ವಿಕಲಚೇತನಳಿಗೆ ಮದುವೆ ಆಸೆ ತೋರಿಸಿ ಕೈ ಕೊಟ್ಟ ಟೆಕ್ಕಿ

IT profession fraud Dhanbad
ಅಹಮದಾಬಾದ್, ಜೂ.3: ಆತನಿಗೆ ವಯಸ್ಸು 40ರ ಹತ್ತಿರ.. ಧನ್ ಬಾದ್ ನ ಪ್ರಮುಖ ಐಟಿ ಸಂಸ್ಥೆಯಲ್ಲಿ ಉದ್ಯೋಗವಿದೆ. ಆದರೆ, ಹೆಂಗೆಳೆಯರ ಚಟ ಕಮ್ಮಿಯಾಗಿಲ್ಲ. ವಿಕಲಚೇತನ ಹುಡುಗಿಯೊಬ್ಬಳಿಗೆ ಮದುವೆಯ ಆಸೆ ಹುಟ್ಟಿಸಿ, ಆಕೆ ಚಿತ್ರಗಳನ್ನು ತರೆಸಿಕೊಂಡು ಮಾನ ಕಳೆದ ಆರೋಪ ಹೊತ್ತ ರಾಕೇಶ್ ಶರ್ಮ ಈಗ ಅಹಮದಾಬಾದ್ ಪೊಲೀಸರ ಅತಿಥಿ.

ಈ ಪ್ರಕರಣವಲ್ಲದೆ ಇನ್ನೂ ಅನೇಕ ಪ್ರಕರಣದಲ್ಲೂ ರಾಕೇಶ್ ಶರ್ಮನ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಇದೇ ರೀತಿ ಅನೇಕ ಹುಡುಗಿಯರಿಗೆ ಮೋಸಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಇದು ಆರು ತಿಂಗಳ ಹಿಂದಿನ ಕಥೆ. ಮದುವೆ ಆಸೆ ಹೊತ್ತ ಕೋಮಲಾ(ಹೆಸರು ಬದಲಾಯಿಸಲಾಗಿದೆ) ತನ್ನ ಭಾವಚಿತ್ರದೊಂದಿಗೆ ತನ್ನ ಸ್ವವಿವರಗಳನ್ನು ತುಂಬಿಸಿ ಮ್ಯಾಟ್ರಿಮೋನಿಯಲ್ ವೆಬ್ ತಾಣದಲ್ಲಿ ಒಂದು ಅಕೌಂಟ್ ಆರಂಭಿಸಿದ್ದಳು.

ಆಕೆ ಚಿತ್ರ ನೋಡಿ ಮನಸೋತ ಟೆಕ್ಕಿ ಆಕೆಯ ಗೆಳೆತನ ಬೆಳೆಸುತ್ತಾನೆ. ಕೆಲ ತಿಂಗಳಲ್ಲೇ ಆಕೆಯ ನಂಬಿಕೆ ಸಂಪಾದಿಸುತ್ತಾನೆ. ಹಲವಾರು ಬಾರಿ ಇ ಮೇಲ್, ಚಾಟಿಂಗ್ ನಲ್ಲಿ ವೈಯಕ್ತಿಕ ವಿಷಯಗಳು ಹಂಚುಕೊಳ್ಳುತ್ತಾರೆ.

ಹೀಗೆ ಒಮ್ಮೆ ಆಕೆಗೆ ನಿನ್ನ ನಗ್ನ ಚಿತ್ರಗಳನ್ನು ಕಳಿಸಿ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಬೇಕಾಗುತ್ತದೆ. ಯಾರಿಗೂ ವಿಷಯ ಗೊತ್ತಾಗುವುದಿಲ್ಲ. ನೀನೇನೂ ಹೆದರಬೇಕಿಲ್ಲ ಎಂದು ರಾಕೇಶ್ ಭರವಸೆ ನೀಡುತ್ತಾನೆ.

