ಆಂಧ್ರ ಎಂಎಲ್ಎ ಅಭ್ಯರ್ಥಿಯ ಆಸ್ತಿ 6800 ಕೋಟಿ!

ap-vidhan-sabha-by-polls-deepak-reddy-rs-6800-crore
ಅನಂತಪುರ, ಜೂನ್ 9: ಆಂಧ್ರ ಪ್ರದೇಶದಲ್ಲಿ ಇದೇ 12ರಂದು ವಿಧಾನಸಭೆಗೆ ಉಪಚುನಾವಣೆಗಳು ನಡೆಯಲಿವೆ. ಅದರಲ್ಲಿ ಜಿಲ್ಲೆಯ ರಾಯದುರ್ಗಾ ಕ್ಷೇತ್ರವೂ ಒಂದು. ಆದರೆ ಈ ಕಣದಲ್ಲಿನ ಅಭ್ಯರ್ಥಿಯೊಬ್ಬ ಇಡೀ ದೇಶದ ಗಮನ ಸೆಳೆದಿದ್ದಾನೆ. ಏಕೆಂದರೆ ಇಡೀ ದೇಶದಲ್ಲಿ ಈ ಇದೇ ವ್ಯಕ್ತಿ ಅತ್ಯಧಿಕ ಶ್ರೀಮಂತ ಅಭ್ಯರ್ಥಿಯಾಗಿದ್ದಾನೆ.

ಈತನ ಹೆಸರು ಜಿ. ದೀಪಕ್ ರೆಡ್ಡಿ. ಈತನ ಆಸ್ತಿಪಾಸ್ತಿ ಮೌಲ್ಯ ಕೇವಲ 6,800 ಕೋಟಿ ರುಪಾಯಿ. ಇಂತಿಪ್ಪ ರೆಡ್ಡಿಗಾರು ಹೇಳುವುದೇನು ಗೊತ್ತೆ. ನಾನೊಬ್ಬ ಪ್ರಮಾಣಿಕ. ಅದಕ್ಕೇ ಪ್ರಮಾಣಿಕವಾಗಿ ನನ್ನ ಆಸ್ತಿ ಪ್ರಮಾಣವನ್ನು ಬಹಿರಂಗವಾಗಿ ಘೋಷಿಸಿಕೊಂಡಿದ್ದೇನೆ ಎಂದು ಎದೆಯುಬ್ಬಿಸಿಕೊಂಡು ಹೇಳಿದ್ದಾರೆ. ಲಕ್ಷ್ಮಿ ಪುತ್ರ ರೆಡ್ಡಿಯ ಬಗ್ಗೆ ಏನು ಹೇಳಬೇಕೋ ಸದ್ಯಕ್ಕೆ ತೋಚುತ್ತಿಲ್ಲ.

