ಯಾಹೂನಿಂದ 2000 ನೌಕರರಿಗೆ ಪಿಂಕ್ ಸ್ಲಿಪ್

ಈ ರೀತಿ ಪಿಂಕ್ ಸ್ಲಿಪ್ ನೀಡುವ ಕಾರ್ಯಕ್ರಮದಿಂದ ವಾರ್ಷಿಕವಾಗಿ ಸುಮಾರು 375 ಮಿಲಿಯನ್ ಡಾಲರ್ ಉಳಿಸಲು ಹೊಸ ಸಿಇಒ ಸ್ಕಾಟ್ ಥಾಮಸನ್ ಯೋಜನೆ ಹಾಕಿಕೊಂಡಿದ್ದಾರೆ.
ಕ್ಯಾಲಿಫೋರ್ನಿಯಾ ಮೂಲದ ಯಾಹೂ ಕಂಪನಿಯಲ್ಲಿ ಸುಮಾರು 14,100 ಫುಲ್ ಟೈಮ್ ಉದ್ಯೋಗಿಗಳಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಇಂಟರ್ ನೆಟ್ ದಿಗ್ಗಜ ಯಾಹೂ ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಯಾಹೂ ಸಂಸ್ಥೆ ನಿರ್ವಹಣೆಯನ್ನು ಪುನರ್ ರಚನೆ ಮಾಡಲಾಗುತ್ತದೆ.
ಯಾಹೂ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಏ.17ರಂದು ಪ್ರಕಟಿಸುವ ಸಾಧ್ಯತೆಯಿದೆ.
ಇಬೇ ಆದಾಯವನ್ನು ಡಬಲ್ ಮಾಡಿ, 100 ಮಿಲಿಯನ್ ಗೂ ಅಧಿಕ ಗ್ರಾಹಕರನ್ನು ಅಕರ್ಷಿಸಿದ ಸ್ಕಾಟ್ ಥಾಮಸನ್ ಈಗ ಯಾಹೂ ಸಂಸ್ಥೆ ಉದ್ಧಾರ ಮಾಡಲು ಸಕತ್ ಯೋಜನೆ ಹಾಕಿಕೊಂಡಿದ್ದಾರೆ.
ಫೇಸ್ ಬುಕ್ ಹಾಗೂ ಗೂಗಲ್ ನಿಂದ ಪ್ರತಿಸ್ಪರ್ಧೆ ಎದುರಿಸುತ್ತಿರುವ ಯಾಹೂ ಈಗ ತನ್ನ ಗಮನವನ್ನು ಮಾಧ್ಯಮ ಹಾಗೂ ಜಾಹೀರಾತು ಕ್ಷೇತ್ರದತ್ತ ಹರಿಸಲು ಯೋಜಿಸಿದೆ ಎಂಬ ಸುದ್ದಿ ಇದೆ.












Click it and Unblock the Notifications