ಮಳೆಯಲ್ಲಿ ಫೋಟೋ ಹುಚ್ಚು:ಟೆಕ್ಕಿಯ ದುರಂತ ಸಾವು

bangalore-rain-photo-hobby-kills-techie
ಬೆಂಗಳೂರು, ಮೇ13: ಕೋಲ್ಕತ್ತ ಮೂಲದ ಅಭಿಷೇಕ್ ಘೋಷ್ ಗೆ photo hobby. ಅತ್ತ ದೆಹಲಿ ಮೂಲದ ಉದ್ಯಮಿ, ಚಿಕ್ಕ ವಿಮಾದ ಒಡೆಯ ಯೋಗೀಶ್ ಗಾರ್ಗ್ ಅವರಿಗೂ ಅದೇ ಫೋಟೋ ಹುಚ್ಚು... ಆದರೆ ಇಬ್ಬರೂ ಕೈಯಲ್ಲಿ ಕ್ಯಾಮರಾವನ್ನು ಹಿಡಿದಿದ್ದಾಗಲೇ ದುರಂತ ಸಾವನ್ನು ಅಪ್ಪಿದ್ದಾರೆ.

ಏನಾಯಿತೆಂದರೆ ನಗರದಲ್ಲಿ ನಿನ್ನೆ ಸಂಜೆ 4.2 ಸೆಂ.ಮೀ. ಮಳೆ ಸುರಿಯುತ್ತಿದ್ದಾಗ 28 ವರ್ಷದ ಅಭಿಷೇಕನಲ್ಲಿ ಫೋಟೋ ಪ್ರೀತಿ ಜಾಗೃತವಾಗಿದೆ. ಆಗ ಆತನ ಕ್ಯಾಮಾರಾವೇ ಆತನನ್ನು ಅಕ್ಷರಶಃ ಕೈಹಿಡಿದು ಯಮ ಲೋಕಕ್ಕೆ ಬಿಟ್ಟುಬಂದಿದೆ.

ಅಭಿಷೇಕ್, ಬಳ್ಳಾರಿ ರಸ್ತೆ ಬಳಿ ಇರುವ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿ. ಅವರು ಹೆಬ್ಬಾಳದಲ್ಲಿ ಸುಮಂಗಲಿ ಸೇವಾಶ್ರಮ ರಸ್ತೆಯ ಶ್ರೀರಾಮ ಸೃಷ್ಟಿ ಅಪಾರ್ಟ್‌ಮೆಂಟ್‌ನ ಮೊದಲ ಅಂತಸ್ತಿನ ಫ್ಲಾಟ್‌ನಲ್ಲಿ ವಾಸವಾಗಿದ್ದರು. ಶನಿವಾರ ರಾತ್ರಿ ಧೋ ಎಂದು ಮಳೆ ಸುರಿಯುತ್ತಿದ್ದಾಗ ಅದನ್ನು ತನ್ನ ಕ್ಯಾಮಾರದಲ್ಲಿ ಸೆರೆಹಿಡಿಯಲು ಮುಂದಾಗಿದ್ದಾನೆ. ಅಪಾರ್ಟ್‌ಮೆಂಟ್‌ನ ಎಂಟನೇ ಮಹಡಿಗೆ ಹೋಗಿ ಫೋಟೋ ತೆಗೆಯುವ ಭರದಲ್ಲಿ ತಪ್ಪು ಹೆಜ್ಜೆಯಿಟ್ಟಿದ್ದಾನೆ... ನೇರವಾಗಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆದರೂ ಅಭಿಷೇಕ್ ಅಪಾರ್ಟ್‌ಮೆಂಟ್‌ನಿಂದ ನಿಯಂತ್ರಣ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೆಬ್ಬಾಳ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

ಇನ್ನು ಯೋಗೀಶ್ ಗಾರ್ಗ್ Flash ಕಥೆ: ತನ್ನದೇ ವಿಮಾನ ಡಿಕ್ಕಿ ಹೊಡೆದ ಪರಿಣಾಮ ದೆಹಲಿ ಮೂಲದ ಉದ್ಯಮಿ ಯೋಗೀಶ್ ಮೃತಪಟ್ಟಿದ್ದಾರೆ. ಉತ್ತರಪ್ರದೇಶದ ಮೀರತ್ ನ ವರ್ತಾಪುರ air strip ನಲ್ಲಿ ಶನಿವಾರ ಬೆಳಗ್ಗೆ 10 ಗಂಟೆ ವೇಳೆ ಈ ದುರ್ಘಟನೆ ನಡೆದಿದೆ.

ಫೋಟೋ ಹುಚ್ಚಿನ ಗಾರ್ಗ್ run wayನಲ್ಲಿ ತನ್ನ ಕಂದ (ಅವರ ಪುಟ್ಟ ವಿಮಾನ) ಮೊದಲ ಹೆಜ್ಜೆ ಹಾಕುತ್ತಾ, ಹಾರುವುದನ್ನು ನೋಡಿ ಸಂಭ್ರಮಿಸುತ್ತಾ, ಫೋಟೋ ತೆಗೆಯುತ್ತಿದ್ದಾಗ ಅದರ ರೆಕ್ಕೆ ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. run way ವರೆಗೂ ಹೋಗಲು ಅವರಿಗೆ ಅನುಮತಿ ನೀಡಿದ್ಯಾರು, ಅಸಲಿಗೆ ಅವರು ಅಷ್ಟೊಂದು ಫೋಟೋ ಹುಚ್ಚು ಹಚ್ಚಿಕೊಂಡಿದ್ದಾದ್ರೂ ಏಕೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+