಪ್ರವೇಶ ಕಷ್ಟಕರ.

  ಡಚ್ಚರ ಆರಂಭ ಶೂರತ್ವ ಮುಂದುವರೆಯಲಿಲ್ಲ. ರಾಬಿನ್ ವ್ಯಾನ್ ಪರ್ಸಿ ಕೂಡಾ ಆರಂಭದಲ್ಲಿ ಎರಡು ಅವಕಾಶಗಳನ್ನು ಕೈಚೆಲ್ಲಿದರು. ಜರ್ಮನಿಯ ಸ್ಟ್ರೈಕರ್ ಗೋಮೆಜ್ 24ನೇ ನಿಮಿಷದಲ್ಲಿ ಬಸ್ಟಿನ್ ನೀಡಿದ ಪಾಸಿನಲ್ಲಿ ಎದುರಾಳಿಗಳ ರಕ್ಷಣಾ ಪಾಳಯವನ್ನು ಚೂರು ಮಾಡಿ ಮೊದಲ ಗೋಲು ಬಾರಿಸಿದರು. ಮತ್ತೊಂದು ಗೋಲನ್ನು ಮುಲ್ಲರ್ ಮತ್ತು ಬಸ್ಟಿನ್ ನೆರವಿನಿಂದ 34ನೇ ನಿಮಷದಲ್ಲಿ ಬಾರಿಸಿದರು.

  73ನೇ ನಿಮಿಷದಲ್ಲಿ ಗೋಲು ಬಾರಿಸುವ ಅವಕಾಶವನ್ನು ಪಡೆದ ಪರ್ಸಿ ನೆದರ್ಲೆಂಡ್ ಆಸೆ ಜೀವಂತ ಇರಿಸಿದರು. ನೆದರ್ಲೆಂಡ್ ಗೆ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಇನ್ನಿಲ್ಲದ ಸಾಹಸಪಟ್ಟರೂ ಜರ್ಮನಿ ಮುಂದೆ ಆಟ ಸಾಗಲಿಲ್ಲ.

  ಹಾಲೆಂಡ್ ಸೋಲಿಗೆ ಕಾರಣವೇನು?: ವಿಶ್ವಕಪ್ ಫೈನಲ್ ತಲುಪಿದ್ದ ಹಾಲೆಂಡ ತಂಡದಲ್ಲಿ ಇದ್ದ ಉತ್ಸಾಹ ಈಗ ಬತ್ತಿ ಹೋಗಿದೆ. ವಾನ್ ಪರ್ಸಿ ಆಡುವುದೇ ಅನುಮಾನ ಎನ್ನಲಾಗಿತ್ತು, ಹಂಟಲೇರ್ ಗೆ ಸ್ಥಾನ ಕಲ್ಪಿಸುವ ಮಾತು ಎದ್ದಿತ್ತು.

  ಆದರೆ, ಕೊನೆ ಡಚ್ಚರ ಮಾನ ಉಳಿಸಿದ್ದು ವಾನ್ ಪರ್ಸಿ. ಸ್ನೈಡರ್ ವೈಫಲ್ಯ, ರಾಬೆನ್ ಗಾಯದ ಸಮಸ್ಯೆ ನಡುವೆ ವಾವ್ ಪರ್ಸಿ ದಾಳಿನ ನೇತೃತ್ವ ವಹಿಸಿಕೊಂಡರೂ ಪ್ರಬಲ ರಕ್ಷಣಾ ಪಡೆ ಹೊಂದಿದ್ದ ಜರ್ಮನಿಯನ್ನು ಬಗ್ಗು ಬಡಿಯಲು ಸಾಧ್ಯವಾಗಲಿಲ್ಲ.

  ನೆದರ್ಲೆಂಡ್ 1 - 2 ಜರ್ಮನಿ
  7(6) ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) 9(3)
  6 ಕಾರ್ನರ್ಸ್ 5
  11 ಫೌಲ್ಸ್ 7
  1 ಆಫ್ ಸೈಡ್ 4
  2 ಹಳದಿ ಕಾರ್ಡ್ 1
  0 ಕೆಂಪು ಕಾರ್ಡ್ 0

  ಬಿ ಗುಂಪಿನಲ್ಲಿ ಜರ್ಮನಿ ಹಾಗೂ ಡೆನ್ಮಾರ್ಕ್ ಉತ್ತಮ ಅಂಕಗಳನ್ನು ಹೊಂದಿದ್ದು, ಮುಂದಿನ ಹಂತಕ್ಕೆ ತೇರ್ಗಡೆ ಹೊಂದುವ ನಿರೀಕ್ಷೆಯಿದೆ. ಜೂ.18ರಂದು ಜರ್ಮನಿ ದಾಳಿ ಎದುರಿಸಲು ಡೆನ್ಮಾರ್ಕ್ ಸಜ್ಜಾಗಿದ್ದು, ಜರ್ಮನಿಗೆ ಟೂರ್ನಿಯ ಮೊದಲ ಸೋಲುಣಿಸಲು ತಂತ್ರ ಹೆಣೆಯುತ್ತಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Germany are on the verge of the Euro 2012 quarter-finals following their 2-1 win over Holland as Mario Gomez scored twice, while the Dutch are heading for a first-round exit.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more