ಮೈಸೂರು ನೂತನ ಮೇಯರ್ ರಾಜೇಶ್ವರಿ ಪುಟ್ಟಸ್ವಾಮಿ

ಮೇಯರ್ ಸ್ಥಾನಕ್ಕೆ ರಾಜೇಶ್ವರಿ ಅವರಿಗೆ 50ನೇ ವಾರ್ಡಿನ ಸದಸ್ಯೆ ಮಹದೇವಮ್ಮ ಕೂಡಾ ನಾಮಪತ್ರ ಸಲ್ಲಿಸಿದ್ದರು. ಪರಿಶಿಷ್ಟ ಜಾತಿಗೆ ಮೀಸಲಾದ ಮೇಯರ್ ಸ್ಥಾನದಲ್ಲಿ ರಾಜೇಶ್ವರಿ ಪುಟ್ಟಸ್ವಾಮಿ ಅವರನ್ನು ಕೂರಿಸಲು ಕಾಂಗ್ರೆಸ್ ಕೊನೆಗೆ ವಿಪ್ ಅಸ್ತ್ರಪ್ರಯೋಗಿಸಬೇಕಾಯಿತು.
ಶಾಸಕ ತನ್ವೀರ್ ಸೇಠ್ ಅವರು ಮಹದೇವಮ್ಮ ಪರ ಲಾಬಿ ನಡೆಸಿದ್ದರಿಂದ ಕುತೂಹಲ ಮೂಡಿಸಿತ್ತು. ಮಂಚೇಗೌಡನಕೊಪ್ಪಲಿನ ನಿವಾಸಿ 40 ವರ್ಷದ ಮಹದೇವಮ್ಮ ಅವರ ಪರ ಯಾವುದೇ ವೋಟ್ ಬೀಳದೆ ಇದ್ದ ಕಾರಣ ಬೇಸರಗೊಂಡ ತನ್ವೀರ್ ಸೇಠ್ ಅವರು ಮತದಾನ ಕೇಂದ್ರದಿಂದ ಹೊರನಡೆದರು.
ಆದರೆ, ಮೇಯರ್ ಸ್ಥಾನ ಅಂತಿಮವಾಗಿ ರಾಜೇಶ್ವರಿ ಅವರಿಗೆ ಒಲಿದಿದೆ. 38 ವರ್ಷದ ಕಲೆ ವಿಭಾಗದ ಪದವಿಧರೆ ರಾಜೇಶ್ವರಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪತಿಯನ್ನು ಇತ್ತೀಚೆಗೆ ಕಳೆದುಕೊಂಡಿದ್ದಾರೆ.
ರಾಜೇಶ್ವರಿ ಅವರ ಅಧಿಕಾರ ಅವಧಿ ಫೆ.17, 2013ಕ್ಕೆ ಮುಗಿಯಲಿದೆ. ಅಯೂಬ್ ಖಾನ್, ಪುರುಷೋತ್ತಮ್, ಸಂದೇಶ್ ಸ್ವಾಮಿ, ಪುಷ್ಪಲತಾ ಚಿಕ್ಕಣ್ಣ ಅವರ ನಂತರ ರಾಜೇಶ್ವರಿ ಅವರು ಮೇಯರ್ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಹಿಂದುಳಿದ ವರ್ಗ ಎಗೆ ಮೀಸಲಾದ ಉಪ ಮೇಯರ್ ಸ್ಥಾನ 25 ವಾರ್ಡ್ ನ ಜೆಡಿಎಸ್ ಸದಸ್ಯ ಮಹದೇವಪ್ಪ ಅವರ ಪಾಲಾಗಿದೆ. ಉಪಮೇಯರ್ ಸ್ಥಾನ ಬಯಸಿದ್ದ ಬಿಜೆಪಿ ಅಭ್ಯರ್ಥಿ ಶಶಿಕುಮಾರ್ ಗೆ ಸರಿಯಾದ ಬೆಂಬಲ ಸಿಗದೇ ಸೋತಿದ್ದಾರೆ.












Click it and Unblock the Notifications