ಕಿಂಗ್ ಫಿಷರ್ 269.06 ಕೋಟಿ ತೆರಿಗೆ ಕಟ್ಟಿಲ್ಲ

ಕಿಂಗ್ ಫಿಷರ್ ತನ್ನ ಉದ್ಯೋಗಿಗಳಿಗೆ ಸಂಬಳದಲ್ಲಿ TDS ಕಡಿತ ಮಾಡಿದ್ದರೂ ಸರ್ಕಾರದ ಖಜಾನೆಗೆ ತುಂಬಿಸಿಲ್ಲ. 2009-10 ರಿಂದ 2011-12 ತನಕ ಲೆಕ್ಕದ ಪುಸ್ತಕ ಹುಡುಕಿದಾಗ ಬಡ್ಡಿ ಸಮೇತ 372.09 ಕೋಟಿ ರು ತೆರಿಗೆ ಬಾಕಿ ಉಳಿಸಿಕೊಂಡಿರುವುದು ಪತ್ತೆಯಾಗಿದೆ.
ತೆರಿಗೆ ವಸೂಲಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಈಗಾಗಲೇ 103.03 ಕೋಟಿ ರು ಸಂಗ್ರಹಿಸಲಾಗಿದೆ ಎಂದು ಸಚಿವ ಪಳನಿ ಅವರು ಮಾಹಿತಿ ನೀಡಿದರು. 2010-11 ರಲ್ಲಿ 1,027 ಕೋಟಿ ರು ಕಳೆದುಕೊಂಡಿರುವ ಕಿಂಗ್ ಫಿಷರ್ ಸಂಸ್ಥೆ, 7,057.08 ಕೋಟಿ ರು ಸಾಲ ತೀರಿಸಬೇಕಿದೆ.
ವಿಮಾನ ಹಾರಾಟ ರದ್ದಾದ ಬಗ್ಗೆ ಪ್ರಯಾಣಿಕರಿಗೆ ಹಾಗೂ ಟ್ರಾವೆಲ್ ಏಜೆಂಟ್ ಗಳಿಗೆ ತಿಳಿಸದೆ ದಿಢೀರ್ ಎಂದು ವಿಮಾನ ಹಾರಾಟ ರದ್ದು ಮಾಡಿರುವ ಕಿಂಗ್ ಫಿಷರ್ ಸಂಸ್ಥೆಗೆ Directorate General of Civil Aviation (ಡಿಜಿಸಿಎ) ನೋಟಿಸ್ ಜಾರಿ ಮಾಡಿದೆ.












Click it and Unblock the Notifications