ಇನ್ಫೋಸಿಸ್ಸಿನಿಂದ 35000 ಟೆಕ್ಕಿಗಳ ನೇಮಕ ಮಾತ್ರ

ಲಭ್ಯ ಮೂಲಗಳ ಪ್ರಕಾರ್ 2012-13 ರ ಆರ್ಥಿಕ ವರ್ಷದಲ್ಲಿ ಇನ್ಪೋಸಿಸ್ ಸಂಸ್ಥೆ ಕೇವಲ 35,000 ಟೆಕ್ಕಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 10,000 ನೇಮಕಾತಿ ಕಡಿಮೆಯಾಗಿದೆ.
ಕಳೆದ ಆರ್ಥಿಕ ವರ್ಷದಲ್ಲಿ 45,000 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿತ್ತು. 13,000 ಅಭ್ಯರ್ಥಿಗಳನ್ನು ಬಿಸಿನೆಸ್ ಪ್ರೊಸೆಸ್ ಔಟ್ ಸೋರ್ಸಿಂಗ್(BPO) ಬ್ಯಾಕ್ ಆಫೀಸ್ ಕಾರ್ಯಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು.
1,200 ಆನ್ ಸೈಟ್ ಉದ್ಯೋಗಿಗಳು ಹಾಗೂ 35,000 ಅಭ್ಯರ್ಥಿಗಳ ನೇಮಕ ಈ ಆರ್ಥಿಕ ವರ್ಷದ ಗುರಿಯಲ್ಲಿದೆ ಎಂದು ಸಿಇಒ ಎಸ್ ಡಿ ಶಿಬುಲಾಲ್ ಹೇಳಿದ್ದಾರೆ.












Click it and Unblock the Notifications