ಮೈಸೂರು ವಿವಿ ಲೈಂಗಿಕ ಹಗರಣ ಪಾರ್ಟ್ 2

Mysore varsity scandal
ಮೈಸೂರು, ಮೇ.20: ಸಂಶೋಧನಾ ವಿದ್ಯಾರ್ಥಿನಿ ಎಂ ಸರಿತಾ ಅವರಿಗೆ ಪ್ರೊ ಶಿವಬಸವಯ್ಯ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಕಣ್ಮುಂದೆ ಇರುವಾಗಲೇ ಮತ್ತೊಂದು ಪ್ರಕರಣ ಮೈಸೂರು ವಿವಿಗೆ ಕಪ್ಪು ಮಸಿ ಬಳಿದಿದೆ.

ಸೈಕಾಲಜಿ ವಿಭಾಗದ ಪ್ರೊಫೆಸರ್ ಜಿ ವೆಂಕಟೇಶ್ ಕುಮಾರ್ ಅವರು ತರಗತಿಯ ವೇಳೆ ಸಹದ್ಯೋಗಿ ಅಧ್ಯಾಪಕಿಯರಿಗೆ ಅಶ್ಲೀಲ ವಿಡಿಯೋ ಗಳನ್ನು ತೋರಿಸಿ, ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ವರ್ಷ ಡಿ.11 ರಂದು ಮೈಕ್ರೋ ಟೀಚಿಂಗ್ ಕ್ಲಾಸ್ ನಡೆಸುತ್ತಿದ್ದ ಸಂದರ್ಭದಲ್ಲಿ ವೆಂಕಟೇಶ್ ಅವರು ಈ ರೀತಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದರು.

ತರಬೇತಿಯ ಒಂದು ಭಾಗ ಎಂಬಂತೆ ಅವಾಚ್ಯ ಶಬ್ದಗಳು, ಕೊಳಕು ಸಂಭಾಷಣೆಗಳನ್ನು ಯಾವುದೇ ಮುಜುಗರ ಇಲ್ಲದೆ ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ.

ವೆಂಕಟೇಶ್ ಕುಮಾರ್ ಅವರು ನೀಡಿದ ಮಾನಸಿಕ ಹಿಂಸೆ ಸಹಿಸಿಕೊಳ್ಳಲಾರದ ಅಧ್ಯಾಪಕಿಯರು ಈ ಬಗ್ಗೆ ಅನಾಮಧೇಯ ಪತ್ರವನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾರೆ.

ಈ ಬಗ್ಗೆ ಮಹಿಳಾ ಆಯೋಗ ತನಿಖೆ ನಡೆಸಿ, ವಿವಿ ಸಿಂಡಿಕೇಟ್ ಗೆ ವಿಷಯವನ್ನು ತಿಳಿಸಿದೆ. ಮೇಡಂ ಯಶೋಧರ ಸಮಿತಿ ಅವರು ನಡೆಸಿದ ತನಿಖೆ ಆಧಾರದ ಮೇಲೆ ಪ್ರೊ. ವೆಂಕಟೇಶ್ ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+