ಮಿ. ಮಲ್ಯ 280 ಕೋಟಿ ರು ವಾಪಸ್ ಮಾಡ್ರಿ

ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವರು ಮಲ್ಯ ಅವರ ಕಿಂಗ್ ಫಿಷರ್ ಎರ್ ಲೈನ್ ನೀಡಬೇಕಿರುವ ಬಾಕಿ ಮೊತ್ತದ ಬಗ್ಗೆ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಸುಮಾರು 7,000 ಕೋಟಿ ರು ಸಾಲದ ಹೊರೆ ಹೊತ್ತಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆ ಏರ್ ಲೈನ್ಸ್ ಅಥಾರಿಟಿ ಆಫ್ ಇಂಡಿಯಾ(AAI)ಗೆ ಆರ್ ಎನ್ ಎಫ್ ಸಿ, ಲೈಸನ್ಸ್ ಫೀ, ನಿಲುಗಡೆ ಮುಂತಾದ ವೆಚ್ಚ ಎಲ್ಲಾ ಸೇರಿ 279.52 ಕೋಟಿ ರು ನೀಡಬೇಕಿದೆ ಎಂದು ಅಜಿತ್ ಸಿಂಗ್ ಹೇಳಿದ್ದಾರೆ.
ಏರ್ ಇಂಡಿಯಾ ಹಾಗೂ ಕಿಂಗ್ ಫಿಷರ್ ಏರ್ ಲೈನ್ಸ್ ತನ್ನ ಸಿಬ್ಬಂದಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂಬ ದೂರು ಗಮನಕ್ಕೆ ಬಂದಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕ್ಯಾಶ್ ಅಂಡ್ ಕ್ಯಾರಿ ಪದ್ಧತಿ ಅಳವಡಿಕೆ, ಸಾಲ ನಿರ್ಬಂಧ ಮುಂತಾದ ಕ್ರಮಗಳನ್ನು ಅಳವಡಿಸುವ ಸಾಧ್ಯತೆಯಿದೆ.
ಆದರೆ, ಸಂಬಳ ವ್ಯತ್ಯಯದ ಬಗ್ಗೆ ಸಚಿವಾಲಯಕ್ಕೆ ಇನ್ನೂ ಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಕಿಂಗ್ ಫಿಷರ್ ಸಾಲ ಹಿಂತಿರುಗಿಸದೆ ಸುಮ್ಮನ್ನೆ ಕಾಲಹರಣ ಮಾಡುವುದನ್ನು ಸಹಿಸಿಕೊಳ್ಳುವುದೂ ಸಾಧ್ಯವಿಲ್ಲ ಎಂದು ಅಜಿತ್ ಸಿಂಗ್ ಎಚ್ಚರಿಸಿದ್ದಾರೆ. (ಪಿಟಿಐ)












Click it and Unblock the Notifications