ರಾಕೇಸ್ ನೀಡಿದ ಭರವಸೆಯನ್ನು ನಂಬಿಕೊಂಡ ಪೆದ್ದು ಹುಡುಗಿ ತನ್ನ ಚಿತ್ರಗಳನ್ನು ಕಳಿಸಿ ತಪ್ಪು ಮಾಡಿಬಿಡುತ್ತಾಳೆ. ಚಿತ್ರಗಳು ರಾಕೇಶನ ಮೇಲ್ ಬಾಕ್ಸ್ ತಲುಪುತ್ತಿದ್ದಂತೆ ರಾಕೇಶ ತನ್ನ ಕೆಲಸ ಶುರು ಹಚ್ಚಿಕೊಳ್ಳುತ್ತಾನೆ.

ಕೆಲ ದಿನಗಳ ನಂತರ ಕೋಮಾಲಾಳನ್ನು ತನ್ನ ಮನೆಗೆ ಬರುವಂತೆ ರಾಕೇಶ್ ಆಹ್ವಾನ ನೀಡುತ್ತಾನೆ. ಆದರೆ, ಕೋಮಾಲಾ ಮೊದಲ ಬಾರಿಗೆ ಹಿಂಜರೆಯುತ್ತಾಳೆ. ಇದರಿಂದ ಕೋಪಗೊಂಡ ಶರ್ಮ, ಆಕೆಗೆ ಮಾನಸಿಕ ಹಿಂಸೆ ಕೊಡಲು ಆರಂಭಿಸುತ್ತಾನೆ.

ಆದರೆ, ಆಕೆ ಯಾವುದಕ್ಕೂ ಬಗ್ಗದಿದ್ದಾಗ, ಆಕೆ ಉದ್ಯೋಗದಲ್ಲಿದ್ದ ಸಂಸ್ಥೆಯ ನಿರ್ದೇಶಕನಿಗೆ ಆಕೆಯ ಖಾಸಗಿ ಚಿತ್ರಗಳನ್ನು ಮೇಲ್ ಮಾಡುತ್ತಾನೆ. ಇನ್ನೂ ಅನೇಕರಿಗೆ ಕಳಿಸುವುದಾಗಿ ಬೆದರಿಕೆ ಒಡ್ಡುತ್ತಾನೆ.

ಕೊನೆಗೂ ರಾಕೇಶನ ಅಸಲಿ ಬಣ್ಣ ಕಂಡುಕೊಂಡ ಕೋಮಲಾ ಪೊಲೀಸರ ಮೊರೆ ಹೋಗುತ್ತಾಳೆ.

ಆದರೆ, ಅಹಮದಾಬಾದ್ ಪೊಲೀಸರಿಗೆ ರಾಕೇಶನ ಹೆಜ್ಜೆ ಗುರುತು ಕಂಡು ಹಿಡಿಯಲು ಆಗದೆ ಸೋತಿದ್ದಾರೆ. ಏಕೆಂದರೆ ರಾಕೇಶ ನಕಲಿ ಪ್ರೊಫೈಲ್ ನಿಂದ ಎಲ್ಲಾ ಕೃತ್ಯಗಳನ್ನು ಎಸೆಗಿರುತ್ತಾನೆ.

ಕೊನೆಗೆ ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ಆತನ ಅಸಲಿ ಮೇಲ್ ಐಡಿ ಪತ್ತೆ ಹಚ್ಚುತ್ತಾರೆ. 40 ವರ್ಷದ ಧನ್ ಬಾದ್ ನ ಐಟಿ ಉದ್ಯೋಗಿ ರಾಕೇಶ್ ಶರ್ಮನನ್ನು ಬಂಧಿಸುತ್ತಾರೆ. ಪೊಲಿಯೋ ಪೀಡಿತ ಯುವತಿಯೊಬ್ಬಳಿಗೆ ಹಿಂಸೆ ಕೊಟ್ಟ ಶರ್ಮ ಈಗ ಕಂಬಿ ಎಣಿಸುತ್ತಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+