ಒನ್ ಇಂಡಿಯಾ ಪರಿಸರ ದಿನಾಚರಣೆಗೆ ಬನ್ನಿ

World Environmental Day Bangalore
"We are living on this planet as if we had another one to go to." ಎಂದು ಅಮೆರಿಕದ ಖ್ಯಾತ ತತ್ವಜ್ಞಾನಿ ಹೆನ್ರಿ ಡೇವಿಡ್ ಥೋರೋ ಹೇಳಿದಂತೆ ನಮ್ಮ ಸುತ್ತಮುತ್ತಲಿನ ಜಗತ್ತಿನ ಬಗ್ಗೆ ತಲೆ ಕೆಡಿಸಿಕೊಳ್ಳುವವರು ತುಂಬಾ ಕಮ್ಮಿ. ಪರಿಸರದ ಬಗ್ಗೆ ಕಾಳಜಿ ವಹಿಸದಿದ್ದರೆ ಮುಂದಿನ ಪೀಳಿಗೆಗೆ ನಾವು ಪ್ರಾಣಿ ಪಕ್ಷಿ, ಸಸ್ಯ ಸಂಪತ್ತು ಉಳಿಸದಿದ್ದರೆ ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ.

ಈ ನಿಟ್ಟಿನಲ್ಲಿ ಜನಪ್ರಿಯ ವೆಬ್ ತಾಣ ಒನ್ ಇಂಡಿಯಾ ಪರಿಸರ ಕಾಳಜಿ, ಸಂರಕ್ಷಣೆಗಾಗಿ 'Go Green' ಅಭಿಯಾನದ ಅಡಿಯಲ್ಲಿ ಕಾಲ್ನಡಿಗೆ (walk-a-thon) ಜಾಥಾ ಹಮ್ಮಿಕೊಂಡಿದೆ. ವಿಶ್ವ ಪರಿಸರ ದಿನಾಚರಣೆಯನ್ನು ಜೂ.5, 2012ರಂದು ಅರ್ಥಪೂರ್ಣವಾಗಿ ಆಚರಿಸಲು ಯೋಜಿಸಲಾಗಿದೆ.

ಒನ್ ಇಂಡಿಯಾ (ಗ್ರೇನಿಯಂ ಇನ್ಫಾರ್ಮೇಷನ್ ಟೆಕ್ನಾಲಜಿಸ್ ಪ್ರೈ ಲಿ) ಬೆಂಗಳೂರಿನ ಜಯನಗರದಲ್ಲಿರುವ ಕಚೇರಿಯಿಂದ ಬೆಳಗ್ಗೆ 9 ಗಂಟೆಗೆಕಾಲ್ನಡಿಗೆ ಜಾಥಾ ಅರಂಭವಾಗಲಿದೆ. ಜಯನಗರದ ನಾಲ್ಕನೇ ಹಂತದ ಮೈಯ್ಯಾಸ್ ರೆಸ್ಟೋರೆಂಟ್ ಬಳಿ ಇರುವ ಬಾವಿ ಪಾರ್ಕ್ ಬಳಿ ಕೊನೆಗೊಳ್ಳಲಿದೆ.

ಪಟ್ಟಾಭಿರಾಮನಗರ ವಾರ್ಡ್ -168ನ ಕಾರ್ಪೋರೇಟರ್ ಸಿಕೆ ರಾಮಮೂರ್ತಿ ಹಾಗೂ ಶಾಸಕ ವಿಜಯ್ ಕುಮಾರ್ ಅವರು ಒನ್ ಇಂಡಿಯಾ ಹಸಿರು ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಾವಿ ಪಾರ್ಕ್ ನಲ್ಲಿ ಗಣ್ಯರಿಂದ ಸಸಿ ನೆಡವುದರ ಮೂಲಕ ಮುಂದಿನ ಪೀಳಿಗೆಗೆ ಹಸಿರು ಜಗತ್ತನ್ನು ಉಳಿಸುವ ಸಂಕಲ್ಪ ಕೈಗೊಳ್ಳಲಾಗುತ್ತದೆ.

ಪರಿಸರದ ಬಗ್ಗೆ ಕಾಳಜಿ ಇದ್ದು, ಏನೂ ಮಾಡಲು ಅವಕಾಶ ಸಿಗದವರು ನಮ್ಮ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಕಾಲ್ನಡಿಗೆ ಅಥವಾ ಸೈಕಲ್ಏರಿ ನಮ್ಮ ಜೊತೆಗೆ ಕೈ ಜೋಡಿಸಬಹುದು. ಜಯನಗರದ ಮೂರನೇ ಬ್ಲಾಕ್ ನಲ್ಲಿರುವ ಆರ್ ಆರ್ ಗೋಲ್ಡ್ ಪ್ಯಾಲೇಸ್ ಕಟ್ಟಡದಲ್ಲಿರುವ ಒನ್ ಇಂಡಿಯಾ ಕಚೇರಿಗೆ ಜೂನ್ 5ರಂದು 8.30ರೊಳಗೆ ಬಂದು ಹೆಸರು ನೋಂದಾಯಿಸಿದರೆ ಸಾಕು.

