• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಭರಣ ಕಳ್ಳ ಶ್ರೀಧರ ಸೆರೆ, 9.5 ಕೆಜಿ ಚಿನ್ನ ವಶ

By Mahesh
|
Gold Robber held, Bangalore

ಬೆಂಗಳೂರು, ಏ.30: ಚಿನ್ನಾಭರಣಗಳನ್ನು ಚೆನ್ನಾಗಿ ದೋಚುತ್ತಿದ್ದ ಚತುರ ಕಳ್ಳ ಶ್ರೀಧರನನ್ನು ಬೆಂಗಳೂರಿನ ಜಗಜೀವನರಾಮ್ ನಗರ ಪೊಲೀಸರು ಸೋಮವಾರ(ಏ.30) ಬಂಧಿಸಿದ್ದಾರೆ.

ಬಂಧಿತ ಶ್ರೀಧರನ ಬಳಿ ಇದ್ದ ಸುಮಾರು 9.5 ಕೆಜಿ ಚಿನ್ನಾಭರಣ, ಸಾವಿರಾರು ರುಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಸುಮಾರು 12ಕ್ಕೂ ಅಧಿಕ ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಶ್ರೀಧರ ಇಲ್ಲಿವರೆಗೂ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ.

ಶ್ರೀಧರನ ಕಳ್ಳತನದ ಬಗ್ಗೆ ವಿವರಗಳು, ಕದ್ದ ಮಾಲು ಗಳ ವಿವರಗಳನ್ನು ನಿರೀಕ್ಷಿಸಲಾಗಿದೆ. ಬೆಂಗಳೂರಿನಲ್ಲಿ ಇವತ್ತಿನ ಚಿನ್ನದ ಬೆಲೆ ಹೀಗಿದೆ : 24K ಚಿನ್ನ 29,300.00, 22K ಚಿನ್ನ 26,950.00 ರು

ಶ್ರೀಧರ ಕದ್ದ ಮಾಲನ್ನು ಪೊಲೀಸ್ ಇಲಾಖೆ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ದೂರು ಆಧಾರಿಸಿ, ಚಿನ್ನ ಕಳೆದುಕೊಂಡವರಿಗೆ ಅವರ ಮಾಲುಗಳನ್ನು ವಿತರಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಚಾಲಾಕಿ ಕಳ್ಳನ ಕಥೆ : ಜಿ ಶ್ರೀಧರ್ ಅಲಿಯಾಸ್ ಅನಿಲ್ ಕುಮಾರ್ ಅಲಿಯಾಸ್ ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಜೀವನ್ ಭೀಮಾ ನಗರ, ಹಲಸೂರಿನ ವರುಣ್ ಜ್ಯುವೆಲ್ಲರ್ಸ್, ಇಂದಿರಾನಗರ, ಎಚ್ ಎಎಲ್ ಸೇರಿದಂತೆ 14 ಕಡೆ ಕಳವು ಪ್ರಕರಣಗಳಲ್ಲಿ ಶ್ರೀಧರ ಹೆಸರು ದಾಖಲಾಗಿದೆ. ಸುಮಾರು 2.50 ಕೋಟಿ ರು.ಗೂ ಅಧಿಕ ಹಣ ಕದ್ದಿರುವ ಚಾಲಾಕಿ ಕಳ್ಳ ಶ್ರೀಧರ್ ಏಕಾಂಗಿಯಾಗಿ ಕಬ್ಬಿಣ ರಾಡ್ ಹಿಡಿದು ಕಳ್ಳತನಕ್ಕೆ ಇಳಿಯುತ್ತಿದ್ದ.

ಕದ್ದ ಮಾಲನ್ನು ಗಿರವಿ ಇಡುತ್ತಿದ್ದ. ಮಿಕ್ಕಿದ್ದನ್ನು ಇಷ್ಟಬಂದಾಗ ಧರಿಸಿಕೊಂಡು ಖುಷಿಪಡುತ್ತಿದ್ದ. ನಗರದ ಹಲವೆಡೆ ಬಾಡಿಗೆ ಮನೆ ಮಾಡಿಕೊಂಡು ಉಳಿದುಕೊಂಡಿದ್ದ ಶ್ರೀಧರ, ಎಲ್ಲೂ ಒಂದು ವರ್ಷಕ್ಕಿಂತ ಅಧಿಕ ಕಾಲ ಇರುತ್ತಿರಲಿಲ್ಲ.

ಜಯನಗರ, ಹೊಸಕೊಟೆ, ದೇವನಹಳ್ಳಿ, ರಾಮಮೂರ್ತಿ ನಗರ ಅಲ್ಲದೆ ಶಿವಮೊಗ್ಗ ಜಿಲ್ಲೆಯ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದ. ಐದಾರು ವರ್ಷ ಜೈಲುವಾಸ ಅನುಭವಿಸಿ, ಹೊರ ಬಂದ ನಂತರ ಮತ್ತೆ ತನ್ನ ಕಸುಬು ಮುಂದುವರೆಸಿದ.

ಪೂರ್ವ ವಿಭಾಗದ ಡಿಸಿಪಿ ಕೃಷ್ಣಭಟ್ ನೇತೃತ್ವದಲ್ಲಿ ಎಸಿಪಿ ನರಸಿಂಹಯ್ಯ, ಜೆಬಿ ನಗರ ಠಾನೆ ಇನ್ಸ್ ಪೆಕ್ಟರ್ ಅಶೋಕ್, ಸಬ್ ಇನ್ಸ್ ಪೆಕ್ಟರ್ ಚಂದ್ರಪ್ಪ, ಗುರುಪ್ರಸಾದ್, ಎಎಸ್ ಐ ದೇಶ್ ಮುಖ್ ಮುಂತಾದ ಸಿಬ್ಬಂದಿಗಳ ತಂಡ ಆರೋಪಿ ಶ್ರೀಧರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಸುದ್ದಿಗೋಷ್ಥಿಯಲ್ಲಿ ವಿವರಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore Police arrest notorious jewel thief and a gold robber Sridhar, recover 9.5 KG Gold ornaments. He was wanted in more than 12 theft offenses across Bangalore. Jagjivanram Nagar police cracked this case on Monday 30 April 2012. Lost and found properties will be displayed in COP office Bangalore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more