ಪಾಕ್: ಮದ್ವೆ ಮನೆಯಲ್ಲಿ ಡ್ಯಾನ್ಸ್- 6 ಮಂದಿಗೆ ಗಲ್ಲು

pak-singing-dancing-wedding-6-sentenced-to-death
ಇಸ್ಲಾಮಾಬಾದ್, ಮೇ 30: ಕಟು ಧಾರ್ಮಿಕ ಮಡಿವಂತಿಕೆಯನ್ನು ಅನುಸರಿಸುವ ಪಾಕಿಸ್ತಾನದಲ್ಲಿ ಮಹಿಳೆಯರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ನೋಡುವುದು ಸಾಮಾನ್ಯ. ಅದಕ್ಕೆ ಎರಡು ಪಂಗಡಗಳ ನಡುವಣ ವೈಷಮ್ಯ ಬೆರೆತರೆ ಅಕ್ಷರಶಃ ಅದು ನರಕಸದೃಶವೇ.

ಮೊನ್ನೆ ಸೋಮವಾರವೂ ಇಂತಹುದೇ ಅನಾಹುತ ನಡೆದಿದೆ. ಉತ್ತರ ಪಾಕಿಸ್ತಾನದಲ್ಲಿ 4 ಮಹಿಳೆಯರು ಹಾಗೂ 2 ಪುರುಷರು ವಿವಾಹ ಸಮಾರಂಭವೊಂದರಲ್ಲಿ ಸಾರ್ವಜನಿಕವಾಗಿ ಹಾಡು ಮತ್ತು ಕುಣಿತದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ, ಅವರಿಗೆಲ್ಲ ಮರಣದಂಡನೆ ವಿಧಿಸಲಾಗಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕಾರ ಕಳೆದ ವರ್ಷ ಕುಟುಂಬದ ಮರ್ಯಾದೆಗೆ ಧಕ್ಕೆ ತಂದ ಆರೋಪದ ಮೇಲೆ ಒಟ್ಟು 943 ಮಹಿಳೆಯರು ಮತ್ತು ಬಾಲಕಿಯರನ್ನು ಹತ್ಯೆ ಮಾಡಲಾಗಿದೆ. ಮೇಲಿನ ಘಟನೆಯ ಬಗ್ಗೆ ಪೊಲೀಸರು ಹೇಳುವುದೇನೆಂದರೆ:

ಕೊಹಿಸ್ತಾನ್‌ ಜಿಲ್ಲೆಯ ಪರ್ವತ ಪ್ರದೇಶದ ಹಳ್ಳಿಯೊಂದರಲ್ಲಿ ಈ 6 ಮಂದಿ ಡಾನ್ಸ್ ಮೋಜು ಮಸ್ತಿಯಲ್ಲಿ ಸಂಭ್ರಮಿಸುತ್ತಿರುವುದನ್ನು ಮೊಬೈಲ್‌ ಫೋನಿನಲ್ಲಿ ಚಿತ್ರೀಕರಿಸಲಾಗಿದೆ. ಇದರ ವಿಡಿಯೋ ತುಣುಕುಗಳನ್ನು ಸ್ಥಳೀಯ ಮೌಲ್ವಿಗಳು ನೋಡಿದ್ದೇ ತಡ ಹಿಂದುಮುಂದು ಯೋಚಿಸದೆ ಅವರಿಗೆಲ್ಲ ಮರಣದಂಡನೆಯ ಆದೇಶ ಹೊರಡಿಸಿಯೇ ಬಿಟ್ಟರು.

