ಕೇರಳದಲ್ಲಿ ಲೀಟರ್ ಪೆಟ್ರೋಲ್ಗೆ 1.23ರು ಕಮ್ಮಿಯಂತೆ ಕಣ್ರಿ

Kerala waives sales tax on latest petrol hike
ತಿರುವನಂತಪುರಂ, ಮೇ.25: ಪೆಟ್ರೋಲ್ ದರ ಏರಿಕೆ ಬಿಸಿ ಎಲ್ಲೆಡೆ ವ್ಯಾಪಿಸುತ್ತಿದ್ದರೆ ಪಕ್ಕದ ರಾಜ್ಯ ಕೇರಳದಲ್ಲಿ ಮಾತ್ರ ಕೊಂಚ ತಂಪು ಹವೆ ಬೀಸುತ್ತಿದೆ. ಥ್ಯಾಂಕ್ಸ್ ಟು ಊಮ್ಮನ್ ಚಾಂಡಿ ಸರ್ಕಾರ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಗುರುವಾರ(ಮೇ.24) ದಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಹಿಂಪಡೆದಿದೆ.

"ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಯುಡಿಎಫ್ ಸರ್ಕಾರ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜನರಿಗೆ ಸ್ವಲ್ಪವಾದರೂ ನೆಮ್ಮದಿ ನೀಡಬೇಕು ಎಂದು ನಿರ್ಧರಿಸಿ ಮಾರಾಟ ತೆರಿಗೆಯನ್ನು ಹಿಂಪಡೆದಿದ್ದೇವೆ.

ಇದರಿಂದ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 1.23 ರು ಇಳಿಕೆಯಾಗಲಿದೆ" ಎಂದು ಕೇರಳದ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಹೇಳಿದ್ದಾರೆ. ಕೇರಳದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 75.74 ರು ಇತ್ತು. ಚಾಂಡಿ ಸರ್ಕಾರದ ಕೃಪೆಯಿಂದ ಈಗ 74.51ರು/ಲೀ ಗೆ ತಗ್ಗಿದೆ.

ಚಾಂಡಿ ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 218 ಕೋಟಿ ರು ನಷ್ಟವಾಗಲಿದೆ. ಆದರೆ, ಜನರ ವಿಶ್ವಾಸ ಗಳಿಸಲಿದೆ. ಇದಲ್ಲದೆ ಅನಗತ್ಯ ಖರ್ಚು ವೆಚ್ಚಕ್ಕ ಕಡಿವಾಣ ಹಾಕಲು ನಿರ್ಧರಿಸಿರುವ ಚಾಂಡಿ, ಸರ್ಕಾರಿ ಕಚೇರಿಗಳಲ್ಲಿ ಪೆಟ್ರೋಲ್ ಬಳಕೆ ಬಗ್ಗೆ ನಿಗಾವಹಿಸಲು ಯೋಜಿಸಿದ್ದಾರೆ.

ಯುಪಿಎ ಸರ್ಕಾರ ಪೆಟ್ರೋಲ್ ಬೆಲೆ 7.54 ರು/ಲೀಟರ್ ಗೆ ಏರಿಸಿದ್ದು, ಡೀಸೆಲ್ ಹಾಗೂ ಇತರೆ ಇಂಧನಗಳ ಬೆಲೆಯನ್ನು ಏರಿಸುವ ಸಾಧ್ಯತೆಯಿದೆ. ಪೆಟ್ರೋಲ್ ಬೆಲೆ 2 ರು ಇಳಿಕೆ ಮಾಡುವ ಬಗ್ಗೆ ಸುದ್ದಿ ಹರಿದಾಡಿದೆ.

* ಡೆಲ್ಲಿ: 73.18 ರು/ಪ್ರತಿ ಲೀಟರ್
* ಬೆಂಗಳೂರು: 81.00 ರು/ಪ್ರತಿ ಲೀಟರ್
* ಕೋಲ್ಕತ್ತಾ: 77.88 ರು/ಪ್ರತಿ ಲೀಟರ್
* ಮುಂಬೈ: 78.57 ರು/ಪ್ರತಿ ಲೀಟರ್
* ಚೆನ್ನೈ: 77.53 ರು/ಪ್ರತಿ ಲೀಟರ್

ಕೇರಳದಲ್ಲಿ ಪೆಟ್ರೋಲ್ ಬೆಲೆ ಇಳಿಕೆ ಸುದ್ದಿ ಹೊರಬೀಳುವ ಮುನ್ನವೇ ಉತ್ತರಾಖಂಡ್ ಸರ್ಕಾರ ಕೂಡಾ ಪೆಟ್ರೋಲ್ ಮೇಲಿನ ವ್ಯಾಟ್ ಹಿಂಪಡೆಯಲು ನಿರ್ಧರಿಸಿತ್ತು. ಇದರಿಂದ ಪೆಟ್ರೋಲ್ ಬೆಲೆಯಲ್ಲಿ 1.87/ಲೀಟರ್ ನಷ್ಟು ಕಡಿಮೆಯಾಗಿದೆ. ಅಂದ ಹಾಗೆ, ನಮ್ಮ ಕರ್ನಾಟಕದ ನಗುಮೊಗದ ಸಿಎಂ ಸದಾನಂದ ಗೌಡರು ಎಷ್ಟು ಕಡಿಮೆ ಮಾಡಬಹುದು? ಕಾದು ನೋಡಣ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+