ಮೈಸೂರಲ್ಲಿ ವೇಶ್ಯಾವಾಟಿಕೆ ಜಾಲ : ಬಾಂಗ್ಲಾದೇಶಿಯರ ಬಂಧನ

ಈ ನಾಲ್ವರಲ್ಲಿ ಇಬ್ಬರು ಮಹಿಳೆಯರಾಗಿದ್ದು, ಒಬ್ಬಳು ಬಾಂಗ್ಲಾದೇಶದ ನಾಗರಿಕಳಾದರೆ ಇನ್ನೊಬ್ಬಳು ನೇಪಾಳದವಳು. ಇವರಿಬ್ಬರನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ಮೊಹಮ್ಮದ್ ಸಾಜಿದ್ ಖಾನ್ ಮತ್ತು ಮೊಹಮ್ಮದ್ ಅಭಿಬಾಷ್ ಬಾಂಗ್ಲಾದೇಶದವರು. ಪುರುಷರಿಬ್ಬರು ವೇಶ್ಯಾಗೃಹದ ಮಾಲಿಕರು.
ಇವರು ವೇಶ್ಯಾವಾಟಿಕೆ ಜಾಲವನ್ನು ಮೈಸೂರಿನಲ್ಲಿ ಮಾತ್ರವಲ್ಲ ಬೆಂಗಳೂರು, ಪಿರಿಯಾಪಟ್ಟಣ, ಮಡಿಕೇರಿ, ಹುಣಸೂರು ಮತ್ತಿತರ ಪ್ರದೇಶದಲ್ಲಿಯೂ ಪಸರಿಸಿದ್ದಾರೆ ಎಂದು ಮೈಸೂರಿನ ಸುಪರಿಂಟೆಂಡೆಂಡ್ ಆಫ್ ಪೊಲೀಸ್ ಆರ್ ದಿಲೀಪ್ ಅವರು ತಿಳಿಸಿದರು.
ಎಲ್ಲ ಬಾಂಗ್ಲಾ ನಾಗರಿಕರ ಬಳಿ ತಾವು ಭಾರತೀಯರೆಂದು ತೋರಿಸಲು ವಾಹನ ಚಾಲನೆ ಲೈಸೆನ್ಸ್, ಆಧಾರ ಕಾರ್ಡ್ ಎಲ್ಲ ಇವೆ. ಇವರಿಗೆ ಭಾರತದ ಗುರುತಿನ ಚೀಟಿಗಳನ್ನು ಹೇಗೆ ವಿತರಿಸಲಾಯಿತು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications