ಪೋಲೆಂಡ್ 1 ಹಾಗೂ 1 ಗ್ರೀಸ್ ರೋಚಕ ಡ್ರಾ
ವಾರ್ಸಾ, ಜೂ.8: ಯುರೋ 2012 ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಪೋಲೆಂಡ್ ತಂಡ ಭರ್ಜರಿ ಆರಂಭದ ನಡುವೆಯೂ ಪಂದ್ಯ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಎರಡೂ ತಂಡ ದಲ್ಲಿ ತಲಾ ಒಬ್ಬ ಆಟಗಾರ ರೆಡ್ ಕಾರ್ಡ್ ಪಡೆದು ಹೊರನಡೆದಿದ್ದರಿಂದ 10 ಜನರೊಂದಿಗೆ ಆಟವಾಡಿ ಅಂತಿಮವಾಗಿ ಪೋಲೆಂಡ್ 1-1 ಗ್ರೀಸ್ ಡ್ರಾಗೆ ತೃಪ್ತಿಪಟ್ಟಿದ್ದಾರೆ.
2004ರ ಚಾಂಪಿಯನ್ ಗ್ರೀಸ್ ತಂಡದ ಕಳಪೆ ರಕ್ಷಣಾ ಪಡೆಯ ಲಾಭ ಪಡೆದ ಪೋಲೆಂಡ್ ಮಧ್ಯಂತರದಲ್ಲಿ 1-0 ಗೋಲಿನಿಂದ ಮುನ್ನಡೆ ಪಡೆದಿತ್ತು. ಪಂದ್ಯದ 17 ನೇ ನಿಮಿಷದಲ್ಲಿ ರಾಬರ್ಟ್ ಲೆವಡೊವ್ ಸ್ಕಿ ಹೆಡ್ಡರ್ ಮೂಲಕ ಹೊಡೆದ ಗೋಲು ಪೋಲೆಂಡ್ ಉತ್ತಮ ಆರಂಭದ ಲಾಭ ಪಡೆಯುವಲ್ಲಿ ವಿಫಲವಾಗಿದೆ. ಗ್ರೀಸ್ ಬದಲಿ ಆಟಗಾರ ಸಲ್ಪಿನ್ಜಿಡಿಸ್ 51ನೇ ನಿಮಿಷದಲ್ಲಿ ಗೋಲು ಹೊಡೆಯವ ಮೂಲಕ ಪೋಲೆಂಡ್ ಆಸೆಗೆ ಭಂಗ ತಂದಿದ್ದಾರೆ.
ಮೊದಲಾರ್ಧದ ಕತೆ: ಮೊದಲ ಹತ್ತು ನಿಮಿಷ ಉತ್ತಮ ಆಟ ಆಸೆ ಹುಟ್ಟಿಸಿದ ಗ್ರೀಸ್ ನಂತರ ಫುಲ್ ಡಲ್ ಆಗಿ ಬಿಟ್ಟಿತ್ತು. ಗ್ರೀಸ್ ಮೊದಲ ರೆಡ್ ಕಾರ್ಡ್ ಪಡೆದ ಅಪಕೀರ್ತಿಗೆ ಒಳಗಾಗಿದ್ದಲ್ಲದೆ 3 ಹಳದಿಕಾರ್ಡ್ ಪಡೆಯಿತು.ಜೊತೆ ಆಟಗಾರರಿಗೆ ಗಾಯದ ಸಮಸ್ಯೆ ಕೂಡಾ ಕಾಡಿತು. ಆದರೆ, ಸ್ಪೇನ್ ರೆಫ್ರಿ ಮಾಡಿದ ಪ್ರಮಾದದಿಂದ ಸಾಕ್ರಟೀಸ್ ರೆಡ್ ಕಾರ್ಡ್ ಪಡೆದು ಮುಂದಿನ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು.
