ಸದ್ದು, ಸದ್ದು; ಟಿವಿ ಜಾಹೀರಾತಿಗೆ ಬಿತ್ತು ಗುದ್ದು

only-12-mints-ads-per-hour-in-tv-channels-trai
ನವದೆಹಲಿ, ಮೇ 15: ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (TRAI) ಸೋಮವಾರ ಟಿವಿ ಚಾನೆಲುಗಳಿಗೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಆದರೆ ಇದರಿಂದ ವೀಕ್ಷಕ ಮಹಾಪ್ರಭುಗಳು ಸಂತಸಗೊಂಡಿದ್ದಾರೆ. ಈ ಜಾಹೀರಾಥೂ! 'ಕಬಾಬ್ ಮೆ ಹಡ್ಡಿ' ಹಾಗೆ ಯಾವಾಗಲೂ ರಸಾಭಾಸವನ್ನುಂಟು ಮಾಡುತ್ತವೆ ಎಂದು ಕಾರ್ಯಕ್ರಮಗಳನ್ನು ಆಸ್ವಾದಿಸುತ್ತಾ, ಟಿವಿಗೆ ಹಿಡಿ ಶಾಪ ಹಾಕುವ ಪ್ರಸಂಗಗಳು ಟಿವಿಯಷ್ಟೇ ಹಳಯದು.

ಆದರೆ ಇನ್ನು ಮುಂದೆ ಜಾಹೀರಾತು ಬರುತ್ತಿದ್ದಂತೆ ಚಾನೆಲ್ ಬದಲಾಯಿಸುವ ಅನಿವಾರ್ಯತೆ ವೀಕ್ಷಕರಿಗೆ ಇರುವುದಿಲ್ಲ. ಏಕೆಂದರೆ Telecom Regulatory Authority of India ಒಂದು ಫರ್ಮಾನು ಹೊರಡಿಸಿದೆ. ಏನಪಾ ಅಂದರೆ ಒಂದು ಗಂಟೆಯ ಟಿವಿ ಕಾರ್ಯಕ್ರಮದ ಅವಧಿಯಲ್ಲಿ 10 ನಿಮಿಷಕ್ಕಿಂತ ಹೆಚ್ಚಿನ ಅವಧಿಗೆ ಜಾಹೀರಾತುಗಳನ್ನು ಹಾಕುವಂತಿಲ್ಲ.
ಮುದ್ರಣ ಮಾಧ್ಯಮದಲ್ಲೂ ಅಷ್ಟೇ ಶೇ.60ರಷ್ಟು news ಇರಬೇಕು, ಉಳಿದ ಶೇ. 40 ರಷ್ಟು ಜಾಹೀರಾತು ಪ್ರಕಟಿಸಲು ಅಭ್ಯಂತರವಿಲ್ಲ.

ಸೋ, ಇನ್ಮುಂದೆ Standards of Quality of Service Regulations 2012 ಅನುಸಾರ ಗಂಟೆಗೆ 10 ನಿಮಿಷ ಮಾತ್ರವಷ್ಟೇ ಜಾಹೀರಾತುಗಳನ್ನು ಹಾಕಬಹುದು. ಹಾಗೆಂದು ಯಾವುದೋ ಗಂಟೆಯಲ್ಲಿ 8 ನಿಮಿಷಯ ಮಾತ್ರ ಜಾಹೀರಾತು ಹಾಕಿದ್ದಿವಿ. ಅದನ್ನು ಸರಿದೂಗಿಸಲು ಮುಂದಿನ ಒಂದು ಗಂಟೆಯಲ್ಲಿ 10 ಪ್ಲಸ್ 2 ನಿಮಿಷ ಅಂದರೆ 12 ನಿಮಿಷ ಜಾಹೀರಾತು ಹಾಕುತ್ತೀವಿ ಎಂದು ಚಾನೆಲುಗಳು ಹೇಳುವ ಹಾಗಿಲ್ಲ ಎಂದೂ TRAI ನಿರ್ಬಂಧಿಸಿದೆ.

