ಬೆಂಗಳೂರು: ಏರಿತೋ, ಹಾರಿತು ಚಿನ್ನದ ಬೆಲೆ

ಗ್ರಾಹಕರ ನಾಡಿಮಿಡಿತ ಅರಿತ ಚಿನ್ನದ ವ್ಯಾಪಾರಿಗಳು ಚಿನ್ನದ ಬೆಲೆಯನ್ನು ಏರಿಸಿದ್ದಾರೆ. ಹೂಡಿಕೆಯ ವಿಚಾರದಲ್ಲಿ ಚಿನ್ನಕ್ಕೆ ಚಿನ್ನವೇ ಸರಿಸಾಟಿ ಎಂಬುದನ್ನು ಅರಿತ ಖರೀದಿದಾರರು ಬೆಲೆಯೇರಿಕೆಯ ನಡುವೆಯೂ ಚಿನ್ನದ ಖರೀದಿಯಲ್ಲಿ ತೊಡಗಿದ್ದಾರೆ. ಬೆಳ್ಳಿಯ ಬೆಲೆಯೂ ಕೆಜಿಗೆ 400ರೂ. ನಷ್ಟು ಏರಿಕೆಯಾಗಿದ್ದು, 57,000 ರು.ಗೆ ತಲುಪಿದೆ.
ಆಷಾಢ ಮಾಸಕ್ಕೂ ಮುನ್ನ ಒಂದಷ್ಟು ಶುಭ ಕಾಲವಿದ್ದು, ಅಷ್ಟರೊಳಗೆ ಚಿನ್ನ ಖರೀದಿ ಮಾಡುವ ಉಮೇದಿಗೆ ಬಿದ್ದಿರುವ ಗ್ರಾಹಕರು ಚಿನ್ನದ ಬೆಲೆ ಕಂಡು ಹೌಹಾರಿದ್ದಾರೆ. ಆಭರಣ ಚಿನ್ನದ ಬೆಲೆ ಇಂದು (ಮೇ 1) ಒಂದು ಗ್ರಾಂಗೆ 2,980 ರು. ಗೆ ಜಿಗಿದಿದೆ. ನಿನ್ನೆಯಷ್ಟೆ ಈ ದರ 2,744 ರು. ಇತ್ತು. ಮುಂಬರುವ ದಿನಗಳಲ್ಲಿ ಈ ಬೆಲೆ ಇನ್ನೂ ಹೆಚ್ಚಾಗಲಿ ಎಂದು ಚಿನ್ನಾಭರಣ ಅಂಗಡಿ ಮಾಲೀಕರು ಚಿನ್ನದಂತಹ ಭವಿಷ್ಯವನ್ನೂ ನುಡಿದಿದ್ದಾರೆ. ಸೋ, ಆಯ್ಕೆ ನಿಮ್ಮದು. ಚೆನ್ನೈನಲ್ಲು ಸಹ 2,960 ರು. ಇದೆ.
ದೆಹಲಿಯ ಚಿನಿವಾರ ಪೇಟೆಯಲ್ಲಿ ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಿನ್ನ ಏರಿಕೆಯ ಬೆಲೆಯಲ್ಲಿ 10 ಗ್ರಾಂ ಗೆ ರೂ. 29,070 ರಷ್ಟಿತ್ತು. ಮುಂಬೈ ಪೇಟೆಯಲ್ಲಿ ಮಾತ್ರ ಚಿನ್ನದ ದರ 10 ಗ್ರಾಂಗೆ 28,500 ರ ಆಸುಪಾಸಿನಲ್ಲಿತ್ತು. ಇನ್ನು ಬೆಂಗಳೂರಿನಲ್ಲಿ 29,000 ರೂ. ನಷ್ಟಿತ್ತು.
ಕಳೆದ ಸೆಪ್ಟೆಂಬರಿನಿಂದ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿಯುತ್ತಿರುವುದು (ಶೇ. 15ರಷ್ಟು ಮೌಲ್ಯ ಕುಂಠಿತ) ಚಿನ್ನದ ಹೂಡಿಕೆಯತ್ತ ವಾಲುವುದಕ್ಕೆ ಕಾರಣವಾಗಿದೆ.












Click it and Unblock the Notifications