ಬರ ಪರಿಹಾರ: ಯಾವ ಸಚಿವರು ಯಾವ ಜಿಲ್ಲೆಗೆ?

ಸಚಿವ ಜಗದೀಶ್ ಶೆಟ್ಟರ್ ನೇತೃತ್ವದ ತಂಡ: ಸಚಿವರಾದ ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಉದಾಸಿ- ಬಿಜಾಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಬೆಳಗಾವಿ, ದಾವಣಗೆರೆಗಳಲ್ಲಿ ಪ್ರವಾಸ.
ಸಚಿವ ಸುರೇಶ್ ಕುಮಾರ್ ನೇತೃತ್ವದ ತಂಡ: ಸಚಿವರಾದ ಅಶೋಕ್, ಎಸ್.ಎ. ರವೀಂದ್ರನಾಥ್, ಬಿ.ಎನ್. ಬಚ್ಚೇಗೌಡ - ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಪ್ರವಾಸ.
ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದ ತಂಡ: ಸಚಿವರಾದ ರೇವೂ ನಾಯಕ ಬೆಳಮಗಿ, ರಾಜುಗೌಡ, ಎಸ್.ಎ.ರಾಮದಾಸ್- ಗುಲ್ಬರ್ಗ, ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ, ಚಿತ್ರದುರ್ಗ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಸ.
ಈ ತಂಡಗಳಲ್ಲದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಹ ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದಾರೆ. ಆದರೆ ಇದು ಸರಕಾರದ ವತಿಯಿಂದಾಗಲಿ ಅಥವಾ ಪಕ್ಷದ ವತಿಯಿಂದಾಗಲಿ ಕೈಗೊಳ್ಳುತ್ತಿರುವ ಪ್ರವಾಸವಲ್ಲ. ಪ್ರವಾಸ ವರದಿಯನ್ನು ಹಾಲಿ ಸಿಎಂ ಸದಾನಂದ ಗೌಡರಿಗೆ ಸಲ್ಲಿಸುವುದಾಗಯೂ ಯಡಿಯೂರಪ್ಪ ಘೋಷಿಸಿದ್ದಾರೆ.












Click it and Unblock the Notifications