ಮೇ 23 ಮಧ್ಯಾಹ್ನ ದ್ವಿತೀಯ ಪಿಯುಸಿ ಫಲಿತಾಂಶ

Karnataka 2nd PUC results on the net
Karnataka 2nd PUC results 2012, Now online

ಬೆಂಗಳೂರು, ಮೇ. 23 : ಭವ್ಯ ಭವಿತವ್ಯದ ಕನಸು ಕಾಣುತ್ತಿರುವ 6 ಲಕ್ಷ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಭವಿಷ್ಯದ ಹಾದಿ ಇಂದು ನಿರ್ಧಾರವಾಗಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಒನ್ಇಂಡಿಯಾ ಕನ್ನಡ ಸೇರಿದಂತೆ ಇತರ ಅಂತರ್ಜಾಲ ತಾಣಗಳಲ್ಲಿ ಮಧ್ಯಾಹ್ನ 2 ಗಂಟೆಗೆ ಲಭ್ಯವಾಗಲಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ಕರೆಯಲಾಗಿರುವ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಎಲ್ಲಾ ಕಾಲೇಜುಗಳ ನೋಟೀಸ್ ಬೋರ್ಡುಗಳ ಮೇಲೆ ಗುರುವಾರ, ಮೇ 24ರಂದು ಫಲಿತಾಂಶವನ್ನು ಪ್ರಕಟಿಸಲಾಗುವುದು. [ಫಲಿತಾಂಶ ಘೋಷಣೆ]

ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಒನ್ಇಂಡಿಯಾದ ಶೈಕ್ಷಣಿಕ ವೆಬ್‌ಸೈಟ್ ಭೇಟಿ ನೀಡಿರಿ. ಫಲಿತಾಂಶ ಇಂಟರ್ನೆಟ್ಟಿನಲ್ಲಿ ಲಭ್ಯವಾಗುತ್ತಿದ್ದಂತೆ ನಿಮ್ಮ ರಿಜಿಸ್ಟ್ರೇಷನ್ ನಂಬರ್ ನಮೂದಿಸಿ ಫಲಿತಾಂಶ ಮಾತ್ರವಲ್ಲ ಸಂಪೂರ್ಣ ಅಂಕಪಟ್ಟಿಯನ್ನು ವಿದ್ಯಾರ್ಥಿಗಳು ಪಡೆಯಬಹುದು. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶುಭವಾಗಲಿ ಎಂದು ಒನ್ಇಂಡಿಯಾ ಕನ್ನಡ ಹಾರೈಸುತ್ತದೆ.

ಗಣಿತ ಸೇರಿದಂತೆ ಅನೇಕ ವಿಷಯಗಳ ಪ್ರಶ್ನೆಪತ್ರಿಕೆ ಬಯಲು, ಪರೀಕ್ಷೆ ಮುಂದೂಡಿಕೆ, ಕೆಲ ಶಿಕ್ಷಕರ ಬಂಧನ, ಮೌಲ್ಯಮಾಪನ ಸಂದರ್ಭದಲ್ಲಿ ಶಿಕ್ಷಕರಿಂದ ಮುಷ್ಕರಗಳಿಂದಾಗಿ ಈ ಬಾರಿ ವಿದ್ಯಾರ್ಥಿಗಳು ಅನೇಕ ತೊಂದರೆಗಳನ್ನು ಅನುಭವಿಸಬೇಕಾಗಿತ್ತು. ಮೌಲ್ಯಮಾಪಕರ ಮುಷ್ಕರದಿಂದಾಗಿ ತಮ್ಮ ಉತ್ತರಗಳಿಗೆ ಸರಿಯಾದ ನ್ಯಾಯ ಸಿಗುವುದಾ ಎಂಬ ಆತಂಕ ಕೂಡ ಮನೆಮಾಡಿತ್ತು. ಆದರೆ, ಮುಷ್ಕರದಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುವುದಿಲ್ಲ ಎಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+