ಗ್ರೀಸ್ ಆರಂಭದಿಂದಲೇ ಸರಿಯಾದ ಲಯ ಕಂಡುಕೊಳ್ಳುವಲ್ಲಿ ವಿಫಲವಾಯಿತು. ಪೋಲೆಂಡ್ ನ ಡೇಮಿಯನ್ ಪರ್ ಕ್ಯೂಸ್ ಗೆ 37ನೇ ನಿಮಿಷದಲ್ಲಿ ಗೋಲು ಒಳ್ಳೆ ಅವಕಾಶವಿತ್ತು. ಆದರೆ, ಪೆನಾಲ್ಟಿ ಸ್ಪಾಟ್ ಬಳಿ ಚೆಂಡಿನ ಮೇಲೆ ನಿಯಂತ್ರಣ ಕಳೆದುಕೊಂಡರು. ಗ್ರೀಸ್ ಗೆ 12ನೇ ನಿಮಿಷದಲ್ಲಿ ನಾಯಕ ಕರಗೊನಿಸ್ ಹೊಡೆದ ಫ್ರೀ ಕಿಕ್ ಅನ್ನು ಫಾನಿಸ್ ಗೀಕಾಸ್ ಸರಿಯಾಗಿ ಹೆಡ್ ಮಾಡದೆ ಅವಕಾಶ ಕೈ ಚೆಲ್ಲಿದರು.
44ನೇ ನಿಮಿಷದಲ್ಲಿ ಸಾಕ್ರಟೀಸ್ ಪಪಸ್ಟೊಥೊಪೊಲೊಸ್ ಎರಡನೇ ಹಳದಿ ಕಾರ್ಡ್ ಪಡೆದುಕೊಂಡು ಮೈದಾನದಿಂದ ಹೊರನಡೆಯಬೇಕಾಯಿತು. ಅದೇ ಸಮಯದಲ್ಲಿ ಪೋಲೆಂಡ್ ಅಂಗಳದಲ್ಲಿ ಹ್ಯಾಂಡ್ ಬಾಲ್ ಆಗಿತ್ತು. ಆದರೆ, ಅದನ್ನು ಗಮನಿಸದ ಸ್ಪೇನ್ ರೆಫ್ರಿ ಮಾಡಿದ ತಾಂತ್ರಿಕ ದೋಷಕ್ಕೆ ಸಾಕ್ರಟೀಸ್ ಬಲಿಯಾದರು.
ಇದು ಸಾಲದೆಬಂತೆ 46ನೇ ನಿಮಿಷದಲ್ಲಿ ಗ್ರೀಸ್ ನ ಹೊಲೆಬಸ್ ಹಳದಿ ಕಾರ್ಡ್ ಪಡೆದರು. 56 ನೇ ನಿಮಿಷದಲ್ಲಿ ನಾಯಕ ಕರಗೊನಿಸ್ ಕೂಡಾ ಹಳದಿ ಕಾರ್ಡ್ ಗಳಿಸಿದರು. ಫೀಫಾ ಪಟ್ಟಿಯಲ್ಲಿ ಕಡಿಮೆ ಶ್ರೇಯಾಂಕ ಹೊಂದಿರುವ ಪೋಲೆಂಡ್ ಗೆ ತವರಿನ ಬೆಂಬಲ, ನಾಯಕ ಜಾಕುಬ್ 'ಕೂಬಾ' ಬ್ಲಾಸ್ಜ್ಸ್ ಸಿಜ್ಕೊವ್ ಸ್ಕಿ, ರಾಬರ್ಟ್ ಲೆವನ್ದೋಸ್ಕಿ ಆಟ ನೆರವಿಗೆ ಬಂದಿದೆ. ಕೋಚ್ ಸ್ಮುಡ ಜರ್ಮನಿಯ ಡಾರ್ಟುಂಡ್ ನಲ್ಲಿನ ತಂತ್ರ ಸಂಪೂರ್ಣ ಫಲ ನೀಡಲಲ್ಲ.
