ಉತ್ತರಪ್ರದೇಶದಲ್ಲಿ ಮತ್ತೆ ದಲಿತೆ ಕಿಡ್ನಾಪ್, ರೇಪ್

14ರ ಹರೆಯದ ದಲಿತ ಹುಡುಗಿಯೊಬ್ಬಳನ್ನು ಆಕೆ ಸಂಬಂಧಿಕನೊಬ್ಬ ತನ್ನ ಗೆಳೆಯನ ಜೊತೆಗಡಿ ಕಿಡ್ನಾಪ್ ಮಾಡಿ ರೇಪ್ ಮಾಡಿ ಹತ್ಯೆ ಮಾಡಿರುವ ದಾರುಣ ಘಟನೆ ಇಮಾಲಿಯಾ ಸುಲ್ತಾನ್‌ಪುರದಿಂದ ವರದಿಯಾಗಿದೆ.
ಕುಕ್ರಾ ಗ್ರಾಮದ ನಿವಾಸಿ ಹುಡುಗಿ ತನ್ನ ಮನೆ ಹೊರಗಡೆ ರಾತ್ರಿ ತಾಯಿಯ ಜೊತೆ ಮಲಗಿದ್ದಳು. ಹುಡುಗಿಯನ್ನು ಆಕೆಯ ಸಂಬಂಧಿಕ ಮನೋಜ್ ಹಾಗೂ ಗೆಳೆಯ ರಿಂಕು ಬಲವಂತವಾಗಿ ಅಪಹರಿಸಿದ್ದಾರೆ.
ಬಳಿಕ ಅವಳ ಮೇಲೆ ಅತ್ಯಾಚಾರ ನಡೆಸಿ ಕತ್ತು ಹಿಸುಕಿಕೊಂದಿದ್ದಾರೆ ಎಂದು ಡಿಎಸ್‌ಪಿ ಜಿತೇಂದ್ರ ಶ್ರೀವಾಸ್ತವ ತಿಳಿಸಿದ್ದಾರೆ.
ಮೃತಳ ಸಂಬಂಧಿಕ ಆರೋಪಿ ಮನೋಜ್‌ನನ್ನು ಬಂಧಿಸಲಾಗಿದ್ದು, ರಿಂಕು ತಲೆ ಮರೆಸಿಕೊಂಡಿದ್ದಾನೆ ಎಂದು ಶ್ರೀವಾಸ್ತವ ಹೇಳಿದರು.












Click it and Unblock the Notifications