ಚಿನ್ನದ ಬೆಲೆ 155 ರು, ಬೆಳ್ಳಿ 700 ರು ಕುಸಿತ

Gold loses Rs 155, silver sheds Rs 700 on weak global cues
ಬೆಂಗಳೂರು, ಮೇ.12: ಕೇಂದ್ರ ಸರ್ಕಾರ ಚಿನ್ನದ ಖರೀದಿ ಮೇಲಿನ ತೆರಿಗೆ ಮಿತಿಯನ್ನು ಹೆಚ್ಚಿಸಿದ್ದರಿಂದ ಚಿನ್ನದ ವರ್ತಕರು ಸಂತಸದಿಂದಿದ್ದಾರೆ. ಅಕ್ಷಯ ತದಿಗೆ ನಂತರ ಇದೇ ಮೊದಲ ಬಾರಿಗೆ ಗ್ರಾಹಕ ಕೂಡಾ ಚಿನಿವಾರ ಪೇಟೆಗೆ ಮತ್ತೆ ಕಾಲಿಡುತ್ತಿದ್ದಾನೆ. ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ವ್ಯಾಪಾರ ಡಲ್ ಹೊಡೆದಿರುವುದು ಇದಕ್ಕೆ ಕಾರಣ.

ಮುಂಬೈ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ 155 ರು.ನಷ್ಟು ಕುಸಿದು ಪ್ರತಿ 10 ಗ್ರಾಂಗೆ 28,785 ರು ಆಗಿದೆ. ಬೆಳ್ಳಿ ಬೆಲೆ 700 ರು ಕುಸಿದು ಪ್ರತಿ ಕೆಜಿಗೆ 53,500 ರುಗೆ ಕುಸಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಕುಸಿದ (ಕಳೆದ ನಾಲ್ಕು ತಿಂಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣ) ಮೇಲೆ ವರ್ತಕರು ಆತಂಕಗೊಂಡಿದ್ದರು. ಯುರೋಪ್ ಆರ್ಥಿಕ ಬಿಕ್ಕಟ್ಟು, ಡಾಲರ್ vs ರುಪಾಯಿ ಸಮರದಲ್ಲಿ ಚಿನ್ನದ ಬೆಲೆ ಏರಿಳಿತ ಗ್ರಾಹಕನಿಗೆ ಪ್ರತಿ ದಿನ ಹೊಸ ಬೆಲೆಗಳನ್ನು ನೀಡುತ್ತಿದೆ.

ಲಂಡನ್ನಿನಲ್ಲೂ ಚಿನ್ನದ ಬೆಲೆ ಶೇ 1.3 ಕುಸಿದಿದ್ದು, ಪ್ರತಿ ಔನ್ಸ್ ಗೆ 1,573.82 USD ಆಗಿದೆ. ಬೆಳ್ಳಿ ಬೆಲೆ ಶೇ 1.9ರಷ್ಟು ಕುಸಿದಿದ್ದು 28.51 ಯುಎಸ್ ಡಾಲರ್ ಪ್ರತಿ ಔನ್ಸ್ ಗೆ ಸಿಗುತ್ತಿದೆ.

ಬೆಳ್ಳಿ ನಾಣ್ಯಗಳು ಬೇಡಿಕೆ ಕಳೆದುಕೊಂಡು 61,000 ರು ನಷ್ಟಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 24K ಬೆಲೆ ಪ್ರತಿ 10 ಗ್ರಾಂಗೆ 28,400.00 ರು ಹಾಗೂ 22K ಬೆಲೆ ಪ್ರತಿ 10 ಗ್ರಾಂಗೆ 26,300.00 ನಷ್ಟಿದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 54,000 ರು ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+