ನಿರ್ಮಲ್ ಬಾಬಾ 238 ಕೋಟಿ ಮೇಲೆ ಸಿಬಿಐ ಕಣ್ಣು

ನಿರ್ಮಲ್ ಬಾಬಾ ವಿರುದ್ಧ ತಿರುಗಿಬಿದ್ದಿರುವ ಭಾರತ್ ಜನ್ ವಿಜ್ಞಾನ್ ಜಾಥ ಎಂಬ ಎನ್ ಜಿಒ, ಜನರ ಕಣ್ಣಿಗೆ ಮಣ್ಣೆರೆರಚಿ ಹಣ ದೋಚುತ್ತಿರುವ ನಿರ್ಮಲ್ ಬಾಬಾ ಸುಮಾರು 238 ಕೋಟಿ ರು ಗೂ ಅಧಿಕ ಹಣ ಗಳಿಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ಅಗತ್ಯವಿದೆ ಎಂದು ಆಗ್ರಹಿಸಿದ್ದಾರೆ.
ಬಾಬಾ ಢೋಂಗಿತನ ಬಯಲು ಮಾಡಲು ಸುಮಾರು 8,940ಕ್ಕೂ ಅಧಿಕ ಕಾರ್ಯಕ್ರಮ, ಬೀದಿ ನಾಟಕಗಳನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸಿದೆ. ಈ ಅಭಿಯಾನದ ಯಶಸ್ಸನ್ನು ಸಿಬಿಐಗೆ ತಿಳಿಸಿ ಬಾಬಾ ಅವರ ವಂಚಕತನ ಬಯಲಿಗೆಳೆಯಲು ಭಾರತ್ ಜನವಿಜ್ಞಾನ ಜಾಥ ಸಂಸ್ಥೆ ಸಿದ್ಧವಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಜಯಂತ್ ಪಾಂಡ್ಯ ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ವರದಿ ಬಂದ ನಂತರ ಬಾಬಾ ಮೇಲೆ ತನಿಖೆ ನಡೆಸಲು ಸಿಬಿಐ ಕೂಡಾ ಉತ್ಸುಕವಾಗಿದ್ದು, ಎನ್ ಜಿಒ ಸಹಾಯ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.












Click it and Unblock the Notifications