ಅಭಿ'ಷೇಕ್' ಆದ್ಮೇಲೆ ಚಿದಂಬರಂ ರಾಸಲೀಲೆ ವಿಡಿಯೋ?

P Chidambaram
ನವದೆಹಲಿ, ಏ.24: ಸಾಮಾಜಿಕ ಜಾಲ ತಾಣ ಬಳಸಿ ಕಾಂಗ್ರೆಸ್ ನಾಯಕರ ಖಾಸಗಿ ವಿಡಿಯೋಗಳನ್ನು ಹೊರಹಾಕುವ ಸಾಹಸಕ್ಕೆ ಕೈ ಹಾಕಿರುವ ಯೂಟ್ಯೂಬ್ ಖಾತೆದಾರ ಈಗ ಮತ್ತೊಂದು ಶಾಕ್ ನೀಡಿದ್ದಾನೆ. ಅಭಿಷೇಕ್ ಮನು ಶಿಂಘ್ವಿ ಮಾನ ಹರಾಜಾಗಿ ಅವರು ರಾಜೀನಾಮೆ ಇತ್ತು ಹೊರನಡೆದ ಮೇಲೆ ಈಗ ಚಿದಂಬರಂ ಮೇಲೆ ಪ್ರಹಾರ ಆರಂಭವಾಗಲಿದೆ.

Sikh-Hindu Nationalist ಎಂಬ ಹೆಸರಿನ ಖಾತೆದಾರ ಈಗ ಗೃಹ ಸಚಿವ ಪಿ ಚಿದಂಬರಂ ಅವರ ರಹಸ್ಯ ವಿಡಿಯೋ ಹೊರ ಬಿಡುವುದಾಗಿ ಹೇಳಿಕೊಂಡಿದ್ದಾನೆ.

ಅಭಿಷೇಕ್ ಮನು ಅವರ ವಿಡಿಯೋ ಕ್ವಾಲಿಟಿ ಅಷ್ಟು ಚೆನ್ನಾಗಿರಲಿಲ್ಲ. ಆದರೂ ಸಕತ್ ಕ್ಲಿಕ್ ಆಗಿದೆ. ಈಗ ಚಿದಂಬರಂ ಸರದಿ ಎಂದು ಯೂಟ್ಯೂಬ್ ಖಾತೆದಾರ ಹೇಳಿಕೊಂಡಿದ್ದಾನೆ.

ಕಾನೂನು ಏನು ಹೇಳುತ್ತದೆ?: ಆದರೆ, ಈ ರೀತಿ ಜನಪ್ರತಿನಿಧಿಗಳು, ಗಣ್ಯರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಬಳಸಿಕೊಂಡು ಸಾರ್ವಜನಿಕಗೊಳಿಸುವುದು ಎಷ್ಟರಮಟ್ಟಿಗೆ ಸರಿ? ಇದು ವೈಯಕ್ತಿಕ ದಾಳೀ ಅಲ್ಲವೇ? ಎಂಬ ಪ್ರಶ್ನೆ ಎದ್ದಿದೆ. ಗೂಗಲ್ ಹಾಗೂ ಫೇಸ್ ಬುಕ್ ತನ್ನ ಸುರಕ್ಷತಾ ನಿಯಮಗಳನ್ನು ಬದಲಿಸಿಕೊಂಡು ವೈಯಕ್ತಿಕ ದಾಳಿಯನ್ನು ಹತ್ತಿಕ್ಕುವ ಯತ್ನದಲ್ಲಿದೆ. ಆದರೆ, ಯೂಟ್ಯೂಬ್ ನಲ್ಲಿ ಈ ರೀತಿ ವಿಡಿಯೋ ಪಬ್ಲಿಕ್ ಆಗುತ್ತಿರುವುದು ಹೇಗೆ ಸಾಧ್ಯ ಎಂಬ ಚರ್ಚೆ ನಡೆಯುತ್ತಿದೆ.

ಚಿದಂಬರಂ ಅವರು ರಷ್ಯಾದ ವೇಶ್ಯೆಯರೊಂದಿಗೆ ಇರುವ ದೃಶ್ಯಗಳಲಿರುವ ವಿಡಿಯೋ ಶ್ರೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ ಎಂದು ಹಾಕಲಾಗಿದೆ. ಆದರೆ, ಈ ರೀತಿ ಬೋರ್ಡ್ ಹಾಕಿಕೊಳ್ಳುವುದು ಸರಿಯಲ್ಲ. ವಿಡಿಯೋ ಸತ್ಯಾಸತ್ಯತೆ ಬಗ್ಗೆ ನಂತರ ಪರಿಶೀಲಿಸಬಹುದು. ಮೊದಲಿಗೆ ಸಾರ್ವಜನಿಕವಾಗಿ ಗಣ್ಯ ವ್ಯಕ್ತಿ ವಿರುದ್ಧ ಅವಹೇಳನಕಾರಿ ಸಂದೇಶ ಹೊರಡಿಸುವುದು ಶಿಕ್ಷಾರ್ಹ ಎಂದು ಕಾನೂನು ತಜ್ಞ ಪ್ರವೀಣ್ ದಲಾಲ್ ಸಿಐಒಎಲ್ ವೆಬ್ ತಾಣಕ್ಕೆ ಹೇಳಿದ್ದಾರೆ.

36 ಗಂಟೆಗಳಲ್ಲಿ ಕ್ಲಿಪ್ಪಿಂಗ್ ಅಥವಾ ಲಿಂಕ್ ತೆಗೆಯದಿದ್ದರೆ ಸೈಬರ್ ಕಾನೂನು( Information Technology Act, 2000) ಪ್ರಕಾರ ಶಿಕ್ಷಾರ್ಹವಾಗುತ್ತದೆ. ಸಿಂಘ್ವಿ ವಿಡಿಯೋ ನಾಲ್ಕು ಭಾಗದಲ್ಲಿ ಒಟ್ಟು 28 ನಿಮಿಷಕ್ಕೂ ಅಧಿಕ ಸಮಯದ ಕ್ಲಿಪ್ಪಿಂಗ್ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+