ಪೊಲೀಸರು ಇನ್ಮುಂದೆ ಪೇಪರ್ ಚಲನ್ ಕೊಡೊಲ್ಲ

police-wont-use-paper-challans-only-blackberry
ಬೆಂಗಳೂರು, ಜೂನ್ 10: ಹೌದು ಪೊಲೀಸರು ಇನ್ಮುಂದೆ ಜುಲ್ಮಾನೆ ವಿಧಿಸಿದಾಗ ಅದಕ್ಕೆ ರಸೀತಿಯಾಗಿ ಪೇಪರ್ ಚಲನ್ ಕೊಡೊಲ್ಲ. ಇದು BlackBerry ಮಹಾತ್ಮೆ. ಕಾರ್ಬನ್ ಪೇಪರ್ ಚಲನ್ ನೀಡುವ ಬದಲು BlackBerry ಮತ್ತು Bluetooth ಸಾಮರ್ಥ್ಯದೊಂದಿಗೆ ಪ್ರಿಂಟರ್ ಮೂಲಕ ಸಣ್ಣ ರಸೀತಿ ಕೊಡುತ್ತಾರಷ್ಟೆ. ಇದು ಜೂನ್ 11ರಿಂದ ಅಂದರೆ ನಾಳೆಯಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ.

ಆರಂಭದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಈ ಪ್ರಯೋಗ ಯಶಸ್ವಿಯಾಗುತ್ತಿದ್ದಂತೆ ಇಡೀ ರಾಜ್ಯದಲ್ಲಿ ಈ gadgetಗಳನ್ನು ಅಳವಡಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್ ಮತ್ತು ಇನ್ಸ್‌ಪೆಕ್ಟರ್ ಶ್ರೇಣಿಯ ಸುಮಾರು 250 ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿಗೆ ಈ gadget ಬಳಕೆಗೆ ಅನುಮತಿ ನೀಡಲಾಗಿದೆ.

ಈ gadgetಗಳನ್ನು ನೇರವಾಗಿ State Data Centreಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ನೂತನ Director-General and Inspector-General of Police ಎಲ್ ಆರ್ ಪಚುವಾ ತಿಳಿಸಿದ್ದಾರೆ.

ಏನುಪಯೋಗ: ಈ gadgetಗಳ ಬಳಕೆಯಿಂದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ಪೊಲೀಸರು ಲಂಚಕ್ಕೆ ಕೈಯೊಡ್ಡುವುದು ತಪ್ಪುತ್ತದೆ. ಪೊಲೀಸರು ಇಷ್ಟಾನುಸಾರ ದಂಡ ಎಳೆಯುವುದಕ್ಕೆ ಕೊಕ್ಕೆ ಬೀಳಲಿದೆ. ಪಾರದರ್ಶಕತೆ ತಾಂಡವವಾಡಲಿದೆ. ರಾಜಧಾನಿ ಬೆಂಗಲೂರಿನಲ್ಲಿ ಪ್ರಸ್ತುತ 750 ಪೊಲೀಸ್ ಅಧಿಕಾರಿಗಳು BlackBerry ಬಳಸುತ್ತಿದ್ದಾರೆ.

ನಾಳೆಯಿಂದ ರಾಜ್ಯದ ಇತರೆ ಪೊಲೀಸರಿಗೂ ಈ ಸಾಧನಗಳನ್ನು ವಿತರಿಸಲಾಗುವುದು ಎಂದು ನೂತನ ಡಿಐಜಿ ಪಚುವಾ ತಿಳಿಸಿದ್ದಾರೆ. ದೇಶದ್ಲಿ ಇಂತಹ ವ್ಯವಸ್ಥೆ ಅಳವಡಿಸಿಕೊಂಡ ಏಕಮಾತ್ರ ಪೊಲೀಸರೆಂದರೆ ನಮ್ಮ ಕರ್ನಾಟಕದವರು ಎಂಬ ಹೆಗ್ಗೆಳಿಕೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+