ಆತಿ ಕ್ಯಾ ಖಂಡಾಲಾ! ಎಂದ ಹವಾಲ್ದಾರ್ ವಿಠಲ್

Hawaldar Vittal Raut booked
ಪುಣೆ, ಮೇ.23: ಲೋನಾವಾಲಾದ ತಂಪು ಹವೆಯ ಪರಿಣಾಮವೋ ಏನೋ ಹವಾಲ್ದಾರ್ ವಿಠಲ್ ರೌತ್ ತನ್ನ ಸಹದ್ಯೋಗಿ ಮಹಿಳಾ ಪೇದೆಗೆ 'ಆತಿ ಕ್ಯಾ ಖಂಡಲಾ' ಎಂದು ಕೇಳಿ ಮೈಮುಟ್ಟಿ ಲಲ್ಲೆಗೆರೆದಿದ್ದಾನೆ. ವಿಠಲ್ ಅಮಾನತು ಮಾಡುವಂತೆ ಮಹಿಳಾ ಪೇದೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾಳೆ.

ಖಂಡಲಾದಲ್ಲಿರುವ ಪೊಲೀಸ್ ತರಬೇತಿ ಕೇಂದ್ರ(Police Training School (PTS))ದಲ್ಲಿ 39 ವರ್ಷದ ವಿಠಲ್ ಕೋಚ್ ಆಗಿದ್ದಾನೆ. 21 ವರ್ಷದ ಮಹಿಳಾ ಟ್ರೈನಿ ಮೇಲೆ ಮಟಮಟ ಮಧ್ಯಾಹ್ನ ಕಾಮದೃಷ್ಟಿ ಬೀರಿ, ಸಿಕ್ಕಿಬಿದ್ದಿದ್ದಾನೆ.

ಆತ ನನ್ನ ಮೇಲೆ ಕೆಟ್ಟ ದೃಷ್ಟಿ ಬೀರುತ್ತಾ ಮೈಮುಟ್ಟಿ ಏನೇನೋ ಬಡಬಡಿಸುತ್ತಿದ್ದ ನಾನು ಪ್ರತಿರೋಧಿಸಿದ್ದಷ್ಟು ಮುಂದುವರೆಯ ತೊಡಗಿದ. ವಿಧಿವಿಲ್ಲದೆ ತರಬೇತಿ ಕೇಂದ್ರದಿಂದ ನಾನು ಹೊರಬಿದ್ದೆ ಎಂದು ಮಹಿಳಾ ಟ್ರೈನಿ ತನ್ನ ಲಿಖಿತ ದೂರಿನಲ್ಲಿ ಹೇಳಿದ್ದಾಳೆ.

ಐಪಿಸಿ ಸೆಕ್ಷನ್ 354 ಪ್ರಕಾರ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿಕೊಂಡಿರುವ ಲೋನಾವಾಳ ಪೊಲೀಸರು, ಆಂತರಿಕ ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸುವುದಾಗಿ ಇನ್ಸ್ ಪೆಕ್ಟರ್ ವಿಷ್ಣುಕುಮಾರ್ ಪವಾರ್ ಹೇಳಿದ್ದಾರೆ.

ವಿಠಲ್ ದೈಹಿಕ ತರಬೇತುದಾರನಾಗಿದ್ದು, ತರಬೇತಿ ಕೇಂದ್ರದಲಿ 635ಕ್ಕೂ ಅಧಿಕ ಮಹಿಳಾ ಟ್ರೈನಿಗಳಿದ್ದಾರೆ. ಪೊಲೀಸ್ ಪೇದೆಗಳಿಗೆ ತರಬೇತು ನೀಡುವುದರಲ್ಲಿ ಸಮರ್ಥ ಎಂಬ ಹೆಸರಿದೆ. ಇದುವರೆವಿಗೂ ಯಾರೂ ಈ ರೀತಿ ದೂರು ನೀಡಿರಲಿಲ್ಲ. ಆದರೆ, ಇದರ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು PTSನ ಮುಖ್ಯಸ್ಥ ಶಿವಾಜಿ ಶಿಂಧೆ ಹೇಳಿದ್ದಾರೆ.

ವಿಠಲ್ ಸದ್ಯಕ್ಕೆ ರಜೆ ಪಡೆದು ತಮ್ಮ ಊರಿಗೆ ಹೋಗಿದ್ದಾರೆ. ಬಂಧನದ ಬಗ್ಗೆ ಈಗಲೇ ಹೇಳಲಾಗದು. ಕೋಲ್ಹಾಪುರ PTS ನಲ್ಲಿ ನಡೆದ ಲೈಂಗಿಕ ಹಗರಣಕ್ಕೂ ಈ ಪ್ರಕರಣಕ್ಕೂ ತಾಳೆ ಹಾಕುವುದು ಬೇಡ. ಇಲ್ಲಿ ಒಬ್ಬ ಮಹಿಳಾ ಟ್ರೈನಿ ಮಾತ್ರ ದೂರು ನೀಡಿರುವುದು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+