ಟಿವಿ ಜಾಹೀರಾತುಗಳಿಗೆ ಟ್ರಾಯ್ ಕಡಿವಾಣ

ಜಾಹೀರಾತುಗಳ ಹಾವಳಿಗೆ ಬೇಸತ್ತ ಟಿವಿ ವೀಕ್ಷಕರಿಂದ ಟ್ರಾಯ್ ಗೆ ಪದೇ ಪದೇ ದೂರುಗಳು ಬಂದ ಪರಿಣಾಮ ಈ ಹೊಸ ನಿಯಮ ಜಾರಿಗೊಳ್ಳುವ ಸಾಧ್ಯತೆಯಿದೆ. ಅನಗತ್ಯವಾಗಿ ಟಿವಿ ಆಡ್ಸ್ ಹೆಚ್ಚು ಹಾಕುವಂತಿಲ್ಲ.
ಜಾಹೀರಾತು ಬಿತ್ತರಿಸುವ ಸಮಯ ಹಾಗೂ ಅವಧಿಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕಾರ್ಯಕ್ರಮದ ಮಧ್ಯೆ ಜಾಹೀರಾತು ಎಷ್ಟು ಕಾಲ ಇರಬೇಕು. ಯಾವ ರೀತಿ ಇರಬೇಕು. ಎಷ್ಟು ಸಾರಿ ಕಾಣಿಸಿಕೊಳ್ಳಬೇಕು ಎಂಬುದರ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗುತ್ತದೆ.
ಉದಾಹರಣೆಗೆ ಕ್ರಿಕೆಟ್ ಮ್ಯಾಚ್ ಲೈವ್ ಬರುತ್ತಿರುವ ಸಂದರ್ಭದಲ್ಲಿ ಓವರ್ ಇನ್ನು ಮುಗಿಯುವ ಮೊದಲೇ ವಾಣಿಜ್ಯ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಕತ್ತರಿ ಬೀಳಲಿದೆ.
ಇದೇ ರೀತಿ ಸಿನಿಮಾ ಹಾಗೂ ಧಾರಾವಾಹಿ ಮಧ್ಯೆದಲ್ಲಿ ಬರುವ ಜಾಹೀರಾತು ಹಾವಳಿಗೂ ಕಡಿವಾಣ ಬೀಳಲಿದೆ.
ಕೇಬಲ್ ಟೆಲಿವಿಷನ್ ನೆಟ್ವರ್ಕ್ ರೂಲ್ಸ್ 1994 ರ ಪ್ರಕಾರ ಪ್ರತಿ ಗಂಟೆಗೆ 12 ನಿಮಿಷಕ್ಕಿಂತ ಹೆಚ್ಚು ಕಾಲ ಜಾಹೀರಾತು ಪ್ರಸಾರ ಮಾಡುವಂತಿಲ್ಲ ಎಂಬ ನಿಯಮವಿದೆ.
ಜಾಹೀರಾತು ಅವಧಿ ಹೆಚ್ಚಳ ಹಾಗೂ ಸೆನ್ಸಾರ್ ಇಲ್ಲದ ಆಡ್ಸ್ ಗಳಿಂದ ಗ್ರಾಹಕರಿಗೆ(ವೀಕ್ಷಕ) ತೊಂದರೆ ನೀಡಬಾರದು ಎಂದು ಟ್ರಾಯ್ ಎಚ್ಚರಿಸಿದೆ.












Click it and Unblock the Notifications