ಮಲ್ಯರತ್ತ ಅಂಬಾನಿ ನೋಟ; ಇಂದೇನಾಗುವುದೋ?

mukesh-ambani-may-save-kingfisher-airlines
ಮುಂಬೈ, ಏ.12: ಕಿಂಗ್ ಫಿಷರ್ ಏರ್ ಲೈನ್ಸ್ ಸಂಕಷ್ಟದಿಂದ ಪಾರಾಗುವುದು ಯಾವಾಗ? ಪಾತಾಳದಲ್ಲಿರುವ ಮಲ್ಯ ಸಾಹೇಬರಿಗೆ ಹೊಸ ಆಪತ್ಬಾಂಧವ ಸಿಕ್ಕಿದ್ದಾರೆಯೇ? ನೆಲಕಚ್ಚಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಮಾಲೀಕ ವಿಜಯ್ ಮಲ್ಯ ಅವರನ್ನು ಕೈಹಿಡಿದು, ಮೇಲೆಬ್ಬಿಸಲು ರಿಲಯನ್ಸ್ ಇಂಡಸ್ಟ್ರೀಸ್ ಒಡೆಯ ಮುಕೇಶ್ ಅಂಬಾನಿ ಮುಂದಾಗಿದ್ದಾರೆಯೇ?

ಈ ಮಧ್ಯೆ, ಗುರುವಾರ (12 April) ಕಿಂಗ್ ಫಿಷರ್ ಏರ್ ಲೈನ್ಸ್ ಸೇರಿದಂತೆ ದೇಶದ ವಿಮಾನೋದ್ಯಮಕ್ಕೆ ಮಹತ್ವದ ದಿನವಾಗಿದೆ. ವಿದೇಶಿ ಹೂಡಿಕೆದಾರರು ಶೇ. 49ರಷ್ಟು ಬಂಡವಾಳ ಹೂಡಿಕೆಗೆ ಅವಕಾಶ ನೀಡುವುದಕ್ಕೆ ಅಂಕಿತ ಬೀಳುವ ಸಾಧ್ಯತೆಯಿದೆ. ಭಾರತ ಸರಕಾರ ಇಂದು ಈ ಸಂಬಂಧ ನಿರ್ಣಯ ಕೈಗೊಳ್ಳಲಿದೆ.

ದೇಶದ ಆರ್ಥಿಕ ರಾಜಧಾನಿಯಲ್ಲಿನ ವಿದ್ಯಮಾನಗಳನ್ನು ಗಮನಿಸಿದರೆ ಇದು ಸಾಧ್ಯ ಎನಿಸುತ್ತಿದೆ. ವರದಿಗಳ ಪ್ರಕಾರ ಭಾರತದ ಅತ್ಯಧಿಕ ಧನಿಕ ಉದ್ಯಮಿ ಮುಕೇಶ್ ಗೋತಾ ಹೊಡೆಯುತ್ತಿರುವ ಕಿಂಗ್ ಫಿಷರ್ ವಿಮಾನಕ್ಕೆ ಇಂಧನ ತುಂಬುವ ಸಾಧ್ಯತೆಗಳು ಹೆಚ್ಚಾಗಿವೆ.

ಮೊನ್ನೆ IPL matchನಲ್ಲಿ ಈ ಉದ್ಯಮಿಗಳು ಸಂಧಿಸಿದ್ದರು ಎನ್ನಲಾಗಿದೆ. ಇವರಿಬ್ಬರೂ ವ್ಯಾವಹಾರಿಕವಾಗಿಯೂ match ಆಗಿದ್ದಾರೆ ಎನ್ನಲಾಗಿದೆ. ಸ್ಟೇಡಿಯಂನಲ್ಲಿ ಶುರುವಾದ ಮಾತು ರಿಲಯನ್ಸ್ ಬೋರ್ಡ್ ರೂಮಿಗೂ ತಲುಪುವ ನಿರೀಕ್ಷೆಯಿದೆ. ಈ ಸುದ್ದಿ ಹಬ್ಬುತ್ತಿದ್ದಂತೆ ಕಿಂಗ್ ಫಿಷರ್ ಷೃರು ಮೌಲ್ಯ ಶೇ. 7.5ರಷ್ಟು ಗಗನದತ್ತ ಚಿಮ್ಮಿದೆ.

ಈ ಹಿಂದೆಯೂ ಕಿಂಗ್ ಫಿಷರ್ ಏರ್ ಲೈನ್ಸ್ ಖರೀದಿ ಮಾತುಕತೆಗಳು ಉದ್ಯಮ ರಂಗದಲ್ಲಿ ಕೇಳಿಬಂದಿದ್ದವು. ಕಳೆದ ನವೆಂಬರಿನಲ್ಲಿ ಕಿಂಗ್ ಫಿಷರ್ ಜತೆ ರಿಲಯನ್ಸ್ ಹೆಸರೂ ತಳುಕು ಹಾಕಿಕೊಂಡಿತ್ತು. ಜತೆಗೆ ಕೊಲ್ಲಿ ರಾಷ್ಟ್ರಗಳ ಎತಿಹಾದ್ ಏರ್ ವೇಸ್, ಸಿಂಗಾಪುರ್ ಏರ್ ಲೈನ್ಸ್, ಇಂಟರ್ ನ್ಯಾಷನಲ್ ಏರ್ ಲೈನ್ಸ್ ಗ್ರೂಪ್ (ಬ್ರಿಟಿಷ್ ಏರ್ ವೇಸ್ ಮತ್ತು ಐಬೆರಾ ಸಮೂಹ) ಮತ್ತು ಹಾಂಕಾಂಗಿನ ಹಣಕಾಸು ಸಂಸ್ಥೆಯೊಂದು ಸಂಭಾವ್ಯ ಖರೀದಿ ಸಂಸ್ಥೆಗಳಾಗಿ ಹೊರಹೊಮ್ಮಿದ್ದವು. ಆದರೆ ನಾನಾ ಕಾರಣಗಳಿಗಾಗಿ ಅದು ಕೈಗೂಡಿರಲಿಲ್ಲ.

ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಕಿಂಗ್ ಫಿಷರ್ ಏರ್ ಲೈನ್ಸ್ ಗೆ ಆರ್ಥಿಕ ನೆರವು ಬೇಕೇಬೇಕಾಗಿದೆ. ಅದೊಮ್ಮೆ 60 ವಿಮಾನಗಳನ್ನು ಹಾರಿಸುತ್ತಿದ್ದ ಮಲ್ಯ ಸಾಹೇಬರು ಈಗ ಕೇವಲ ಬೆರಳೆಕಿಯಷ್ಟು ವಿಮಾನಗಳನ್ನು ಸಾಕಷ್ಟು ಅಳೆದೂಸುರಿದೂ ಹಾರಿಬಿಡುತ್ತಿದ್ದಾರೆ. ದೈನಂದಿನ ಆಡಳಿತ ಬಹುತೇಕ ಸ್ಥಗಿತಗೊಳ್ಳುವ ಹಂತಕ್ಕೆ ಬಂದು ನಿಂತಿದೆ. ಅಸಲಿಗೆ ಕಿಂಗ್ ಫಿಷರ್ ಏರ್ ಲೈನ್ಸ್ ಕಂಪನಿ ಬರೋಬ್ಬರಿ 7,000 ಕೋಟಿ ರು. ಸಾಲವನ್ನು ಮೈಮೇಲೆ ಹಾಕಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+