ಮೋದಿ ಅತ್ಯಂತ ಜನಪ್ರಿಯ ರಾಷ್ಟ್ರೀಯ ನಾಯಕ

ನವದೆಹಲಿ‌, ಮೇ 21: ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಇಂದು ಮೂರು ವರ್ಷಗಳ ಆಡಳಿತ ಸಂಭ್ರಮ. ಆದರೆ ಕಾಂಗ್ರೆಸ್ ಪಕ್ಷ ಅಧಿನಾಯಕಿ ಸೋನಿಯಾ ಗಾಂಧಿ ಅಥವಾ ಅವರ ಪುತ್ರ ಯುವರಾಜಕುಮಾರ ರಾಹುಲ್ ಗಾಂಧಿಯಾಗಲಿ ಅಥವಾ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಕಹಿಯೆನಿಸುವ ಸಮೀಕ್ಷೆಯೊಂದು ಹೊರಬಿದ್ದಿದೆ.

ತಾಜಾ ಸಮೀಕ್ಷೆಯ ಪ್ರಕಾರ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ತರದಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಂದರೆ, ಕಾಂಗ್ರೆಸ್ ಪಕ್ಷದ ಅಧಿನಾಯಕರ ವರ್ಚಸ್ಸು ಕರಗುತ್ತಿದೆ.

modi-most-popular-national-leader-survey
ABP News-Nielsen survey ಪ್ರಕಾರ ತಕ್ಷಣಕ್ಕೆ ಲೋಕಸಭೆಗೆ ಮಹಾಚುನಾವಣೆ ನಡೆದರೆ ಬಿಜೆಪಿ ಶೇ. 28ರಷ್ಟು ಮತಗಳನ್ನು ಬಾಚಿಕೊಂಡರೆ ಕಾಂಗ್ರೆಸ್ ಶೇ. 20ರಷ್ಟು ಮತಗಳಿಗೆ ತೃಪ್ತಿ ಪಡಬೇಕಾಗುತ್ತದೆ. 8 ವರ್ಷಗಳ ಆಡಳಿತದಲ್ಲಿ ಯುಪಿಎ ಸೆಳೆತ ಕ್ಷೀಣಿಸುತ್ತಿದೆ. ನರೇಂದ್ರ ಮೋದಿ ಮೊದಲ ಬಾರಿಗೆ ರಾಹುಲ್ ಮತ್ತು ಮನಮೋಹನ್ ಸಿಂಗ್ ಅವರನ್ನು ಮೀರಿ ಜನಪ್ರಿಯ ನಾಯಕರಾಗಿದ್ದಾರೆ.

ಸಮೀಕ್ಷೆಯನ್ನು ದೇಶಾದ್ಯಂತ 28 ನಗರಗಳಲ್ಲಿ ಕೈಗೊಳ್ಳಲಾಗಿತ್ತು. ಇದರ ಪ್ರಕಾರ ಬಿಜೆಪಿ ಅತ್ಯಂತ ಜನಪ್ರಿಯ ಪಕ್ಷವಾಗಿ ಪ್ರವರ್ಧಮಾನಕ್ಕೆ ಬಂದಿದೆ. 2009ರ ಚುನಾವಣೆಗಳಲ್ಲಿ ಕಾಂಗ್ರೆಸ್ 207 ಸ್ಥಾನಗಳನ್ನು ಗೆದ್ದಿದ್ದರೆ ಬಿಜೆಪಿ 116 ಸ್ಥಾನಗಳನ್ನು ಗಳಿಸಲು ಶಕ್ಯವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+