ಯುಎಸ್ ಹಾದಿ ಹಿಡಿದ ಯುಕೆ, ಇಂಡಿಯನ್ಸ್ ಗೆ ಕೆಲ್ಸ ಏಕೆ?

ವಿದೇಶಿಯರ ವಲಸೆಯನ್ನು ಕಡಿತಗೊಳಿಸಿ, ಆರ್ಥಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ಯಾಮರೂನ್ ಸರಕಾರದ ಈ ಹೊಸ ನೀತಿಯನ್ನು ಜಾರಿಗೊಳಿಸಿದೆ. ಹೊಸ ನೀತಿ ಭಾರತೀಯ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯಿಂದಲೂ ಮಾರಕವಾಗುವ ಸಾಧ್ಯತೆಯಿದೆ.
ಕಲಿಕೆಯ ಬಳಿಕ ಕೆಲಸ ಎಂಬ ವಿಧಾನ ಮೂಲಕ ಭಾರತೀಯ ಮತ್ತು ಐರೋಪ್ಯ ಒಕ್ಕೂಟ ದೇಶಗಳ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮುಗಿಸಿದ ಬಳಿಕ ಬ್ರಿಟನ್‌ನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಲು ಅವಕಾಶವಿತ್ತು. ಆದರೆ ಈ ವಿಧಾನಕ್ಕೆ ಶುಕ್ರವಾರ(ಏ.6) ಕತ್ತರಿ ಬೀಳಲಿದೆ.
ವಿದೇಶಿ ವಿದ್ಯಾರ್ಥಿಗಳು ಬ್ರಿಟನ್ ಆರ್ಥಿಕತೆಗೆ ಪ್ರತಿ ವರ್ಷ 1400 ಕೋಟಿ ಪೌಂಡ್ ದೇಣಿಗೆ ನೀಡುತ್ತಿದ್ದಾರೆ. ಸರಕರದ ಪ್ರಸ್ತಾಪವನ್ನು ಬ್ರಿಟನ್‌ನ ವಿಶ್ವವಿದ್ಯಾನಿಲಯಗಳು ಮತ್ತು ಬ್ರಿಟಿಶ್ ಕೌನ್ಸಿಲ್ ವಿರೋಧಿಸಿದೆ.ವಿದ್ಯಾಕೇಂದ್ರವಾಗಿ ಬ್ರಿಟನ್‌ನ ಆಕರ್ಷಣೆಯನ್ನು ಭಾರತೀಯ ಮತ್ತು ಐರೋಪ್ಯ ಒಕ್ಕೂಟೇತರ ದೇಶಗಳ ವಿದ್ಯಾರ್ಥಿಗಳಲ್ಲಿ ಕಡಿಮೆ ಮಾಡುತ್ತದೆ ಎನ್ನಲಾಗಿದೆ.












Click it and Unblock the Notifications