ಯುವತಿಯ ನಗ್ನ ವಿಡಿಯೋ ಛಾಪಿಸಿದ ಟೆಕ್ಕಿ ಸೆರೆ

techie-vishal-posts-nude-photos-held-hyderabad
ಹೈದರಾಬಾದ್, ಏ.19: ಯುವತಿಯ ನಗ್ನ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸಿದ ಟೆಕ್ಕಿಯೊಬ್ಬನನ್ನು ಸೈಬರ್ ಕ್ರೈಂ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿ ಮಡಿಪಲ್ಲಿ ವಿಶಾಲ್ ಇಂಗ್ಲೆಂಡಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ.

Skype video chat ವೇಳೆ ಯುವತಿಯನ್ನು ಬಲವಂತವಾಗಿ ಬೆತ್ತಲುಗೊಳಿಸಿದ ವಿಶಾಲ್ ಇಡೀ ದೃಶ್ಯಾವಳಿಯನ್ನು ಚಿತ್ರೀಕರಿಸಿಕೊಂಡು ಅಂತರ್ಜಾಲ ಸಾಮಾಜಿಕ ತಾಣಗಳಲ್ಲಿ upload ಮಾಡಿದ್ದ. ಹೀಗೆ ಮಾಡುವ ವೇಳೆ ಆರೋಪಿ ಬಳಸಿದ್ದ ಕಂಪ್ಯೂಟರಿನ IP address ಹಿಡಿದು ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏನಾಯಿತು, ಹೇಗಾಯಿತು?: ಬಾಧಿತ ಯುವತಿ ಮತ್ತು ಆರೋಪಿ ವಿಶಾಲ್ Facebook ಮೂಲಕ ಪರಸ್ಪರ ಆತ್ಮೀಯರಾಗಿದ್ದಾರೆ. ಯುವತಿಯ ಜತೆ ಅದು ಯಾವ ಮಾಯದಲ್ಲ catch up ಆದ ವಿಶಾಲ ಆಗಾಗ ಆಕೆಗೆ ಅಶ್ಲೀಲ ಚಿತ್ರ ಕಳಿಸತೊಡಗಿದ. ಅವಳ email ID ಮತ್ತು FB account ಅನ್ನು ಇತರೆ ಎಲ್ಲರಿಗೂ ಹಂಚುವುದಾಗಿ ಬೆದರಿಸಿದ್ದಾನೆ.

ಹೀಗೆ ಬ್ಲ್ಯಾಕ್ ಮೇಲ್ ಮಾಡುತ್ತಾ Skype video chatಗೆ ಆಹ್ವಾನಿಸಿದ್ದಾನೆ. ಆಕೆ ಹಿಂಜರಿದಾಗ ಮದುವೆಯಾಗುವುದಾಗಿ ಪುಸಲಾಯಿಸಿದ್ದಾನೆ. ಆ ಸಂದರ್ಭದಲ್ಲಿ ವಿವಸ್ತ್ರಳಾಗುವಂತೆ ಆಕೆಯ ಮೇಲೆ ಒತ್ತಡ ಹೇರಿದ್ದಾನೆ. ಆಗ ಯುವತಿ ಅವನ ಸಹವಾಸವೇ ಸಾಕು ಅಂತ ದೂರವಾಗಿದ್ದಾಳೆ. ಆದರೆ ಆ ವೇಳೆಗೆ ಆರೋಪಿ ಅವಳ ವಿಡಿಯೋ ತೆಗೆದಾಗಿತ್ತು. ಯಾವಾಗ ಅವಳು ದೂರವಾಗುತ್ತಿದ್ದಾಳೆ ಅನಿಸಿತೋ, ವಿಶಾಲ ವಿಡಿಯೋವನ್ನು ವೆಬ್ ಸೈಟಿಗೆ upload ಮಾಡಿ, ಯುವತಿಗೆ ಕಳಂಕ ತರಲು ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+