ಫೀಫಾ ಪಟ್ಟಿ: ಭಾರತ ಫುಟ್ಬಾಲ್ 164ನೇ ಸ್ಥಾನ

Indian Football Team FIFA ranking
ಬೆಂಗಳೂರು, ಜೂ.7: ಯುರೋಪಿನಲ್ಲಿ ಫುಟ್ಬಾಲ್ ಜ್ವರ ಕಾವು ಹೆಚ್ಚುತ್ತಿದ್ದು, ಅದರ ಬಿಸಿ ಸಿಲಿಕಾನ್ ಸಿಟಿ ಬೆಂಗಳೂರಿಗೂ ತಟ್ಟುತ್ತಿದೆ. ಸ್ಥಳೀಯ ತಂಡಗಳು, ಆಟಗಾರರು ಜೂ.8ರಿಂದ ಆರಂಭವಾಗಲಿರುವ ಯುರೋ ಟೂರ್ನಿಯನ್ನು ಆನಂದಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ವಿಶ್ವಕಪ್ ನಲ್ಲಿ ಬ್ರೆಜಿಲ್, ಸ್ಪೇನ್ ತಂಡವನ್ನು ಇಷ್ಟಪಟ್ಟಿದ್ದ ಬೆಂಗಳೂರಿಗರ ನಿರೀಕ್ಷೆಗೆ ಗೂಗಲ್ ಕೂಡಾ ಮನ್ನಣೆ ನೀಡಿತ್ತು. ವಿಶ್ವಕಪ್ ಸಂದರ್ಭದಲ್ಲಿ ಫುಟ್ಬಾಲ್ ಬಗ್ಗೆ ಅತಿ ಹೆಚ್ಚು ಹುಡುಕಾಟ ನಡೆಸಿದ್ದು ಬೆಂಗಳೂರು ನಗರ ಎಂಬ ಹೆಗ್ಗಳಿಕೆಯನ್ನು ಸರ್ಚ್ ಇಂಜಿನ್ ಗೂಗಲ್ ನೀಡಿತ್ತು.

ಈಗ ಪೊಲ್ಯಾಂಡ್ ಹಾಗೂ ಉಕ್ರೇನ್ ನಲ್ಲಿ ನಡೆಯಲಿರುವ ಜೂ.8 ರಿಂದ ಜುಲೈ 1ರ ತನಕ ನಡೆಯುವ ಯುರೋ 2012 ಟೂರ್ನಿ ಗೆಲ್ಲುವ ಫೆವರೀಟ್ ತಂಡ ಯಾವುದು ಎಂಬ ಪ್ರಶ್ನೆಗೆ ಸ್ಪೇನ್ ಎಂಬ ಉತ್ತರವನ್ನು ಬೆಂಗಳೂರಿಗರು ನೀಡಿದ್ದಾರೆ.

ಯುರೋ 2012ನ ಸಮಗ್ರ ಸುದ್ದಿಗಳನ್ನು ಒನ್ ಇಂಡಿಯಾ ನಿಮಗಾಗಿ ಹೊರ ತರುತ್ತಿದೆ. ಪಂದ್ಯಗಳ ವಿವರಣೆ, ಅಂಕಪಟ್ಟಿ, ವಿಶ್ಲೇಷಣೆಗಾಗಿ ನಿರೀಕ್ಷಿಸಿ....

ಜಾಗತಿಕ ಕ್ರೀಡೆಯಲ್ಲಿ ಭಾರತ: ಸುನಿಲ್ ಛೆಟ್ರಿ ನಾಯಕತ್ವದ ಭಾರತ ತಂಡ ಇತ್ತೀಚಿನ ಫೀಫಾ ಶ್ರೇಯಾಂಕ ಪಟ್ಟಿಯಲ್ಲಿ 164ನೇ ಸ್ಥಾನ ಪಡೆದಿದೆ.

ಏಷ್ಯಾದ 46 ತಂಡಗಳಲ್ಲಿ 31ನೇ ಸ್ಥಾನ ಪಡೆದಿರುವ ಭಾರತ ನೇಪಾಳದಲ್ಲಿ ನಡೆದ ಎಫ್ ಸಿ ಚಾಲೆಂಜ್ ಕಪ್ ನಂತರ ಯಾವುದೇ ಪಂದ್ಯಗಳನ್ನಾಡಿಲ್ಲ .ಬ್ಲೂ ಟೈಗರ್ಸ್ ಭಾರತ ತಂಡ ಆಗಸ್ಟ್ ನಲ್ಲಿ ನೆಹರೂ ಕಪ್ ಆಡುವ ಸಾಧ್ಯತೆಯಿದೆ.

ನೇಪಾಳ 149 ಹಾಗೂ ಬಾಂಗ್ಲಾದೇಶ 152ನೇ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾವನ್ನು ಹಿಂದಿಕ್ಕಿರುವ ಜಪಾನ್ ತಂಡ 23ನೇ ಸ್ಥಾನಕ್ಕೇರಿದೆ.

ವಿಶ್ವ ಚಾಂಪಿಯನ್ ಸ್ಪೇನ್ ತಂಡ ಫೀಫಾ ಶ್ರೇಯಾಂಕದಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಉರುಗ್ವೆ ಎರಡನೇ ಸ್ಥಾನ ಹಾಗೂ ಜರ್ಮನಿ ಮೂರನೇ ಸ್ಥಾನದಲ್ಲಿದೆ.

ನೆದರ್ಲೆಂಡ್ ನಾಲ್ಕನೇ ಸ್ಥಾನ, ಬ್ರೆಜಿಲ್, ಇಂಗ್ಲೆಂಡ್, ಅರ್ಜೆಂಟೀನಾ, ಕ್ರೋಷಿಯಾ ಹಾಗೂ ಡೆನ್ಮಾರ್ಕ್ ನಂತರ ಸ್ಥಾನದಲ್ಲಿದೆ. ಪೋರ್ಚುಗಲ್ ಐದು ಸ್ಥಾನ ಕೆಳಕ್ಕೆ ಕುಸಿದು 10ನೇ ಸ್ಥಾನ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+