ಹೆಚ್ಚಿನ ಮಾಹಿತಿ ಪಡೆಯಲು ಸಂಪರ್ಕಿಸಿ: ಶುಚಿ@ 94494 90994, ವರುಣ್ ಅದಿತ್ಯ@ 90368 15149 ಹಾಗೂ ಮಾಲತಿ@ 080-6715 0816

ಒನ್ ಇಂಡಿಯಾ.ಇನ್ ಬಗ್ಗೆ: ಒನ್ ಇಂಡಿಯಾ ಭಾರತದ ಆನ್ ಲೈನ್ ವೆಬ್ ಪೋರ್ಟಲ್ ಆಗಿದೆ. ನೆಟ್ ಕೋರ್ ಇಂಡಿಯಾ ಪ್ರೈ.ಲಿ ಸ್ವಾಮ್ಯದ ಸಂಸ್ಥೆ ಒಡೆತನದಲ್ಲಿರುವ ಈ ವೆಬ್ ಪೋರ್ಟಲ್ ಸುದ್ದಿ ವಿಶ್ಲೇಷಣೆ, ಕ್ರೀಡೆ, ಮನರಂಜನೆ, ವಿಡಿಯೋ ಹಾಗೂ ವರ್ಗೀಕೃತ ಜಾಹೀರಾತು ನೀಡುತ್ತದೆ.

Comscore ಜೂನ್ 2011ರ ವರದಿ ಪ್ರಕಾರ ಭಾರತದ ಸುದ್ದಿ ವಿಭಾಗದಲ್ಲಿ ಒನ್ ಇಂಡಿಯಾ 4ನೇ ಸ್ಥಾನದಲ್ಲಿದೆ. ಎನ್ನಾರೈಗಳಿಗೆ ಒನ್ ಇಂಡಿಯಾ ಎರಡನೇ ಅತಿ ಹೆಚ್ಚು ಇಷ್ಟವಾಗುವ ವೆಬ್ ತಾಣ ಎನಿಸಿದೆ. ಪ್ರತಿದಿನ 500ಕ್ಕೂ ಹೆಚ್ಚು ಲೇಖನಗಳು 70 ಮಿಲಿಯನ್ ಜನರನ್ನು ಜಾಗತಿಕವಾಗಿ ಪ್ರತಿ ತಿಂಗಳು ತಲುಪುವ ಜನಪ್ರಿಯ ತಾಣವಾಗಿದೆ.

ಒನ್ ಇಂಡಿಯಾ ಭಾರತದ ಹಲವು ಭಾಷೆಗಳಲ್ಲಿ ವೆಬ್ ತಾಣಗಳನ್ನು ಹೊಂದಿದೆ. ಅವುಗಳಲ್ಲಿ ಒನ್ ಇಂಡಿಯಾ ಹಿಂದಿ, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ, ಒನ್ ಇಂಡಿಯಾ ತಮಿಳು,ಒನ್ ಇಂಡಿಯಾ ಕನ್ನಡ,ಒನ್ ಇಂಡಿಯಾ ತೆಲುಗು,ಒನ್ ಇಂಡಿಯಾ ಮಲೆಯಾಳಂ,

ಒನ್ ಇಂಡಿಯಾ.ಇನ್ ಸಮೂಹದಲ್ಲಿ ಆನ್ ಲೈನ್ ಜಾಹೀರಾತು ಪೋರ್ಟಲ್ ಕ್ಲಿಕ್.ಇನ್ ಪ್ರಮುಖವಾಗಿದೆ. ಸಮುದಾಯ ಆಧಾರಿತ ಕ್ಲಿಕ್.ಇನ್ ವೆಬ್ ತಾಣದಲ್ಲಿ ಆನ್ ಲೈನ್ ವರ್ಗೀಕೃತ ಜಾಹೀರಾತುಗಳು, ಉದ್ಯೋಗ, ಮಾರಾಟ, ಸೇವೆಗಳು, ಸ್ಥಳೀಯ ಸಮುದಾಯ, ಕಾರ್ಯಕ್ರಮಗಳ ವಿವರಗಳು ಲಭ್ಯವಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+