ಅಕ್ಷಯ ತದಿಗೆ ಆದ್ಮೇಲೆ ಚಿನ್ನ ಬೆಲೆ ಕೊಂಚ ಏರಿಕೆ

ಕಳೆದ ಎರಡು ತಿಂಗಳಲ್ಲೇ ಅಧಿಕ ಎನ್ನುವಷ್ಟು ಚಿನ್ನದ ಬೆಲೆ ಏರಿಕೆಯಾಗಿದೆ. ಶೇ0.24 ಏರಿಕೆಯಾಗಿದ್ದು, 10 ಗ್ರಾಮ್ ಚಿನ್ನದ ಬೆಲೆ 28,908 ರುನಷ್ಟಿದೆ(ಮುಂಬೈ). ಬೆಂಗಳೂರಿನಲ್ಲಿ 24K ಚಿನ್ನ 29,030.00 ಹಾಗೂ 22 K ಚಿನ್ನದ 26,930.00 ರು ನಂತೆ ಮಾರಾಟವಾಗುತ್ತಿದೆ ಎಂದು ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್(MCX) ಹೇಳಿದೆ.
ಈ ಬಾರಿ ಅಕ್ಷಯ ತದಿಗೆಯಲ್ಲಿ ನಿರೀಕ್ಷೆಗಿಂತ 10 ಟನ್ ಕಡಿಮೆ ಪ್ರಮಾಣದಲ್ಲಿ ಚಿನ್ನ ಮಾರಾಟವಾಗಿದೆ.
ಡಾಲರ್ ಆಧಾರಿತ ಹಳದಿ ಲೋಹದ ಬೆಲೆ ನಿರ್ಧರಿಸುವ ಡಾಲರ್ vs ರುಪಾಯಿ ಕದನದಲ್ಲಿ ಗುರುವಾರ(ಏ.26) ರುಪಾಯಿ ಕೊಂಚ ವೀಕ್ ಆಗಿತ್ತು, ಹಾಗಾಗಿ ಚಿನ್ನದ ಬೆಲೆ ಏರಿಕೆ ಕಂಡಿತ್ತು.












Click it and Unblock the Notifications