ಮಂಡ್ಯ ಮೇಡಂ ಗರ್ಭಿಣಿ: ನೀತಿ ಪಾಠವೇನು?

mandya-madam-student-love-story-pregnant
ಬೆಂಗಳೂರು, ಏ.7: ಅಪ್ರಾಪ್ತ ವಯಸ್ಸಿನ ಶಿಷ್ಯನೊಂದಿಗೆ ಚಕ್ಕಂದಕ್ಕೆ ಇಳಿದ ಕಾಮರ್ಸ್ ಸ್ನಾತಕೋತ್ತರ ಪದವೀಧರೆ ಗರ್ಭಿಣಿಯಾಗಿದ್ದಾಳಂತೆ! ಮಾತೃ ದೇವೋಭವ, ಗುರು ದೇವೋಭವ ಎಂದು ಹಿರಿಯರು ಹೇಳಿರುವ ಮಾತಿಗೆ ಕಳಂಕ ಬಾರದಿರಲಿ ಎಂದುಕೊಳ್ಳುತ್ತಾ TV9ನಲ್ಲಿ ನಿನ್ನೆ ಪ್ರಸಾರವಾದ ಈ ಮೇಡಂ-ಶಿಷ್ಯನ ಕಾಮಾಯಣದ ಬಗ್ಗೆ ನಾಲ್ಕು ಮಾತು ಹೇಳೋಣವೆನಿಸಿ ಈ ಪತ್ರ ಬರೆಯುತ್ತಿರುವೆ.

18 ವರ್ಷದ ಚೇತನ ಮತ್ತು 24 ವರ್ಷದ ಹೇಮಲತಾ ಒಂದೇ ಗ್ರಾಮದವರಂತೆ (ಅರೆಕೆರೆ). ಇಬ್ಬರೂ ಪಕ್ಕದ ಕೊಡಿಯಾಲ ಊರಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ದಿನಾ ಹೋಗಿ ಬಂದು ಮಾಡುತ್ತಿದ್ದರಂತೆ. ಕಾಲೇಜಿನಲ್ಲಿ ಚೇತನ ಪಿಯುಸಿ ವಿದ್ಯಾರ್ಥಿ, ಹೇಮಾ ಅವನಿಗೆ ಪಾಠ ಮಾಡುವ ಮೇಡಂ.

ಇಂತಿಪ್ಪ ಚೇತನ-ಹೇಮಾ ಕಾಲಾಂತರದಲ್ಲಿ ಪ್ರೇಮಿಗಳಾಗಿ ಮಾರ್ಪಡುತ್ತಾರೆ. ಅದೇ ಈ ಕಥೆಯ ಸ್ವಾರಸ್ಯ, ದೌರ್ಭಾಗ್ಯ, ಕೊನೆಗೆ ಛೀ ಎಂಬ ಹೇಸಿಗೆಯ ಭಾವ. ಮೇಡಂ ಹೇಮಾಳತ್ತ ಅಸಹ್ಯದ ಭಾವ.

ನೋಡಿ, ಈ ಅಪ್ರಾಪ್ತ ವಯಸ್ಸಿನ ಚೇತನ ಇದಾನಲ್ಲ, ಇವನು ಗುರುಭ್ಯೋ ನಮ: ಎನ್ನುವ ಬದಲು ಆ ಮೇಡಂಗೇ ಬಾಣ ಬಿಡುತ್ತಾನೆ. ಮೇಡಂ ಹೇಮಾರನ್ನು ಕಾಡಿಬೇಡಿ, ಪ್ರೇಮಕ್ಕಾಗಿ ಪುಸಲಾಯಿಸುತ್ತಾನೆ. ಪಾಪ, ಈ ಅಮಾಯಕ ಮೇಡಂ ಅವನ ಪ್ರೇಮಪಾಶದಲ್ಲಿ ಬೀಳುತ್ತಾಳೆ. ಒಲ್ಲೆ ಒಲ್ಲೆ ಎನ್ನುತ್ತಲೇ ತನ್ನ ಸ್ಟೂಡೆಂಟ್ ಪ್ರೇಮಕ್ಕೆ ಸಹಕರಿಸುತ್ತಾಳೆ. ಅವನೂ ಸರಿಯಾಗಿಯೇ ಕಾವುಕೊಡುತ್ತಾನೆ.

ಪಾಠದ ನೀತಿ ಏನಪ್ಪಾ?: ಇಷ್ಟಾಗಿ ವಿದ್ಯಾವಂತೆ, ಸುಲಕ್ಷಣ ಸಂಪನ್ನೆ ಹೇಮಾ ಮೇಡಂಗೆ ತಾನು ಮಣ್ಣು ತಿನ್ನುವ ಕೆಲಸ ಮಾಡುತ್ತಿರುವುದು ಅರಿವಿಗೆ ಬರುವುದೇ ಇಲ್ಲ. ಊರಲ್ಲಿ ಇವರಿಬ್ಬರೂ ರಾತ್ರಿ 7-8 ಗಂಟೆಯಾದರೂ ಮನೆಗೆ ಹೋಗದೆ ಬೀದು ಸುತ್ತುವುದನ್ನು ಊರ ಮಂದಿ ಮೂಕವಿಸ್ಮಿತರಾಗಿ ನೋಡುತ್ತಾರೆ.

ಮುಂದೆ ಒನ್ ಫೈನ್ ನೈಟ್ (2 ತಿಂಗಳ ಹಿಂದೆ ಫೆ.7 ರಂದು) ಹೇಮಾ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಚೇತನ ಪ್ರವೇಶಿಸಿ, ಹೇಮಾಳ ಬಾಳಲ್ಲೂ ನೇರವಾಗಿ ಪ್ರವೇಶಿಸುತ್ತಾನೆ. ಇಷ್ಟಾಗಿ ಮೇಡಂಗೆ ತಾನು ತಪ್ಪು ಮಾಡುತ್ತಿದ್ದೇನೆ ಅನಿಸುವುದಿಲ್ಲ. ಚೇತನನಿಗೆ ಸಂಪೂರ್ಣವಾಗಿ ಸಹಕರಿಸಿ, ಮೈಮರೆಯುತ್ತಾಳೆ. ಅದರ ಫಲವಾಗಿ ಮೇಡಂ ಪ್ರೇಮಾ ಈಗ 2 ತಿಂಗಳ ಗರ್ಭಿಣಿ.

ಮೇಡಂಗೆ ಈಗ ಜ್ಞಾನೋದಯವಾಗಿದೆ. ವಿಷಯ ತಿಳಿದ ಚೇತನ ಪರಾರಿಯಾಗಿದ್ದಾನೆ. 'ಅಮಾಯಕ' ಮೇಡಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ, ಮುಂದ !?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+