| ಪೋಲೆಂಡ್ | 1 - 1 | ಗ್ರೀಸ್ |
| 9 (4) | ಗೋಲು ಯತ್ನ ಗುರಿಗೆ ಹತ್ತಿರವಾಗಿದ್ದು | 4 (3) |
| 1 | ಗೋಲು ಉಳಿಸಿದ್ದು | 1 |
| 65% | ಚೆಂಡಿನ ಹತೋಟಿ | 53% |
| 124.27km | ಕ್ರಮಿಸಿದ ದೂರ | 101.5 km |
| 283(73%) | ಒಟ್ಟು ಪಾಸ್ ಪೂರ್ಣಗೊಳಿಸಿದ್ದು | 321(78%) |
| 21 | ಕಾರ್ನರ್ಸ್ | 15 |
| 0 | ಆಫ್ ಸೈಡ್ | 3 |
| 22 | ಫೌಲ್ಸ್ | 16 |
| 0 | ಹಳದಿ ಕಾರ್ಡ್ | 4 |
| 1 | ಕೆಂಪು ಕಾರ್ಡ್ | 1 |
ಆದರೆ, ದ್ವಿತೀಯಾರ್ಧದಲ್ಲಿ ಗ್ರೀಸ್ ನಂತೆ ಪೋಲೆಂಡ್ ಕೂಡಾ 10 ಜನಕ್ಕೆ ಇಳಿಯಲ್ಪಟ್ಟಿತು. ಗೋಲ್ ಕೀಪರ್ ವೊಜ್ಸಿಕ್ ಸ್ಕೆಸ್ನಿ ಅನಗತ್ಯವಾಗಿ ಗೋಲು ವೀರ ಸಲ್ಪಿನ್ಜಿಡಿಸ್ ಕೆಣಕಲು ಹೋಗಿ ಎರಡನೇ ಬಾರಿ ಹಳದಿ ಕಾರ್ಡ್ ಪಡೆದು ಹೊರನಡೆದರು.
ಆದರೆ, ಪೆನಾಲ್ಟಿ ಪಡೆದ ಗ್ರೀಸ್ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲಿಲ್ಲ. ನಾಯಕ ಕರಗೌನಿಸ್ ಹೊಡೆದ ಪೆನಾಲ್ಟಿ ಕಿಕ್ ಅನ್ನು ಸುಲಭವಾಗಿ ತಡೆದ ಪೋಲೆಂಡ್ ಗೋಲ್ ಕೀಪರ್ ಟೈಟಾನ್ ತಂಡಕ್ಕೆ ಜೀವ ತಂದರು.
ನಂತರ ಎರಡೂ ತಂಡಗಳು ಒಂದೆರಡು ಬಾರಿ ಗೋಲು ಗಳಿಸುವ ಅವಕಾಶ ಸಿಕ್ಕರೂ ಯಾವುದೇ ಫಲ ಕಾಣಲಿಲ್ಲ. ಪೋಲೆಂಡ್ ವಿರುದ್ಧ ಸೋಲುವ ಭೀತಿ ಎದುರಿಸಿದ್ದ ಗ್ರೀಸ್, ಪೆನಾಲ್ಟಿ ಶೂಟ್ ಮಿಸ್ ಮಾಡಿಕೊಂಡು ಗೆಲ್ಲುವ ಅವಕಾಶ ಕಳೆದುಕೊಂಡು 1-1 ಡ್ರಾಗೆ ತೃಪ್ತಿಪಟ್ಟಿದೆ. ಮೊದಲ ಪಂದ್ಯದಲ್ಲೇ ಜಯ ಗಳಿಸುವ ಆಸೆ ಹೊತ್ತಿದ್ದ ಪೋಲೆಂಡ್ ಕೋಚ್ ಸ್ಮುಡಾಗೆ ನಿರಾಶೆಯಾಗಿದೆ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications