ಕಂಪ್ಯೂಟರ್ ಸೆಂಟರಿನಲ್ಲಿ ಯುವತಿಯರ ಬಲಾತ್ಕಾರ
ವಿಶಾಖಪಟ್ಟಣ,
ಮೇ 2: ಇಲ್ಲಿನ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಇಬ್ಬರು ಯುವತಿಯರ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಗಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಕಂಪ್ಯೂಟರ್ ಸೆಂಟರ್ ಮಾಲೀಕ ಮತ್ತು ಅವನ ಮೂವರು ಗೆಳೆಯರು ಈ ಕುಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. id="toptextpromo">ಕೂಲ್
ಡ್ರಿಂಕ್ಸ್ ನಲ್ಲಿ ಮತ್ತುಬರಿಸುವ ಔಷಧ ಬೆರೆಸಿ ಯುವತಿಯರಿಬ್ಬರ ಪ್ರಜ್ಞೆ ತಪ್ಪಿಸಿ ಈ ಕೃತ್ಯ ನಡೆಸಲಾಗಿದೆ. ಯುವತಿಯರು 26 ವರ್ಷದ ಆಸುಪಾಸಿನವರಾಗಿದ್ದಾರೆ. ಕೃತ್ಯ ನಡೆಸುವಾಗ ಆರೋಪಿಗಳು ಅದನ್ನೆಲ್ಲ ಮೊಬೈಲಿನಲ್ಲಿ ವಿಡಿಯೋ ಸಹ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೆಂಡುರ್ತಿ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ದೂರು ದಾಖಲಾಗುತ್ತಿದ್ದಂತೆ ಇಬ್ಬರನ್ನು ಬಂಧಿಸಲಾಗಿದೆ. ಕೇಂದ್ರದ ಮಾಲೀಕ ಮತ್ತು ಆತನ ಪತ್ನಿ ಪರಾರಿಯಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹುಟ್ಟುಹಬ್ಬದ
ಪಾರ್ಟಿ
ಇದೆ.
ಆಚರಿಸೋಣ
ಬನ್ನಿ
ಎಂದು
ಪ್ರಮುಖ
ಆರೋಪಿ,
ಕಂಪ್ಯೂಟರ್
ಸೆಂಟರ್
ಮಾಲೀಕ
ಯುವತಿಯರನ್ನು
ಪುಸಲಾಯಿಸಿದ್ದಾನೆ.
ಜತೆಗೆ
ಬಾಕಿಯಿರುವ
ಮೂರು
ತಿಂಗಳ
ಸಂಬಳವನ್ನೂ
ಚುಕ್ತಾ
ಮಾಡುವುದಾಗಿ
ಆತ
ಭರವಸೆ
ನೀಡಿದ್ದಾನೆ.
ಅದನ್ನು
ನಂಬಿದ
ಇಬ್ಬರೂ
ಹೆಣ್ಣುಮಕ್ಕಳು
ಮಾಲೀಕ
ತೋಡಿದ
ಖೆಡ್ಡಾಗೆ
ಬಿದ್ದು
ಪಡಿಪಾಟಲು
ಬಿದ್ದಿದ್ದಾರೆ.
ಮಾಲೀಕನ
ಹೆಂಡತಿ
ಸಮ್ಮುಖದಲ್ಲೇ
ಆರೋಪಿಗಳು
ಈ
ಕುಕೃತ್ಯವೆಸಗಿದ್ದಾರೆ.












Click it and Unblock the Notifications