ಗಡಾಫಿ ರೇಪ್ ರಹಸ್ಯ ಬಿಚ್ಚಿಟ್ಟ ಜರ್ಮನ್ ವಿಡಿಯೋ

ಅದರಲ್ಲೂ ಗಡಾಫಿ ಬೆಡ್ ರೂಮ್ ರಹಸ್ಯ ತಿಳಿಯಲು ಇಡೀ ವಿಶ್ವವೇ ಕಿವಿ ತೆರೆದಿದೆ. ಸುಮಾರು 40 ವರ್ಷಗಳ ಕಾಲ ಸರ್ವಾಧಿಕಾರಿಯಾಗಿ ಮೆರೆದ ಗಡಾಫಿ, ರೇಪ್ ಮಾಡಿದ ಹೆಂಗಸರ ಸಂಖ್ಯೆ ಎಣಿಕೆಗೆ ಸಿಗುವುದಿಲ್ಲ ಎಂದು ಹೊಸ ವಿಡಿಯೋ ಸಾರುತ್ತಿದೆ.
ಗಡಾಫಿಯ ಆಂತರಿಕ ವಲಯದ ವ್ಯಕ್ತಿಗಳ ಜೊತೆಗಿನ ಸಂದರ್ಶನವುಳ್ಳ ಈ ವಿವಾದಿತ ಡ್ಯಾಕುಮೆಂಟರಿ ವಿಡಿಯೋವನ್ನು ಪ್ರಸಾರ ಮಾಡಲು ಜರ್ಮನ್ನಿನ ಆರ್ ಟಿಎಲ್ ತುದಿಗಾಲಲ್ಲಿ ನಿಂತಿದೆ.
ಆರ್ ಟಿಎಲ್ ರಿಪೋರ್ಟರ್ ಅಂಟೋನಿಯೋ ರಾಡೊಸ್ ಪ್ರಕಾರ, ಲಿಬಿಯಾದಲ್ಲಿ ಗಡಾಫಿ ಜನಪ್ರಿಯತೆಯ ತುತ್ತತುದಿಯಲ್ಲಿದ್ದ ಕಾಲದಲ್ಲಿ ಅನೇಕ ಮಹಿಳೆಯರು ಆತನ ಬಳಿ ಕಷ್ಟ ಸುಖ ಹೇಳಿಕೊಳ್ಳಲು ಬರುತ್ತಿದ್ದರು. ಹೀಗೆ ಬಂದ ಸಂದರ್ಶಕರೆಲ್ಲರನ್ನು ಗಡಾಫಿ ಮಂಚಕ್ಕೆಳೆದು ಸಂಭೋಗಿಸುತ್ತಿದ್ದ.
ಅಷ್ಟೇ ಅಲ್ಲದೆ ಅಮೇಜಾನ್ ಬಾಡಿಗಾರ್ಡ್ ಗಳನ್ನು ಹೊಂದಿದ್ದ ಗಡಾಫಿ ಅವರನ್ನು ಕೂಡಾ ಕಾಮಕ್ರೀಡೆಯಲ್ಲಿ ಜಯಸಿದರೆ ಮಾತ್ರ ಉದ್ಯೋಗದಲ್ಲಿರಿಸಿಕೊಳ್ಳುತ್ತಿದ್ದ. ಸದಾ ಸುಂದರ ಸ್ತ್ರೀಯರು ಅಕ್ಕ ಪಕ್ಕ ಇರಲೇ ಬೇಕಿತ್ತು ಎಂದು ಲಿಬಿಯಾದ ಮನಃಶಾಸ್ತ್ರಜ್ಞ ಡಾ ಸೆಹಂ ಸೆರ್ ಗೆವಾ ಹೇಳಿದ್ದಾರೆ.
ಉಕ್ರೇನಿನ ನರ್ಸ್ ಗಳು ಈಗಾಗಲೇ ಗಡಾಫಿ ಲೋಲುಪತೆ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ. ತನ್ನ ವಿರುದ್ಧ ಹೇಳಿಕೆ ನೀಡುವ ಜನರನ್ನು ಬಲಾತ್ಕರಿಸುವಂತೆ ತನ್ನ ಸೇನೆಗೆ ಗಡಾಫಿ ಆದೇಶ ನೀಡಿದ್ದ ಎನ್ನಲಾಗಿದೆ.












Click it and Unblock the Notifications