ಭಾರತದ ರಾಷ್ಟ್ರಪತಿ ಆಯ್ಕೆ ಹೇಗೆ?

president-of-india-election-procedure-how
ನವದೆಹಲಿ, ಜೂನ್ 9: ಕೇಂದ್ರ ವಿತ್ತ ಸಚಿವ, ಹಿರಿಯ ಕಾಂಗ್ರೆಸ್ ನಾಯಕ, ಬೆಂಗಾಲಿ ಬಾಬು ಪ್ರಣಬ್ ಮುಖರ್ಜಿ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಮುಂದಿನ ವಾರ ಕಣಕ್ಕಿಳಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸಕಲ ಸಜ್ಜಾಗಿದೆ. ರಾಷ್ಟ್ರದ 14 ನೆಯ ರಾಷ್ಟ್ರಪತಿ ಆಯ್ಕೆ ಸಂಬಂಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತು ಪ್ರಣಬ್ ಅವರು ದೆಹಲಿಯ ನಾರ್ತ್ ಬ್ಲಾಕ್ ಕಚೇರಿಯಲ್ಲಿ ಶುಕ್ರವಾರ ಚರ್ಚೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಭಾರತದಲ್ಲಿ ರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ ಎಂಬುದರತ್ತ ಒಂದು ಸಂಕ್ಷಿಪ್ತ ನೋಟ:

ಭಾರತದ ರಾಜಧಾನಿ ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಅಲಂಕಾರಿಕ ಸಿಂಹಾಸನ ಯಾರ ಪಾಲಾಗಲಿದೆ ಎಂಬ ಕುತೂಹಲವನ್ನು ಪಕ್ಕಕ್ಕಿಟ್ಟು ಅಸಲಿಗೆ ಅವರ ಆಯ್ಕೆ ಹೇಗಾಗುತ್ತದೆ ಎಂಬುದನ್ನು ನೊಡಿದಾಗ...

ಭಾರತದ ಮೊದಲ ಪ್ರಜೆಯನ್ನು ದೇಶದಲ್ಲಿನ ಅಷ್ಟೂ ಶಾಸಕರು ಮತ್ತು ಸಂಸದರು ಆಯ್ಕೆ ಮಾಡುತ್ತಾರೆ. ಪ್ರಸ್ತುತ ದೇಶದಲ್ಲಿ 776 ಸಂಸದರು ಮತ್ತು 4120 ಮಂದಿ ಶಾಸಕರು ಇದ್ದಾರೆ. ರಾಷ್ಟ್ರಪತಿ ಆಯ್ಕೆಗಾಗಿ ಈ ಜನಪ್ರತಿನಿಧಿಗಳಿಗೆ ನಿರ್ದಿಷ್ಟ ಮತ ಮೌಲ್ಯವನ್ನು ನಿಗದಿಪಡಿಲಾಗುತ್ತದೆ.

ದೇಶಾದ್ಯಂತ ಸಂಸದರು ಸಮಾನ ರೀತಿಯಲ್ಲಿ ತಲಾ 708 ಮತ ಮೌಲ್ಯ ಹೊಂದಿದ್ದರೆ ಶಾಸಕರ ಮತ ಮೌಲ್ಯ ಬದಲಾಗುತ್ತಾ ಸಾಗುತ್ತದೆ. ಅದು ರಾಜ್ಯದಿಂದ ರಾಜ್ಯಕ್ಕೆ ಮಾರ್ಪಡುತ್ತದೆ. ಇಲ್ಲಿ ಸಂಸದರ ಜಾತಿಮತ, ಯಾವ ಪಕ್ಷವನ್ನು ಅವರು ಪ್ರತಿನಿಧಿಸುತ್ತಿದ್ದಾರೆ, ಅವರು ಹೆಣ್ಣೋ, ಗಂಡೋ ಎಂಬುದೆಲ್ಲ ಗೌಣವಾಗುತ್ತದೆ.

ಎಲ್ಲ ಸಂಸದರ ಒಟ್ಟು ಮತ ಮೌಲ್ಯ 5,49,408 (776x708). ಹಾಗೆಯೇ, 4120 ಶಾಸಕರ ಒಟ್ಟು ಮತ ಮೌಲ್ಯ 5,49,474. ಇದರ ಸಂಗ್ರಹಿತ ಮೊತ್ತ 10,98, 882. ಯಾರು ಹೆಚ್ಚು ಮತಗಳನ್ನು ಗಳಿಸುತ್ತಾರೋ ಅಥವಾ ಎಲ್ಲ ಸಂಸದರು, ಶಾಸಕರು ರಾಷ್ಟ್ರಪತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲು ಬಯಸಿದರೆ ಆಗ ಈ ಮತ ಮೌಲ್ಯ ಗೌಣವಾಗಿ ರಾಷ್ಟ್ರಪತಿ ಸ್ಥಾನದ ಮೌಲ್ಯ ಅಗಣಿವಾಗುತ್ತದೆ. ಹಾಗಾಗುತ್ತದಾ? ಏಕೆಂದರೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದುವರೆಗೂ ರಾಷ್ಟ್ರಪತಿ ಅವಿರೋಧವಾಗಿ ಆಯ್ಕೆಯಾಗಿಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+