ಎಸ್ ಬಿಎಂ, Q4 ನಿವ್ವಳ ಲಾಭ ಶೇ 29 ರಷ್ಟು ಇಳಿಕೆ

ಪ್ರಸಕ್ತ ತ್ರೈಮಾಸಿಕದಲ್ಲಿ ನಿವ್ವಳ ಲಾಭ 163.83 ಕೋಟಿ ರು ಗಳಿಸಿದೆ. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 1,525.16 ಕೋಟಿ ರು ಆದಾಯ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,218.3 ಕೋಟಿ ರು ಮಾತ್ರ ಗಳಿಸಿತ್ತು.
ಮಾರ್ಚ್ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಬಡ್ದಿ ರೂಪದಲ್ಲಿ 1,340.02 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,060.80 ರು ಗಳಿಸಿತ್ತು.
ಎಸ್ ಬಿಎಂ ನಿವ್ವಳ ಲಾಭ ಶೇ 26 ರಷ್ಟು 369.15 ಕೋಟಿ ರು ನಷ್ಟೂ ಇಳಿಕೆಯಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಇದೇ ಅವಧಿಯಲ್ಲಿ 500.6 ಕೋಟಿ ರು ಗಳಿಸಿತ್ತು.
ಒಟ್ಟಾರೆ ಆದಾಯ 5,594.82 ಕೋಟಿ ರು ಬಂದಿದೆ. ಕಳೆದ ವರ್ಷ 4,534.2 ಕೋಟಿ ರು ಗಳಿಕೆಯಾಗಿತ್ತು ಎಂದು ಎಸ್ ಬಿಎಂ ಪ್ರಕಟಿಸಿದೆ.












Click it and Unblock the Notifications