ರಷ್ಯಾ ಗೆಲುವಿನ ಓಟಕ್ಕೆ ಪೋಲೆಂಡ್ ಬ್ರೇಕ್

ಗ್ರೀಸ್ ಮೇಲೆ ಡ್ರಾ ಸಾಧಿಸಿದ್ದ ಪೋಲೆಂಡ್ ತಂಡ 2 ಅಂಕಗಳನ್ನು ಕಲೆಹಾಕಿದ್ದಾರೆ. ಗ್ರೀಸ್ ತಂಡ 1 ಅಂಕ ಮಾತ್ರಗಳಿಸಿ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿದೆ.
ಜೂ.17ರಂದು ಚೆಕ್ ರಿಪಬ್ಲಿಕ್ ವಿರುದ್ಧ ಪೋಲೆಂಡ್ ಆಡಲಿದ್ದು, ಪೋಲೆಂಡ್ ಗೆದ್ದರೆ ಗ್ರೀಸ್ ಮನೆಗೆ ಗ್ಯಾರಂಟಿ. ರಷ್ಯಾ ಹಾಗೂ ಗ್ರೀಸ್ ಕೂಡಾ ಸೆಣಸಲಿದ್ದು ಪೋಲೆಂಡ್ ಪಂದ್ಯದ ಫಲಿತಾಂಶದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.
ಚೆಕ್ ವಿರುದ್ಧ 4-1 ಅಂತರದ ಭರ್ಜರಿ ಆಟ ಪ್ರದರ್ಶಿಸಿದ ರಷ್ಯಾ ತಂಡದ ಗೆಲುವಿನ ಓಟ ತಡೆಗಟ್ಟುವಲ್ಲಿ ಪೋಲೆಂಡ್ ಸಫಲವಾಯಿತು. ರಷ್ಯಾದ ಪರ ಅಲಾನ್ ಜಗೊವಫ್ ಪಂದ್ಯದ ಮೊದಲಾರ್ಧದಲ್ಲಿ ಗೋಲು ಗಳಿಸಿದರೆ, ಪೊಲೆಂಡ್ ನಾಯಕ ಕೂಬಾ ಬ್ಲಾಸ್ಜ್ಸ್ ಸಿಜ್ಕೊವ್ ಸ್ಕಿ ದ್ವಿತಿಯಾರ್ಧದಲ್ಲಿ ಗೋಲು ಗಳಿಸುವ ಮೂಲಕ ಸಮನಾಗಿಸಿದರು.
ಈ ಪಂದ್ಯವನ್ನು ಸೋತಿದ್ದರೆ ಪೋಲೆಂಡ್ ಯುರೋ ಅಭಿಯಾನ ಮುಕ್ತಾಯವಾಗುತ್ತಿತ್ತು, ಆದರೆ, ಉತ್ತಮ ಆಟ ಪ್ರದರ್ಶಿಸಿದೆ. ಪಂದ್ಯ ಡ್ರಾ ಆಗಿದ್ದು, ತೃಪ್ತಿಕೊಟ್ಟರೂ, ಈ ಪಂದ್ಯ ಗೆಲ್ಲುವ ನಿರೀಕ್ಷೆಯಿತ್ತು. ನಮ್ಮ ಆರಂಭ ಉತ್ತಮವಾಗಿತ್ತು, ಆದರೆ, ದ್ವೀತಿಯಾರ್ಧದಲ್ಲಿ ಪೋಲೆಂಡ್ ಅದ್ಭುತ ಆಟ ಪ್ರದರ್ಶಿಸಿಬಿಟ್ಟಿತು ಎಂದು ರಷ್ಯಾ ನಾಯಕ ಆರ್ಶವಿನ್ ಪಂದ್ಯದ ನಂತರ ಪ್ರತಿಕ್ರಿಯಿಸಿದರು.












Click it and Unblock the Notifications