ಟ್ವೀಟ್ ಮಾಡಿ ಮಾನ ಕಳೆದುಕೊಂಡ ಜೂ.ಮಲ್ಯ

Sidhartha Mallya Twitter Controversy
ಬೆಂಗಳೂರು, ಮೇ 20: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರಲೂಕ್ ಲೂಕ್ ಪ್ರೊಮೆರ್ಸ್ ಬ್ಯಾಕ್ ಪರವಾಗಿ ಟ್ವೀಟ್ ಮಾಡಿದ್ದ ಒಡೆಯ ಸಿದ್ದಾರ್ಥ್ ಮಲ್ಯ ಈಗ ಸರಿಯಾದ ಬೆಲೆತೆರಬೇಕಾಗಿದೆ.

ಅಮೆರಿಕದ ಮಹಿಳೆ ಜೋಹಾಲ್ ಹಮೀದ್ ಎಂಬುವವರಿಗೆ ಮೌರ್ಯ ಶೆರಾಟನ್ ಹೋಟೆಲ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೂಕ್ ಸದ್ಯಕ್ಕೆ ಜಾಮೀನು ಪಡೆದಿದ್ದಾರೆ.

ಜೋಹಾಲ್ ಗೆ ಲೂಕ್ ಮೇಲಿದ್ದ ಸಿಟ್ಟು ಈಗ ಆರ್‌ಸಿಬಿ ಮಾಲೀಕ ಸಿದ್ಧಾರ್ಥ ಮಲ್ಯ ಮೇಲಎ ತಿರುಗಿದೆ. ಅಮೆರಿಕನ್ ಮಹಿಳೆ ಜೋಹಾಲ್ ತನ್ನ ನಡವಳಿಕೆಯ ಕುರಿತು ಟ್ವಿಟರ್‌ನಲ್ಲಿ ಜೂ.ಮಲ್ಯ ಬರೆದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನೋಟಿಸ್ ಜಾರಿ ಮಾಡಿ ಕ್ಷಮಾಪಣೆ ಕೇಳುವಂತೆ ಆಗ್ರಹಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಲೂಕ್ ಪೊಮೆರ್ಸ್ ಬಂಧನದ ನಂತರ ಸಿದ್ಧಾರ್ಥ್ ಮಲ್ಯ ಟ್ವಿಟರ್‌ನಲ್ಲಿ ತನ್ನ ನಡವಳಿಕೆಯ ಕುರಿತು ಬರೆದಿರುವುದರ ವಿರುದ್ಧ ಅಮೆರಿಕನ್ ಮಹಿಳೆ ಹಮಿದ್ ಅವರು ದೆಹಲಿ ಮಹಿಳಾ ಅಯೋಗಕ್ಕೂ ದೂರು ನೀಡಿದ್ದಾರೆ.

"The girl who is accusing Luke of hitting her fiance was all over me last night. If he was her fiance, she wasn't exactly behaving like a future wife." ಎಂದು ಜೂ. ಮಲ್ಯ ಟ್ವೀಟ್ ಮಾಡಿದ್ದರು. ಸಿದ್ಧಾರ್ಥ್ ಅವರ ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.

ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವುದಕ್ಕೆ 48 ಗಂಟೆಗಳ ಒಳಗೆ ಕ್ಷಮೆಯಾಚಿಸಿ ಇಲ್ಲವೇ ಕಾನೂನು ಕ್ರಮ ಎದುರಿಸಿ ಎಂದು ಅವರು ಸಿದ್ಧಾರ್ಥ ಮಲ್ಯರಿಗೆ ಕಳುಹಿಸಿರುವ ನೋಟಿಸ್‌ನಲ್ಲಿ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+