ಇಲ್ಲಿನ ಬುಡಕಟ್ಟು ಸಂಪ್ರದಾಯದ ಪ್ರಕಾರ ವಿವಾಹಗಳಲ್ಲಿ ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕವಾಗಿರಬೇಕು. ಆದರೆ ಇದನ್ನು ಉಲ್ಲಂಘಿಸಿ ಗಡಾ (Gada) ಹಳ್ಳಿಯಲ್ಲಿ ಈ ಪುರುಷರು ಹಾಗೂ ಮಹಿಳೆಯರು ನರ್ತಿಸಿದರು ಮತ್ತು ಹಾಡಿದರೆಂಬ ಆರೋಪಗಳ ಮೇಲೆ ಸ್ಥಳೀಯ ಮೌಲ್ವಿಗಳು ಇಂತಹ ಘೋರ ಶಿಕ್ಷೆಗೆ ಆದೇಶಿಸಿದ್ದಾರೆ.

'ವಿಡಿಯೋದಲ್ಲಿ ಕಡುಬಂದ ಎಲ್ಲ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಕೊಲ್ಲುವಂತೆ ಸ್ಥಳೀಯ ಮೌಲ್ವಿಗಳು ಆದೇಶ ಹೊರಡಿಸಿದ್ದರು. ಮೊದಲು ಪುರುಷರನ್ನು ಕೊಲ್ಲಬೇಕೆಂದು ನಿರ್ಧರಿಸಲಾಯಿತು. ಆದರೆ ಅವರು ಪರಾರಿಯಾದರು. ಇದರಿಂದ ತಕ್ಷಣಕ್ಕೆ ಮಹಿಳೆಯರು ಸುರಕ್ಷಿತರಾಗಿದ್ದಾರೆ. ಅವರನ್ನು ರಕ್ಷಿಸುವುದಕ್ಕೆ ನಾನು ತಂಡವೊಂದನ್ನು ಕಳುಹಿಸಿದ್ದೇನೆ. ಮಹಿಳೆಯರನ್ನು ಅವರ ಮನೆಗಳಲ್ಲಿ ದಿಗ್ಬಂಧನಕ್ಕೊಳಪಡಿಸಲಾಗಿದೆ' ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಅಬ್ದುಲ್‌ ಮಜೀದ್‌ ಆಫ್ರಿದಿ ತಿಳಿಸಿದ್ದಾರೆ.

'ಎರಡು ಪಂಗಡಗಳ ನಡುವಣ ವೈಷಮ್ಯದಿಂದಾಗಿ ಈ ಪ್ರಕರಣ ನಡೆದಿದೆ. ಪುರುಷರು ಮತ್ತು ಮಹಿಳೆಯರು ಬೆರೆತುದಕ್ಕೆ ಯಾವುದೇ ಪುರಾವೆಯಿಲ್ಲ. ವಿಡಿಯೋದಲ್ಲಿ ಅವರೆಲ್ಲರನ್ನು ಪ್ರತ್ಯೇಕವಾಗಿ ಕಾಣಿಸಲಾಗಿದೆ. ಸೆಲ್‌ಫೋನ್‌ನಲ್ಲಿ ಚಿತ್ರೀಕರಿಸಲಾದ ವಿಡಿಯೋವನ್ನು ನಾನು ಖುದ್ದು ವೀಕ್ಷಿಸಿದ್ದೇನೆ.

ಪ್ರತ್ಯೇಕ ದೃಶ್ಯಗಳಲ್ಲಿ ನಾಲ್ವರು ಮಹಿಳೆಯರು ಹಾಡುತ್ತಿರುವುದು ಮತ್ತು ಓರ್ವ ಪುರುಷ ನರ್ತಿಸುತ್ತಿರುವುದು ಹಾಗೂ ಅನಂತರ ಇನ್ನೋರ್ವ ಪುರುಷ ಪ್ರತ್ಯೇಕ ದೃಶ್ಯವೊಂದರಲ್ಲಿ ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಿಸಲಾಗಿದೆ. ಇದು ಬುಡಕಟ್ಟು ಪಂಗಡಗಳ ನಡುವಣ ವೈಷಮ್ಯದ ಪ್ರಕರಣವಾಗಿದೆ. ಪಂಗಡವೊಂದನ್ನು ಅವಮಾನಿಸಲು ವಿಡಿಯೋವನ್ನು ತಿರುಚಲಾಗಿದೆ' ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+