ಅಂದಹಾಗೆ 39 ವರ್ಷದ ದೀಪಕ್ ರೆಡ್ಡಿ ಪ್ರತಿನಿಧಿಸುತ್ತಿರುವುದು ತೆಲುಗು ದೇಶಂ (TDP) ಪಕ್ಷವನ್ನು. ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಶಾಸನಬದ್ಧ ಆಫಿಡವಿಟ್ ನಲ್ಲಿ ( ಆಯೋಗವು 2004ರಿಂದ ಇಂತಹ ಸಂಪ್ರದಾಯ ಹುಟ್ಟುಹಾಕಿದೆ) ದೀಪಕ್ ರೆಡ್ಡಿ ಆಸ್ತಿಯ ವಿವರ ನೀಡಿದ್ದಾರೆ. ದೀಪಕ್ ರೆಡ್ಡಿ ಉದ್ಯಮ ಗಣಿಗಾರಿಕೆ ಕ್ಷೇತ್ರದ್ದಾಗಿದೆ. ಅದೇನೂ ನಮ್ಮ ಜನಾರ್ದನ ರೆಡ್ಡಿಯ ಹಾಗೆ ಅಕ್ರಮ ಗಣಿಗಾರಿಕೆಯಾ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಕುತೂಹಲಕರ ಸಂಗತಿಯೆಂದರೆ 2004ರ ಲೋಕಸಭೆ ಚುನಾವಣೆಯಲ್ಲಿ ಮೈಸೂರಿನ ಮಹಾರಾಜ ಶ್ರೀಕಂಠದತ್ತ ಒಡೆಯರ್ ಅವರು ಸಲ್ಲಿಸಿದ್ದ ಆಸ್ತಿ ಮೌಲ್ಯವೇ ಇದುವರೆಗಿನ ಗರಿಷ್ಠ ಮೊತ್ತವಾಗಿತ್ತು. ಆಗ ಶ್ರೀಕಂಠದತ್ತ ಒಡೆಯರ್ ತಾವು 1522.5 ಕೋಟಿ ರುಪಾಯಿ ಆಸ್ತಿಪಾಸ್ತಿ ತೂಗುವುದಾಗಿ ಹೇಳಿದ್ದರು. ಈಗ ಒಡೆಯರ್ ರ ನಾಲ್ಕೂವರೆಪಟ್ಟು ಆಸ್ತಿಯಷ್ಟು ತೂಗುತ್ತಾರೆ ದೀಪಕ್ ರೆಡ್ಡಿ. ಮತದಾರ ಪ್ರಭು ಶ್ರೀಮಂತ ದೀಪಕ್ ರೆಡ್ಡಿಗೆ ಒಲಿಯುತ್ತಾನಾ ಎಂಬುದು ಜೂನ್ 15ರ ಫಲಿತಾಂಶದ ವೇಳೆ ಬಹಿರಂಗವಾಗಲಿದೆ.

ಆದರೆ ಗಮನಿಸಿ, ವೈಯಕ್ತಿವಾಗಿ ದೀಪಕ್ ರೆಡ್ಡಿ ಒಬ್ಬರೇ 6,800 ಕೋಟಿ ರುಪಾಯಿ ತೂಗುತ್ತಾರಾ ಅಂದರೆ ಅದಕ್ಕೆ ಬೇರೆಯದೇ ಆದ ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತದೆ. ಅದಕ್ಕೂ ಮುನ್ನ, ದೀಪಕ್ ರೆಡ್ಡಿಯ ವಾರ್ಷಿಕ ಆದಾಯ 3.27 ಲಕ್ಷ ರು. ಇನ್ನು ಅವರ ಪತ್ನೊಯದು ಕೇವಲ 2 ಲಕ್ಷ ರು. ಹಾಗಾದರೆ ಉಳಿದಿದ್ದು ಎಲ್ಲಿಂದ ಬಂತು ಎಂದು ಕೇಳುತ್ತೀರಾ? ಅವರದು joint family. ಸೋ, ಅಷ್ಟನ್ನೂ ಗುಡ್ಡೆ ಹಾಕಿದರೆ ಇಡೀ ಕುಟುಂಬದ ಆಸ್ತಿ ಮೌಲ್ಯ 6,800 ಕೋಟಿ ರುಪಾಯಿ!

ದೀಪಕ್ ರೆಡ್ಡಿ ಓದಿರುವುದು ಅಮೆರಿಕದ Widener University in Philadelphiaದಲ್ಲಿ MBA. ಅನಂತಪುರ ತಾಡಪತ್ರಿಯ ಕಾಂಗ್ರೆಸ್ ನಾಯಕ ಜೆಸಿ ಪ್ರಭಾಕರ ರೆಡ್ಡಿಯ ಅಳಿಯ. ಈ ಪ್ರಭಾಕರ ರೆಡ್ಡಿಯ ಸೋದರ ದಿವಾಕರ ರೆಡ್ಡಿ ಕಾಂಗ್ರೆಸ್ ಶಾಸಕ ಮತ್ತು ದೀರ್ಘ ಕಾಲ ಸಚಿವರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+