ಕೆಫೆ ಕಾಫಿ ಡೇ vs ಟಾಟಾ ಸ್ಟಾರ್ ಬಕ್ಸ್ ಸಮರ

ಅಮೆರಿಕ ಖ್ಯಾತ ಕಾಫಿ ಮಳಿಗೆ ಸ್ಟಾರ್ ಬಕ್ಸ್ ಈಗ ಟಾಟಾ ಸಂಸ್ಥೆ ಜೊತೆ ಜಂಟಿಯಾಗಿ ಕಣಕ್ಕಿಳಿಯುತ್ತಿದೆ. ಸುಮಾರು 400 ಕೋಟಿ ರು ಬಂಡವಾಳ ಹೂಡಿಕೆ ಮಾಡಲಿರುವ ಸ್ಟಾರ್ ಬಕ್ಸ್ 2012ರಲ್ಲಿ 50 ಮಳಿಗೆಗಳನ್ನು ಆರಂಭಿಸುವ ಉತ್ಸಾಹದಲ್ಲಿದೆ. 3,000 ದಿಂದ 3,500 ಚ.ಅಡಿ ವಿಸ್ತೀರ್ಣದ ಮಳಿಗೆಗಳಲ್ಲಿ ಗ್ರಾಹಕರಿಗೆ ಕಾಫಿ ನೀಡಲು ಸ್ಟಾರ್ ಬಕ್ಸ್ ಯೋಜಿಸಿದೆ.
ಇನ್ನೊಂದೆಡೆ ಕೆಫೆ ಕಾಫಿ ಡೇ ಕಾಫಿ ಶಾಪ್ ನಡೆಸುವ ಅಮಾಲ್ಗಮೇಟೆಡ್ ಬಿನ್ ಕೋ ಸಂಸ್ಥೆ ಮಾಲೀಕ ವಿಜಿ ಸಿದ್ದಾರ್ಥ ಅವರು ಮಳಿಗೆಗಳ ಮಾದರಿ ಬದಲಾವಣೆಗೆ ಮುಂದಾಗಿದ್ದಾರೆ.
ಸ್ಕ್ವೇರ್ ಮಾದರಿ ಮಳಿಗೆ(2000 ಚ.ಅ ವಿಸ್ತೀರ್ಣ ಬೇಕಾಗುತ್ತದೆ) ಆರಂಭಿಸಿ ಮೂರು ವರ್ಷವಾದರೂ ಗ್ರಾಹಕರ ಪ್ರತಿಕ್ರಿಯೆ ಅಷ್ಟು ಪೂರಕವಾಗಿಲ್ಲ ಎಂದು ಕೆಫೆ ಕಾಫಿಡೇ ಮಾರುಕಟ್ಟೆ ವಿಭಾಗದ ಅಧ್ಯಕ್ಷ ರಾಮಕೃಷ್ಣ ಕೆ ಹೇಳುತ್ತಾರೆ.
ಹೀಗಾಗಿ ಹೆಚ್ಚೆಚು ಲಾಂಜ್ ಮಾದರಿ ಮಳಿಗೆ ತೆರೆಯಲು ಸಿಸಿಡಿ ನಿರ್ಧರಿಸಿದೆ ಎನ್ನಲಾಗಿದೆ. ಆದರೂ ಸ್ಕ್ವೇರ್ ಆಗಲಿ ಲಾಂಜ್ ಆಗಲಿ ನೆಚ್ಚಿನ ಕಾಫಿ ಮಾತ್ರ ಗ್ರಾಹಕರಿಗೆ ಲಭ್ಯವಾಗುತ್ತೆ ಬೇರೆ ಏನೂ ಇಲ್ಲ ಎಂದು ರಾಮಕೃಷ್ಣ ನಗೆ ಚಟಾಕಿ ಹಾರಿಸುತ್ತಾರೆ.












Click it and Unblock the Notifications