ಡೆಲ್ ಪಾಯಲ್ ಕೊಲೆ ಕೇಸ್ ಕೈ ಬಿಟ್ಟ ಸಿಬಿಐ

Dell Employee Payal Murder Case
ಬೆಂಗಳೂರು, ಏ.20: ಡೆಲ್ ಬಿಪಿಒ ಉದ್ಯೋಗಿ, ಜೆಪಿನಗರ ಏಳನೇ ಹಂತದ ನಿವಾಸಿ ಪಾಯಲ್ ಸುರೇಖಾ(29) ಅಮಾನುಷ ಕೊಲೆ ಕೇಸ್ ಕ್ಲೋಸ್ ಆಗಿದೆ. ಈ ಪ್ರಕರಣ ತನಿಖೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಷರಾ ಹಾಕಿ ಸಿಬಿಐ ತನ್ನ ಅಫಿಡವಿಟ್ ಅನ್ನು ಗುರುವಾರ(ಏ.19) ಹೈಕೋರ್ಟ್ ಗೆ ಸಲ್ಲಿಸಿದೆ.

ಸಿಬಿಐ ಸಲ್ಲಿಸಿದ ಅಫಿಡವಿಟ್ ಪರಿಶೀಲಿಸಿದ ನ್ಯಾ ಆನಂದ್ ಅವರು ಎಸಿಪಿ ಜಿತೇಂದ್ರನಾಥ್ ಅವರಿಗೆ ನಿರ್ದೇಶನ ನೀಡಿ ಡಿಸಿಪಿ ಮಟ್ಟದ ಅಧಿಕಾರಿಗಳಿಂದ ತನಿಖೆ ಮುಂದುವರೆಸುವಂತೆ ಸೂಚಿಸಿದರು. ಪ್ರಕರಣದ ವಿಚಾರಣೆಯನ್ನು ಮುಂದೂಡಿದರು.

ಅಸ್ಸಾಂ ಮೂಲದ ಪಾಯಲ್ (29) ಅವರನ್ನು ಡಿ.17,2010ರಂದು ಜೆಪಿ ನಗರದ ತಮ್ಮ ಅಪಾರ್ಟ್ಮೆಂಟ್ ನಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಸಿಬಿಐ ನಿರ್ಣಯಕ್ಕೆ ಕಾರಣ? : ಕೆಳ ಹಂತದ ನ್ಯಾಯಾಲಯ ಸಿಬಿಐಗೆ ನಿರ್ದೇಶನ ನೀಡುವ ಅಧಿಕಾರ ಇಲ್ಲ ಎನ್ನುವ ಸಣ್ಣ ಕಾರಣ ಹಿಡಿದುಕೊಂಡು ತನಿಖೆ ವಿಳಂಬಗೊಳಿಸಿದ ಸಿಬಿಐ, ಈಗ ಕೇಸ್ ನಿಂದ ಕೈತೊಳೆದುಕೊಂಡಿದೆ.

ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮಾತ್ರ ತನಿಖೆ ಆದೇಶಿಸಿದರೆ ಪ್ರಕರಣ ಕೈಗೆತ್ತಿಕೊಳ್ಳಬೇಕು ಎಂಬ ಅಲಿಖಿತ ನಿಯಮವನ್ನು ಪಾಲಿಸುತ್ತಾ ಬಂದಿರುವ ಸಿಬಿಐ ಸೂಪಿರಿಯಾರಿಟಿ ಕಾಂಪ್ಲೆಕ್ಸ್ ಗೆ ಒಳಗಾದಂತೆ ನಡೆದುಕೊಳ್ಳುತ್ತಿದೆ.

ಪೊಲೀಸ್ ಫೈಲ್ ಕ್ಲೋಸ್ ಆಗಿದೆ: ಪಾಯಲ್ ಸುರೇಖಾ ಕೊಲೆ ಕೇಸಿಗೆ ಮುಕ್ತಾಯ ಹಾಡಿರುವ ಜೆಪಿ ನಗರ ಪೊಲೀಸರು, ಪಾಯಲ್ ಪತಿ ಅನಂತ್ ನಾರಾಯಣ ಮಿಶ್ರಾ ಹೇಳಿಕೆ ಪಡೆದು ಆತನ ಬಿಸಿನೆಸ್ ಪಾರ್ಟ್ನರ್ ಜೇಮ್ಸ್ ಕುಮಾರ್ ರಾಯ್ ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು.

ಆದರೆ, ಪಾಯಲ್ ತಂದೆ ಮಾತ್ರ 'ನನ್ನ ಮಗಳ ಅತ್ತೆ ಮನೆಯರ ಕೈವಾಡ ಇದೆ ಎಂದು ಶಂಕೆ ವ್ಯಕ್ತಪಡಿಸಿ ಸಿಬಿಐ ತನಿಖೆಗೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಈಗ ಸಿಬಿಐ ಸಂಸ್ಥೆಯ ಬದಲಿಗೆ ಪೊಲೀಸರ ಕೈಗೆ ಕೇಸ್ ಒಪ್ಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+