Get Updates
Get notified of breaking news, exclusive insights, and must-see stories!

ಪೆಟ್ರೋಲ್ ಬೆಲೆ ಲೀಟರಿಗೆ 2 ರು. ಇಳಿಕೆ ಸಾಧ್ಯತೆ

Petrol price may be reduced on 1st June
ನವದೆಹಲಿ, ಮೇ. 31 : ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ದರವನ್ನು 1.5ರಿಂದ 2 ರು.ವರೆಗೆ ಇಳಿಸುವ ನಿರೀಕ್ಷೆಯಿದ್ದು, ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಮೇ 31ರಂದು ನಡೆಸಲಾಗುತ್ತಿರುವ ಭಾರತ್ ಬಂದ್ ನಡುವೆಯೇ ಗ್ರಾಹಕರಿಗೆ ಒಳ್ಳೆಯ ಸುದ್ದಿ ಬಂದಿದೆ.

ಈ ಸುದ್ದಿ ಶುಕ್ರವಾರ ಹೊರಬೀಳಲಿದ್ದು, ಜೂನ್ 1ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಮೇ 23ರಂದು ತೈಲ ಕಂಪನಿಗಳು ಪೆಟ್ರೋಲ್ ದರವನ್ನು ಭಾರೀ ಪ್ರಮಾಣದಲ್ಲಿ ಏರಿಸಿದ್ದವು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತುಸು ಇಳಿಸಿದ್ದರಿಂದ ಪೆಟ್ರೋಲ್ ಬೆಲೆ ಇಳಿಕೆಗೆ ತೈಲ ಕಂಪನಿಗಳು ನಿರ್ಧರಿಸಿವೆ.

ಪ್ರತಿ 15 ದಿನಗಳಿಗೊಮ್ಮೆ ಕಚ್ಚಾ ತೈಲದ ಪ್ರಸ್ತುತ ಬೆಲೆ ಮತ್ತು ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್ ದರವನ್ನು ಪರಿಷ್ಕರಿಸಲಾಗುತ್ತದೆ. ಸಿಂಗಪುರದ ಸಗಟು ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಮತ್ತು ರುಪಾಯಿ ಮೌಲ್ಯದ ಆಧಾರದ ಮೇಲೆ ಪೆಟ್ರೋಲ್ ದರವನ್ನು ಪರಿಷ್ಕರಿಸಲಾಗುತ್ತಿದೆ. ಡಾಲರ್‌ಗೆ ಪ್ರತಿಯಾಗಿ ರುಪಾಯಿ ಬೆಲೆ ಕಳೆದುಕೊಂಡಿದ್ದರಿಂದ ಪೆಟ್ರೋಲ್ ಬೆಲೆ ಏರಿಸದೆ ತೈಲ ಕಂಪನಿಗಳಿಗೆ ಬೇರೆ ದಾರಿ ಇರಲಿಲ್ಲ.

ಮೇ ಕೊನೆಯ ಹದಿನೈದು ದಿನಗಳಲ್ಲಿ ಸಿಂಗಪುರದಲ್ಲಿ ಕಚ್ಚಾ ತೈಲದ ಬೆಲೆ ಸಾಕಷ್ಟು ಇಳಿಕೆ ಕಂಡಿದೆ. ಪ್ರತಿ ಬ್ಯಾರಲ್‌ಗೆ 111 ಡಾಲರ್ ಇದ್ದದ್ದು, ಈಗ 106 ಡಾಲರಿಗೆ ಇಳಿದಿದೆ. ಗ್ಯಾಸೋಲಿನ್ ದರ ಕೂಡ ಕಡಿತಗೊಂಡಿದ್ದು, 124 ಡಾಲರ್ ಇದ್ದದ್ದು 116 ಡಾಲರಿಗೆ ಇಳಿದಿದೆ. ದೇಶದಾದ್ಯಂತ ಪೆಟ್ರೋಲ್ ಬೆಲೆ ಏರಿಕೆಗೆ ಆಗುತ್ತಿರುವ ಆಕ್ರೋಶದ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆ ಇಳಿಸಲು ತೈಲ ಕಂಪನಿಗಳು ಚಿಂತಿಸುತ್ತಿವೆ.

ಕೆಲ ದಿನಗಳ ಹಿಂದೆ ಪೆಟ್ರೋಲ್ ದರ ಇಳಿಸಲು ಸಾರಾಸಗಟಾಗಿ ನಿರಾಕರಿಸಿದ್ದ ಪೆಟ್ರೋಲಿಯಂ ಸಚಿವ ಜೈಪಾಲ್ ರೆಡ್ಡಿಯವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ಸರಕಾರ ಗಮನಿಸುತ್ತಿದ್ದು, ಬೆಲೆ ಏರಿಸುವ ಅಥವಾ ಇಳಿಸುವ ಅಧಿಕಾರ ತಮ್ಮ ಕೈಯಲ್ಲಿಲ್ಲ ಎಂದು ಷರಾ ಬರೆದಿದ್ದರು. ಡಾಲರ್ ವಿರುದ್ಧ ರುಪಾಯಿ ಮೌಲ್ಯ ಹೆಚ್ಚು ಏರಿಳಿತ ಕಾಣದೆ, ಯಥಾಸ್ಥಿತಿ ಕಾಯ್ದುಕೊಂಡಿರುವುದರಿಂದ ಪೆಟ್ರೋಲ್ ಬೆಲೆ ಇಳಿಕೆಯಲ್ಲಿ ಸಹಕಾರಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+