ಕ್ಲೈಮ್ಯಾಕ್ಸ್ ಚೇಂಜ್ : ದೆಹಲಿಗೆ ಯಡಿಯೂರಪ್ಪ ಶಿಫ್ಟ್

ಯಡಿಯೂರಪ್ಪ ಅವರನ್ನು ರಾಜ್ಯ ರಾಜಕೀಯದಿಂದಲೇ ದೂರು ಇರಿಸುವ ಉದ್ದೇಶದಿಂದ ಪಕ್ಷದ ಕೇಂದ್ರಿಯ ಸಮಿತಿಯಲ್ಲಿ ಸ್ಥಾನಮಾನ ನೀಡುವ ಬಗ್ಗೆ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ.
ಇದೇ ಉದ್ದೇಶದಿಂದ ವರಿಷ್ಠರು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹಾಗೂ ಈಶ್ವರಪ್ಪರನ್ನು ಮಾ.31ಕ್ಕೆ ದೆಹಲಿಗೆ ಆಹ್ವಾನಿಸಿದ್ದಾರೆ. ಸದಾನಂದ ಅವರು ತಮ್ಮ ಆಪ್ತ ಸಹೋದ್ಯೋಗಿಗಳೊಂದಿಗೆ ದೆಹಲಿಗೆ ತೆರಳಲಿದ್ದಾರೆ.
ಪಕ್ಷದ ಸಂಘಟನೆಗಯಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಯಡಿಯೂರಪ್ಪ ಅವರನ್ನು ಕೇಂದ್ರ ಸಮಿತಿಯಲ್ಲಿ ಸೇರಿಸಿಕೊಂಡು ಹೆಚ್ಚಿನ ಪ್ರಯೋಜನ ಪಡೆಯುವ ಬಗ್ಗೆ ನಿತಿನ್ ಗಡ್ಕರಿ ಯೋಜಿಸಿದ್ದಾರೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ಯಾವುದಾದರೂ ರಾಜ್ಯದ ಹೊಣೆಗಾರಿಕೆ ವಹಿಸುವ ಸಾಧ್ಯತೆ ಇದೆ. ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದ ಬಳಿಕ ಈ ಪ್ರಕಟನೆ ಹೊರಬೀಳುವ ಸಾಧ್ಯತೆ ಇದೆ.
ಈ ನಡುವೆ ಮಾ.30ರ ಶುಕ್ರವಾರದಂದು ಎಲ್ಲ 121 ಶಾಸಕರನ್ನೂ ಯಡಿಯೂರಪ್ಪ ಅವರು ಚಹಾಕೂಟಕ್ಕೆ ಆಹ್ವಾನಿಸಿದ್ದಾರೆ. ಒಟ್ಟಿನಲ್ಲಿ ವಾರಾಂತ್ಯಕ್ಕೆ ಬಿಕ್ಕಟ್ಟಿನ ಬಿಸಿ ಏರಿಕೆಯಾಗುವುದಂತೂ ಗ್ಯಾರಂಟಿ..
ಯಡಿಯೂರಪ್ಪ ಅವರ ಬಗ್ಗೆ ಈ ನಿರ್ಧಾರ ಏಕೆ? ಮುಂದೆ ಓದಿ...












Click it and Unblock the Notifications