ಸಿಬಿಐನಿಂದ ಬಚಾವಾಗಲು ಹೈಕಮಾಂಡ್ಗೆ ಶರಣು

BS Yeddyurappa
ನವದೆಹಲಿ, ಮಾ.29: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಎಂ ಹಾಗೂ ಡಿಸಿಎಂ ಅಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮವಾಗಿ ಗಳಿಸಿದ ಆಸ್ತಿ ಈಗ ಕುತ್ತಿಗೆ ಸುತ್ತಿಕೊಳ್ಳತೊಡಗಿದೆ.

ಬಿಎಸ್ ವೈ ವಿರುದ್ಧದ ಲೋಕಾಯುಕ್ತ ಪೊಲೀಸರ ಹಾಕಿದ್ದ FIR ರದ್ದಾಗಿರಬಹುದು. ಉಳಿದ ಅಕ್ರಮಗಳ ತನಿಖೆ ಮುಗಿದಿಲ್ಲ. ಕೋರ್ಟ್ ಕೇಸ್ ಮುಗಿಯುವ ತನಕ ಅಡ್ವಾಣಿ, ಸುಷ್ಮಾ ಸ್ವರಾಜ್ ಹಾಗೂ ಇನ್ನಿತರರು ಯಡಿಯೂರಪ್ಪ ಪರ ಮತ ಹಾಕುವುದಿಲ್ಲ.

ಈ ವಿಷಯವನ್ನು ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಟ್ಟಿರುವ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ಇಷ್ಟು ದಿನವೇ ಕಾದಿದ್ದೀರಾ ಇನ್ನು 15 ದಿನ ಕಾಯಿರಿ ಎಂದಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತ ಸಿಇಸಿ ವರದಿ ಆಧಾರಿಸಿ ಸುಪ್ರೀಂಕೋರ್ಟ್ ಏನಾದರೂ ಸಿಬಿಐ ತನಿಖೆಗೆ ಆದೇಶಿಸಿದರೆ, ಯಡಿಯೂರಪ್ಪ ಅವರು ಯಾವ ಪಟ್ಟಕ್ಕೇರಿದ್ದರೂ ಕೆಳಗಿಳಿಯಬೇಕಾಗುತ್ತದೆ.

ಗಾಲಿ ರೆಡ್ಡಿಯಂತೆ ಸಿಬಿಐ ಗಾಳಕ್ಕೆ ಸಿಲುಕದೆ, ಜಗನ್ ಮೋಹನ್ ರೆಡ್ಡಿರಂತೆ ಸಿಬಿಐ ಕಬಂಧ ಬಾಹುವಿನಿಂದ ತಪ್ಪಿಸಿಕೊಳ್ಳಲು ಯಡಿಯೂರಪ್ಪ ಅವರು ಹೈ ಕಮಾಂಡ್ ಮೊರೆ ಹೊಕ್ಕಿದ್ದಾರೆ. ದೆಹಲಿಯ ಕಾನೂನು ಪಂಡಿತರ ಜೊತೆ ಯಡಿಯೂರಪ್ಪ ಪರ ವಕೀಲರು ಮಾತುಕತೆ ಆರಂಭಿಸಿದ್ದಾರೆ.

ಏಪ್ರಿಲ್ ಮೊದಲ ವಾರದ ನಂತರವಷ್ಟೇ ಯಡಿಯೂರಪ್ಪ ಅವರ ಭವಿಷ್ಯ ನಿರ್ಧಾರ ಸಾಧ್ಯ ಎಂಬುದು ಗಡ್ಕರಿಗೆ ಸ್ಪಷ್ಟವಾಗಿ ಗೊತ್ತಿದೆ. ಆತುರ ಮಾಡಿದರೆ ಅನಾಹುತ ಗ್ಯಾರಂಟಿ.

ಆದರೆ, ಲಕ್ಷ ಕೋಟಿ ಬಜೆಟ್ ನಲ್ಲಿ ಕೈಯಾಡಿಸಲು ಆಗದೆ ಕೈ ಕೈ ಹಿಸುಕಿಕೊಂಡ ಯಡಿಯೂರಪ್ಪ, ಈಗ ಡಿವಿ ಸದಾನಂದ ಗೌಡರು ತಮ್ಮ ಸಂಪುಟವನ್ನು ಪುನಾರಚಿಸುವ ಇಲ್ಲವೆ ವಿಸ್ತರಿಸುವ ಕಾರ್ಯಕ್ಕೆ ಮುಂದಾದರೆ ಯಡಿಯೂರಪ್ಪರ ತಳಮಳ ಇನ್ನು ಹೆಚ್ಚಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+