ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನನ್ನ ವಿರುದ್ಧವೇ ಸಂಚು; ಹೊಸ ಸೇನೆ ಕಟ್ಟುವೆ'

By Srinath
|
Google Oneindia Kannada News

plot-against-me-bsy-in-shimoga-nammabhimaana
ಶಿವಮೊಗ್ಗ, ಏ.1: ತವರು ನೆಲದಲ್ಲಿ ನಮ್ಮಭಿಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೀಗೆಂದರು - 'ಹೊಸ ಸೈನ್ಯ ಕಟ್ಟಬೇಕಾಗಿದೆ. ಬದಲಾವಣೆ ತರಬೇಕಾಗಿದೆ. ಜೊತೆಗೆ ನಾನೇ ಬದಲಾಗುತ್ತೇನೆ. ಆ ರೀತಿಯ ಸನ್ನಿವೇಶನವನ್ನು ಸೃಷ್ಟಿಸಿದ್ದಾರೆ ಎಂದು ಯಡಿಯೂರಪ್ಪ ಗುಡುಗಿದರು. ಇದೇ ವೇಳೆ ಯಡಿಯೂರಪ್ಪ ಹೊಸ ಪಕ್ಷ ಕಟ್ಟುತ್ತಾರೆ ಎಂದು ಭಾವಿಸಿಕೊಳ್ಳುವ ಅಗತ್ಯವಿಲ್ಲ. ಬಿಜೆಪಿಯಲ್ಲಿ ಹೊಸ ಮುಖಗಳು, ಪೀಳಿಗೆಗಳಿಗೆ ಆದ್ಯತೆ ಸಿಗಬೇಕಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಸಮಾರಂಭದಲ್ಲಿ 50 ಸಾವಿರಕ್ಕೂ ಅಧಿಕ ಅಭಿಮಾನಿಗಳು ಸೇರಿದ್ದರು. ಬೃಹತ್ ವೇದಿಕೆಯಲ್ಲಿ 150ಕ್ಕೂ ಹೆಚ್ಚು ಗಣ್ಯರು ಆಸೀನರಾಗಿದ್ದರು. ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಚಿವರಾದ ಸಿ.ಎಂ. ಉದಾಸಿ, ರೇಣುಕಾಚಾರ್ಯ, ಬಸವರಾಜ ಬೊಮ್ಮಾಯಿ, ರಾಜೂಗೌಡ, ಸಂಸದರಾದ ಜಿ.ಎಂ. ಸಿದ್ದೇಶ್, ಜಿ.ಎಸ್. ಬಸವರಾಜ, ಜನಾರ್ದನಸ್ವಾಮಿ, ಬಿ.ವೈ. ರಾಘವೇಂದ್ರ, ಮಾಜಿ ಸಚಿವ ಸಿ.ಸಿ. ಪಾಟೀಲ, ಚಿತ್ರ ನಟಿ ಶ್ರುತಿ, ಉರ್ದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಮ್ಜದ್ ಹುಸೇನ್ ಹಾಫಿಜ್ ಕರ್ನಾಟಕಿ, ಶಾಸಕರಾದ ಹಾಲಪ್ಪ, ಬೇಳೂರು ಗೋಪಾಲಕೃಷ್ಣ, ಬಿ.ಪಿ. ಹರೀಶ್, ಕೆ.ಜಿ. ಕುಮಾರಸ್ವಾಮಿ, ಭಾರತಿಶೆಟ್ಟಿ, ಡಿ.ಎಸ್. ವೀರಯ್ಯ, ಚಂದ್ರಕಾಂತ್ ಬೆಲ್ಲದ್, ಲಕ್ಷ್ಮೀನಾರಾಯಣ, ಪ್ರೊ.ಬಿ.ಎಂ. ಕುಮಾರಸ್ವಾಮಿ ಇತರರು ಇದ್ದರು.

ಅಭಿನಂದನಾ ಸಮಿತಿ ಸಂಚಾಲಕ ಹಾಗೂ ಉದ್ಯಮಿ ರುದ್ರೇಗೌಡ ಮತ್ತು ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಉಪಸ್ಥಿತರಿದ್ದರು. ದಲಿತಕವಿ ಸಿದ್ದಲಿಂಗಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಯಡಿಯೂರಪ್ಪರನ್ನು ಹಾಡಿ ಹೊಗಳಿದರು. 'ನಾನಿಲ್ಲಿ ಸಕಲ ಕನ್ನಡಿಗರ ಪರವಾಗಿ ಯಡಿಯೂರಪ್ಪನವರನ್ನು ಅಭಿನಂದಿಸಲು ಆಗಮಿಸಿದ್ದೇನೆ' ಎಂದು ಘೋಷಿಸಿದರು.

'ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ್ದರೆ ಅದು ಯಡಿಯೂರಪ್ಪನವರ ಸಿಂಹ ಘರ್ಜನೆಯಿಂದ. ಇದರಿಂದಾಗಿ ಕನ್ನಡ ಸದೃಢವಾಯಿತು. ಜೊತೆಗೆ ರಾಜ್ಯದ 11 ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ಕನ್ನಡ ಭಾಷೆ ಸದೃಢಗೊಳಿಸಲು ಶ್ರಮಿಸಿದ್ದಾರೆ' ಎಂದರು.

ಆಧುನಿಕ ಬಸವಣ್ಣ
: ಸಚಿವ ರಾಜೂಗೌಡ ಮಾತನಾಡಿ ಯಡಿಯೂರಪ್ಪ ಆಧುನಿಕ ಬಸವಣ್ಣ. ಅವರು ಸಮಾಜದ ಎಲ್ಲ ವರ್ಗದ ಜನರಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಚಿತ್ರನಟಿ ಶೃತಿ: ಯಾವ ಮುಖ್ಯಮಂತ್ರಿಗಳಿಗೂ ನೀಡದಷ್ಟು ಕಿರುಕುಳವನ್ನು ವಿಪಕ್ಷಗಳು ಯಡಿಯೂರಪ್ಪ ಅವರಿಗೆ ನೀಡಿವೆ. ಹೀಗಿದ್ದಾಗಿಯೂ ಮೂರೂವರೆ ವರ್ಷ ಯಶಸ್ವಿಯಾಗಿ ಯಡಿಯೂರಪ್ಪ ಆಡಳಿತ ನಡೆಸಿದ್ದಾರೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಬೇಕು ಎನ್ನುವ ಹೆಣ್ಣುಮಕ್ಕಳ ಕೂಗಿಗೆ ನಾನು ಧ್ವನಿಯಾಗಿದ್ದೇನೆ.

English summary
Former chief minister B S Yeddyurappa has said several honest persons are moving away from politics. “We need to change this as politics is in need of prompt persons. Besides, the BJP needs fresh faces who could change the destiny of the State' said BSY hinting to construct a new force in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X