ಅಷ್ಟೇ ಅಲ್ಲ; ಕಾರ್ಯಕ್ರಮಗಳ ನಡುವೆ ಜಾಹೀರಾತುಗಳನ್ನು ಹಾಕಲು 15 ನಿಮಿಷಗಳ ಅಂತರ ಕಾಯ್ದುಕೊಳ್ಳಬೇಕು. ಇನ್ನು, ಸಿನಿಮಾ ಬರುತ್ತಿರುವಾಗ ಈ ಅವಧಿ ಕನಿಷ್ಠ 30 ನಿಮಿಷಕ್ಕೆ ಅಧಿಕವಾಗುತ್ತದೆ. ಹಾಗಾದರೆ ಕ್ರೀಡಾ ಪ್ರಸಾರದ ವೇಳೆ ಹೇಗೆ? ಅಂದರೆ ಕ್ರೀಡಾ ಮೈದಾದನಲ್ಲಿ ಬಿಡುವು ದೊರೆತಾಗ ಮಾತ್ರವೇ live broadcast ವೇಳೆ ಜಾಹೀರಾತು ತೋರಿಸಬೇಕು ಎಂದು ಚಾನೆಲುಗಳಿಗೆ TRAI ಕಡಿವಾಣ ಹಾಕಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಇತ್ತೀಚೆಗೆ ಚಾನೆಲುಗಳು ಪರದೆಯ ಮೇಲೆ small window, scroll ಗಳಲ್ಲಿಯೂ ಜಾಹೀರಾತುಗಳನ್ನು ಪ್ರದರ್ಶಿಸುತ್ತವೆ. ಇದು ಸರ್ವತಾ ಸಲ್ಲದು ಎಂದಿರುವ TRAI, ಜಾಹೀರಾತು ಪೂರ್ಣ ಪ್ರಮಾಣದಲ್ಲಿ screen ಮೇಲೆ ಕಾಣಿಸಿಕೊಂಡು ವೀಕ್ಷಕರಿಗೆ ಆಹ್ಲಾದತೆಯನ್ನುಂಟು ಮಾಡುವಂತಿರಬೇಕು ಎಂದಿದೆ.

ಇನ್ನೂ ಇನ್ನೂ ಒಂದು ಮಹತ್ವದ ಆದೇಶವನ್ನು TRAI ನೀಡಿದೆ, ಗಮನಿಸಿ: ಜಾಹೀರಾತಿನತ್ತ ವೀಕ್ಷಕರ ಗಮನ ಸೆಳೆಯಲು ದಢಾರಂತ ಸೌಂಡ್ ಜಾಸ್ತಿ ಮಾಡುವುದಕ್ಕೆ TRAI ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ audio level ಒಂದೇ ಗತಿಯಲ್ಲಿದ್ದು, ಕಾರ್ಯಕ್ರಮದ ವೇಳೆ ಚಾಲ್ತಿಯಲ್ಲಿರುವ ಸೌಂಡಿನಷ್ಟೇ ಪ್ರಮಾಣ ಜಾಹೀರಾತು ವೇಳೆಯೂ ಇರಬೇಕು ಎಂದು ಸ್ಪಷ್ಟವಾಗಿ ಹೇಳಿದೆ.

ಆರ್ಥಿಕವಾಗಿ ಟಿವಿ ಚಾನೆಲುಗಳಿಗೆ ಇದರಿಂದ ಎಷ್ಟು ಹೊಡೆತ ಬೀಳುತ್ತದೋ ಕಾಲವೇ ಹೇಳಬೇಕು. ಆದರೆ ಜಾಹೀರಾತು ಮತ್ತು ಆ ಸೌಂಡ್ ಹೊಡೆತದಿಂದ ವೀಕ್ಷಕರಂತೂ ಪಾರಾಗುತ್ತಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+