ಮದ್ಯ ಕುಡಿಸಿ, ಬಾಲಕಿಯ ಮೇಲೆ ಅತ್ಯಾಚಾರ

ಗಜಾನನ ಸಾವರ್ಕರ್ ಮತ್ತು ಅವನ ಸಹಚರ ನಗರದ ನಮೂನಾ ಪ್ರದೇಶದಲ್ಲಿ 9ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ 14 ವರ್ಷದ ಬಾಲಕಿಯನ್ನು ಗಜಾನನ ಮೊದಲು ತಡೆದು ನಿಲ್ಲಿಸಿದ್ದಾನೆ. ತಮ್ಮೊಂದಿಗೆ ಬರಲು ಬಲವಂತಪಡಿಸಿದ್ದಾರೆ. ಬಾಲಕಿ ಅದನ್ನು ತಿರಸ್ಕರಿಸಿದಾಗ ಬಲವಂತವಾಗಿ ಆಕೆಗೆ ಮದ್ಯ ಕುಡಿಸಿ ಕರೆದೊಯ್ದಿದ್ದಾರೆ.
ನಂತರ ಗಜಾನನ ಬಾಲಕಿಯನ್ನು ತನ್ನ ಬೈಕಿನಲ್ಲಿ ಎಸ್ ಟಿ ಸ್ಟಾಂಡಿಗೆ ಕರೆದೊಯ್ದಿದ್ದಾನೆ. ಅಲ್ಲಿಂದ ಮುಂದೆ ಆಟೋ ರಿಕ್ಷಾದಲ್ಲಿ ಪ್ರಶಾಂತ್ ನಗರ ಗಾರ್ಡನಿಗೆ ಕರೆದೊಯ್ದು ಅಲ್ಲಿ ಮತ್ತೆ ಮದ್ಯ ಕುಡಿಸಿ, ಆಕೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಘಟನೆ ನಡೆದು 2 ದಿನ ಕಳೆದಿದ್ದರೂ ಪ್ರಕರಣ ಬಯಲಿಗೆ ಬಂದಿರಲಿಲ್ಲ. ಪೊಲೀಸರಿಗೆ ಮಾಹಿತಿ ನೀಡದಂತೆ ಜಗಾನನ ಬಾಲಕಿಗೆ ಹೆದರಿಸಿದ್ದ ಎಂದು ವರದಿಯಾಗಿದೆ.
ಆದರೆ ಶನಿವಾರ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗಜಾನನನ ಬೆನ್ನುಹತ್ತಿದ್ದಾರೆ. ಅವ ಪರಾರಿಯಾಗಿದ್ದಾನೆ.












Click it and Unblock the Notifications