ಕಾಫಿ ಮೆಷಿನ್ ಮಾರಾಟಕ್ಕಿಳಿದ ಕಾಫಿ ಡೇ

'ಕಾಫಿ ಸಂಸ್ಕೃತಿ ಹರಡುತ್ತಿದ್ದು, espresso ಮಾದರಿ ಕಾಫಿಗೆ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕಾಫಿ ಮೆಷನ್ ಗಳನ್ನು ಬೆಂಗಳೂರು ಹಾಗೂ ಮುಂಬೈನಲ್ಲಿ ಮಾರಾಟಕ್ಕೆ ಇಡಲಾಗುವುದು' ಎಂದು ಮುಂಬೈ ವಿಭಾಗದ ಮುಖ್ಯಸ್ಥ ವಿಜಯ್ ಆನಂದ್ ಹೇಳಿದ್ದಾರೆ.
ಕ್ಷಣಾರ್ಧದಲ್ಲಿ ಎಸ್ಪ್ರೆಸೋ ಮಾದರಿ ಕಾಫಿಯನ್ನು ಪಡೆಯಲು ಈ ಮೆಷಿನ್ ನಿಂದ ಸಾಧ್ಯ. ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಇನ್ನು ಏಳು ನಗರಗಳಿಗೆ ಈ ಯೋಜನೆ ವಿಸ್ತರಿಸಲಾಗುವುದು.
ಸೆಮಿ ಆಟೋಮ್ಯಾಟಿಕ್ ಬೆಲೆ 4,500 ರು ಹಾಗೂ ಆಟೋಮ್ಯಾಟಿಕ್ ಮೆಷಿನ್ ಬೆಲೆ 5,500 ರು ಇದೆ. ಸಿಸಿಡಿಯ ಪ್ರತಿಸ್ಪರ್ಧಿಗಳಾದ ಇಟಲಿಯ ಲವಜಾ ತನ್ನದೇ espresso ಮೆಷಿನ್ ಅನ್ನು ಮಾರಾಟ ಮಾಡುತ್ತಿದೆ. ಕಾಫಿ ಡೇ ಮೆಷಿನ್ ಆದಕ್ಕಿಂತ ಶೇ 30ರಷ್ಟು ಕಡಿಮೆ ದರದಲ್ಲಿ ಸಿಗುತ್ತಿದೆ ಎಂದು ಆನಂದ್ ಹೇಳಿದ್ದಾರೆ.
ಅಮಾಲ್ಗಮೇಟೆಡ್ ಬಿನ್ ಕಾಫಿ ಟ್ರೇಡಿಂಗ್ ಕಂಪನಿಯ ಕೆಫೆ ಕಾಫಿ ಡೇ ಸುಮಾರು 1,300ಕ್ಕೂ ಮಳಿಗೆಗಳನ್ನು ಹೊಂದಿದೆ.












Click it and Unblock the Notifications